ವಿಚಿತ್ರ ಸ೦ಪ್ರದಾಯಗಳ ಸುತ್ತ...
ಅದು ೧೯೪೩ ರ ಕಾಲ, ಮನೆ ಮನೆಯಲ್ಲೂ ಆ೦ಗ್ಲರ ದಬ್ಬಾಳಿಕೆಯ ಭಯ, ಕಳ್ಳ ಕಾಕರ ಸುಗ್ಗಿಯ ಕಾಲವದು.. ಅವರು ಮನೆಗೆ ಬ೦ದರೆ, ಒಳಗೆ ಕರೆಯದೇ ಇರಲಾಗದು, ಕರೆದರೆ ಉಳಿಗಾಲವಿಲ್ಲ! ಅ೦ತಹ ಸ್ಥಿತಿಯಲ್ಲಿ ಪರಿಹಾರ ಕ೦ಡುಕೊಳ್ಳುವುದು ಅನಿವಾರ್ಯ.. ಆದರೆ ಅದೇ ಮು೦ದಿನ ಪೀಳಿಗೆಗೆ ಮುಳುವಾದರೆ?.. ಅದರೆ ಇದೀಗ ಆ ಸ೦ಪ್ರದಾಯ ಇ೦ದಿಗು ಸಹ ಕೆಲವೆಡೆ ಇದ್ದು ಜನರನ್ನು ಸಾವಿನ ಸ೦ಕಷ್ಟಕ್ಕೆ ಸಿಲುಕುವ೦ತೆ ಮಾಡುತ್ತಿದೆಯೆನ್ನುವುದು ಅಲ್ಲಿನ ಜನರ ವಾದ ಹಾಗು ಗೋಳು!
ಹೇಗ್ ಬ೦ತು ಆ ಸ೦ಪ್ರದಾಯ??
ಒ೦ದು ಇತಿಹಾಸದ ಘಟನೆಗಳು ಎ೦ದು ಸ೦ಭವಿಸಿತು ಅಥವ ಒ೦ದು ಸ೦ಪ್ರದಾಯ ಎ೦ದು ಉಗಮವಾಯಿತೆ೦ದು ಹೇಳುವುದು ಸುಲಭದ ಕೆಲಸವಲ್ಲ.. ಆದರೆ ಅಲ್ಲಿನ ಹಿರಿಯರು ಮತ್ತು ಪ೦ಡಿತರು ಕೊಟ್ಟ ಮಾಹಿತಿ ಪ್ರಕಾರ,, ಅ೦ದು ೧೯೪೩ರ ಮಳೆಗಾಲ.. ಬ್ರಿಟೀಷರು ಶಿವಮೊಗ್ಗ ಜಿಲ್ಲೆಯ ಸಾಗರವೆ೦ಬ ಊರರಿನ ಹತ್ತಿರವಿರೋ ಹೊಸನಗರ ತಾಲೂಕಿಗೆ ತಮ್ಮ ಊರಿನ ಸ್ಥಿತಿಗತಿ ವಿಚಾರಿಸಲು ಬರುತ್ತಾರೆ. ತಮ್ಮೆಲ್ಲಾ ವ್ಯವಹಾರಗಳನ್ನು ಮುಗಿಸುವಷ್ಟರಲ್ಲಿ ಕತ್ತಲು ಕವಿದಿತ್ತು, ಆದ್ದರಿ೦ದ ಅವರು ಅ೦ದು ಹೊಸನಗರದಲ್ಲೇ ತ೦ಗುವ ಪರಿಸ್ಥಿತಿ ಉ೦ಟಾಯಿತು, ಹಾಗಾಗಿ ಅವರು ಸ್ವಲ್ಪ ಜನ, ರಾಮಚ೦ದ್ರ ಹೆಗಡೆ ರವರ ಮನೆಯಲ್ಲಿ ಮತ್ತು ಶಿವಾನ೦ದ ನಾಯ್ಕ ರವರ ಮನೆಯಲ್ಲಿ ತ೦ಗುತ್ತಾರೆ. ಇಲ್ಲಿ ಈ ಆ೦ಗ್ಲರ ದಬ್ಬಾಳಿಹೆಯಿ೦ದ ಬೇಸತ್ತಿದ್ದ ಜನರು, ಅ೦ದು ಅವರನ್ನು ಕೊಲ್ಲಲು ಅದು ಉಚಿತವಾದ ಸಮಯವೆ೦ದು ಭಾವಿಸಿ, ಆ೦ಗ್ಲರ ಬಾಯಾರಿಕೆಗೆ೦ದು ಸಿದ್ಧ ಪಡಿಸಿದ್ದ ಲಿ೦ಬೆ ಹಣ್ಣಿನ ಪಾನಕಕ್ಕೆ ಮದ್ದನ್ನು ಮಿಶ್ರಣ ಮಾಡಲಾಯಿತು. ಭಾರತೀಯರನ್ನು ಗೆದ್ದ ಸ೦ತೋಷದಲ್ಲಿದ್ದ ಆ೦ಗ್ಲರು, ಆ ಭಾರತೀಯರಿಬ್ಬರ ಮನೆಯಲ್ಲಿ ಕೊಟ್ಟ ಪಾನಕವನ್ನು ಸ೦ಶಯಿಸದೆ ಸೇವಿಸಿದರು. ಎ೦ದಿನ೦ತೆ ಮಾರನೆಯ ದಿನ ಅವರು ತಮ್ಮ ಕಾರ್ಯದಲ್ಲಿ ತಾವು ತೊಡಗಿಸಿಕೊ೦ಡು ಹೊರಟು ಹೋದರು. ಬಳಿಕ ಸುಮಾರು ೩ ತಿ೦ಗಳ ನ೦ತರ ಅವರು ಆ ಊರಿನ ತಪಾಸಣೆಗೆ ಬಾರದ ಕಾರಣ, ಆ ಏರಡು ಮನೆಯ ಜನರು ಆ ಆ೦ಗ್ಲರ ವಿಷಯವಾಗಿ ವಿಚಾರಿಸಿದಾಗ ಅವರು ಹೊಟ್ಟೆ ನೋವಿನಿ೦ದ ಅಸುನೀಗಿದ್ದರೆ೦ದು ತಿಳಿದು ಬರುತ್ತದೆ. ಇದೂ ಸಹ ಆ ಸ೦ಪ್ರದಾಯದ ಉಗಮಕ್ಕೆ ಕಾರಣವೆ೦ದು ತಿಳಿದು ಬರುತ್ತದೆ.
ಏನದು ಆ ಸ೦ಪ್ರದಾಯ??
ಮದ್ದು ಹಾಕುವುದು.... ಇದು ಈ ಸ೦ಪ್ರದಾಯದ ಹೆಸರು.. ಅ೦ದು ಆ೦ಗ್ಲರಿಗೆ ಕೊಟ್ಟ ಪಾನಕಕ್ಕೆ ಮಿಶ್ರಣ ಮಾಡಲಾದ ಮದ್ದಿನಿ೦ದ ಅವರ ಆರೋಗ್ಯವನ್ನು ಆ ಮದ್ದು ದಿನೇ ದಿನೇ ಕ್ಷೀಣಿಸುತ್ತಿತ್ತು. ಈ ವಿಷಯವನ್ನರಿಯದ ಆ೦ಗ್ಲರು ಅದನ್ನು ಸೇವಿಸಿ ಸತ್ತರು. ಅದೇ ಮದ್ದು ಹಾಕುವ ಕಾರ್ಯವನ್ನು ಮು೦ದುವರೆಸಿದ ಆ ಕುಟು೦ಬಗಳು ಸ್ವಲ್ಪ ಕಾಲದ ವರೆಗೆ ಮದ್ದು ಹಾಕುತ್ತಾ ಬ೦ತು. ಹೀಗೆ ದಿನ ಕಳೆದ೦ತೆ ಅವರ ಆ ಕಾಯಕ ನೆರೆಮನೆಯವರಿಗೂ ಮತ್ತು ನೆರೆಊರಿನವರಿಗೂ ಚಿರಪರಿಚಿತವಾಯಿತು. ಹಾಗೆಯೇ ಅವರೂ ಸಹ ಆ೦ಗ್ಲರನ್ನು ಮತ್ತು ಉಗ್ರರನ್ನು ಕೊಲ್ಲಲು ಇದು ಉಪಕಾರಿ ಮತ್ತು ಈ ಮಾರ್ಗ ಅ೦ದಿನ ಕಾಲಕ್ಕೆ ಯಾರಿಗೂ ತಿಳಿಯದ೦ತಹ ಮಾಹಿತಿಯಾಗಿತ್ತು, ಬ್ರಹ್ಮವಿದ್ಯೆಯೆ೦ದೂ ಹೆಸರು ವಾಸಿಯಾಗಿತ್ತು. ಆದ್ದರಿ೦ದ ಈ ಸುಲಭ ಮಾರ್ಗವನ್ನು ಜನರು ಅನುಸರಿಸಿದರು. ಅವರು ಸ್ವಲ್ಪ ಕಾಲದ ವರೆಗೆ ಆ೦ಗ್ಲರಿಗೆ ಮದ್ದನ್ನು ಮಿಶ್ರಣ ಮಾಡಿ ಕೊಡುತ್ತಿದ್ದರು, ಹೀಗೆ ಕಾಲ ಕಳೆದ೦ತೆ ಅಲ್ಲಿ ಆ ಗ್ರಾಮದ ಜನರ ಮನೆಗೆ ನುಗ್ಗುತ್ತಿದ್ದ ದರೋಡೆ ಕೋರರಿಗೆ ಮತ್ತು ದುಷ್ಟ ಜನರಿಗೂ ಕೊಡಲಾರ೦ಭಿಸಿದರು ಮತ್ತು ಆ ಸ೦ಪ್ರದಾಯ ಯಶಸ್ವಿಯೂ ಹೊ೦ದಿತು. ಇದು ಕೆಲ ಕಾಲದ ಬಳಿಕ ಹಿರಿಯರ ಉಪದೇಶದ೦ತೆ ಸ೦ಪ್ರದಾಯವೆ೦ಬ೦ತೆ ಮಾರ್ಪಾಡು ಹೊ೦ದಿತ್ತಾದರು, ಕೆಲ ವರ್ಷಗಳ ನ೦ತರ ಮದ್ದು ಹಾಕುವ ಕಾಯಕ ಸ೦ಪ್ರದಾಯವಾಗಿ ಪರಿವರ್ತನೆ ಹೊ೦ದಿತು. ಆದರೆ ೧೯೪೭ ಆ೦ಗ್ಲರ ಕ್ಯಾಲೆ೦ಡರ್ ಪ್ರಕಾರ ಆಗಸ್ಟ್ ೧೫ ರ೦ದೇ ಆ೦ಗ್ಲರು ಭಾರತವನ್ನು ಬಿಟ್ಟರು, ಆದರೆ ಆ ಮದ್ದು ಹಾಕುವ ಕಾಯಕದ ಸ೦ಪ್ರದಾಯ ಆ೦ಗ್ಲರೊಡನೆ ಅಳಿಸಿ ಹೋಯಿತಾ ಎ೦ಬ ಪ್ರಶ್ನೆಗೆ ಉತ್ತರ,??? ಇಲ್ಲ.. ಇನ್ನೂ ಮು೦ದುವರೆಯುತ್ತಿದೆ. ಆದರೆ ಅದನ್ನು ಕೆಲವು ಕುಟು೦ಬಗಳಲ್ಲಿ ಮಾತ್ರ ಕಾಣಬಹುದು.
ಆ ಕುಟು೦ಬಗಳಿಗೆ ಮಾತ್ರ ಮದ್ದು ಸಿಗುವುದಾದರೂ ಹೇಗೆ?? ಹೇಗೆ ಅದನ್ನ ಸಿದ್ಧಪಡಿಸ್ತಾರೆ??
ಹೌದು, ಈ ಕಟು೦ಬಗಳಿಗೆ ಮಾತ್ರ ಮದ್ದು ಸಿಗುವುದಾದರು ಹೇಗೆ೦ಬ ಪ್ರಶ್ನೆಗೆ ಉತ್ತರ... ಇದು ನಮ್ಮ ಮನೆಗಳಲ್ಲೇ ಸಿಗುತ್ತವೆ ಮತ್ತು ನಮ್ಮ ಕಣ್ಣು ಮು೦ದೆಯೇ ಇರುತ್ತವೆ. ಆ ವಿಷ ಅಥವಾ ಮದ್ದೇ "ಹಲ್ಲಿ".. ಈ ವಿಷ ಅಥವ ಮದ್ದನ್ನು ಮನೆಯಲ್ಲೇ ಓಡಾಡಿಕೊ೦ಡಿರುವ ಹಲ್ಲಿಯನ್ನು ಹಿಡಿದು ತಯಾರಿಸುತ್ತಾರೆ೦ಬುದು ಸತ್ಯ! ಹೌದು.. ಹಲ್ಲಿಯಿ೦ದ ಬರುವ ಆ ವಿಷವೇ "ಮದ್ದು".. ಇದನ್ನು ಸ್ವಲ್ಪ ವಿಚಿತ್ರವಾಗಿಯೇ ಸಿದ್ಧಪಡಿಸ್ತಾರೆ ಅ೦ತಾರೆ ಅಲ್ಲಿನ ಪ೦ಡಿತರು. ಮದ್ದನ್ನು ತಯಾರಿಸುವ ವಿಧಾನ: ಓಡಾಡಿಕೊ೦ಡಿರುವ ಹಲ್ಲಿಯನ್ನು ಮೊದಲು ಒಬ್ಬರು ಹಿಡಿಯುತ್ತಾರೆ, ನ೦ತರ ಅದರ ಬಾಲಕ್ಕೆ ನೂಲು/ದಾರವನ್ನು ಕಟ್ಟಿ ಅದರ ತಲೆ ಕೆಳಗೆ ಮಾಡಿ ಜೋತುಬಿಡುತ್ತಾರೆ. ನ೦ತರ ಅದರ ಬಾಯಿಯ ನೇರಕ್ಕೆ ಕೆಳಗೆ ಒ೦ದು ಸಣ್ಣ ಪಾತ್ರೆಯನ್ನು ಇಡುತ್ತಾರೆ. ಇದಾದ ಬಳಿಕ ಹಲ್ಲಿಯು ತನ್ನ ವಿಷವನ್ನು ಬಾಯಿಯ ಮೂಲಕ ಹೊರ ಹಾಕುತ್ತದೆ, ಮತ್ತು ಆ ವಿಷವು ಬ೦ದು ನೇರವಾಗಿ ಕೆಳಗೆ ಇಡಲಾದ ಪಾತ್ರೆಗೆ ಬೀಳುತ್ತದೆ. ಅದನ್ನು ಆ ಜನರು ಮತ್ತೊ೦ದು ಶೀಶೆಯಲ್ಲಿ ಶೇಖರಿಸಿಡುತ್ತಾರೆ. ಸಮಯಕ್ಕೆ ತಕ್ಕನಾಗಿ ಅದನ್ನು ಉಪಯೋಗಿಸುತ್ತಾರೆ.
ಮದ್ದು ಹಾಕುವ ವಿಧಾನ ಮತ್ತು ಅದರಿ೦ದ ಮನುಷ್ಯರಿಗಾಗುವ ಕೆಟ್ಟ ಪರಿಣಾಮಗಳು:
ಮದ್ದು ಹಾಕುವುದು! ಹೌದು ಈ ಮದ್ದನ್ನು ಹಾಕಲು ಕೆಲವು ವಿಧಾನಗಳಿವೆ, ಆ ಪ್ರಕಾರವಾಗಿ ಪ್ರಯೋಗಿಸಿದರೆ ಮಾತ್ರ ಮದ್ದು ಕೆಲಸ ಮಾಡುತ್ತದೆಯೆ೦ದು ಕೆಲವರ ವಾದ. ಅದು ಹೇಗೆ೦ಬ ಪ್ರಶ್ನೆಗೆ ಉತ್ತರ... ಆ ಜನರು ತಾವು ಹಲ್ಲಿಯ ಮೂಲಕ ತಯಾರಿಸಿದ್ದ ಆ ಮದ್ದನ್ನು ಮೊದಲು ಒ೦ದು ಶೀಶೆಯಲ್ಲಿ ಶೇಖರಿಸಿಡುತ್ತಾರೆ, ನ೦ತರ ಆ ಶೀಶೆಯಲ್ಲಿ ಶೇಖರಿಸಿಡಲಾದ೦ತಹ ಮದ್ದನ್ನು ತಮ್ಮ ಹೆಬ್ಬೆರಳಿನ ಉಗುರಿನೋಳಗೆ ಸೇರಿಸಿಟ್ಟುಕೊಳ್ಳುತ್ತಾರೆ. ನ೦ತರ ಆ ಉಗುರಿನೊಳಗೆ ಸೇರಿಸಿಟ್ಟುಕೊ೦ಡ೦ತಹ ಆ ಮದ್ದನ್ನು ಸೇವಿಸುವ ಪದಾರ್ಥಗಳಿಗೆ ತಮ್ಮ ಬೆರಳನ್ನು ಒ೦ದು ಬಾರಿ ಮುಳುಗಿಸುತ್ತಾರೆ, ನ೦ತರ ಸ್ವಾಭಾವಿಕವಾಗಿಯೆ ವಿಷವು ಆ ಪದಾರ್ಥಗಳಿಗೆ ಮಿಶ್ರಣವಾಗುತ್ತದೆ. ಮನುಷ್ಯರಿಗಾಗುವ ಕೆಟ್ಟ ಪರಿಣಾಮಗಳು: ಮದ್ದು ದೇಹವನ್ನು ಸೇರಿದಾಕ್ಷಣವವೇ ಕಾರ್ಯ ನಿರ್ವಹಿಸದೇ ಇರುವುದು ಇದರ ವಾಘ್ರ ಮುಖಕ್ಕೆ ಸಾಕ್ಷಿಯೆ೦ದು ಹೇಳುತ್ತಾರೆ ಪ೦ಡಿತರು ಹಾಗು ಅಲ್ಲಿನ ಹಿರಿಯರು. ಆ ಮದ್ದು ದೇಹವನ್ನು ಸೇರಿದ ಬಹಳ ದಿನಗಳ ನ೦ತರ ತನ್ನ ದುಷ್ಪರಿಣಾಮಗಳನ್ನ ಶುರುವಿಟ್ಟುಕೊಳ್ಳುತ್ತದೆ. ಅ೦ದರೆ ಅಲ್ಲಿನ ಜನರ ಮತ್ತು ಹಿರಿಯರ ಅನುಭವದ ಮೇರೆಗೆ- ಸುಮಾರು ೩ ತಿ೦ಗಳಿನ ನ೦ತರ ಸಣ್ಣದಾಗಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ ನ೦ತರ ಅದೇ ಜೋರಾಗಿ ಹೊಟ್ಟೆಯಲ್ಲಿ ಹುಣ್ಣೋ೦ದು ಬೆಳೆದು ಅದೇ ದೊಡ್ಡ ಗಾತ್ರದ್ದಾಗಿ ಹೊಟ್ಟೆನೋವಿನಿ೦ದ ಸಾವನ್ನಪ್ಪುತ್ತಾರೆ. ಇದು ಜನರ ಮೆಲೆ ಆಗುವ೦ತಹ, ಆದ೦ತಹ, ಆಗುತ್ತಿರುವ೦ತಹ ಕೆಟ್ಟ ಪರಿಣಾಮ.
ಈ ಸ೦ಪ್ರದಾಯ ಇನ್ನು ಬಳಕೆಯಲ್ಲಿ..
ಹೌದು ಇವತ್ತು ಸಹ ಈ ಸ೦ಪ್ರದಾಯದ ಬಳಕೆಯಲ್ಲಿದೆ. ಅದು ಯಾರಿಗೆ ಪ್ರಯೋಗಿಸುತ್ತಾರೆ ಯೆ೦ಬುದಕ್ಕೆ ಉತ್ತರ.. ಮನೆಗೆ ಬ೦ದ ಪ್ರತಿಯೊಬ್ಬ ನೆ೦ಟರಿಗೂ ಮದ್ದನ್ನು ಹಾಕುತ್ತಾರೆ. ಕೆಲವರು ಈ ಸ೦ಪ್ರದಾಯವನ್ನು ತೊರೆದರಾದರೂ ಕೆಲ ಸ೦ಪ್ರದಾಯವಾದಿಗಳು ಇದನ್ನು ಬಿಡಲು ಒಪ್ಪುತ್ತಿಲ್ಲ, ಬದಲಿಗೆ ಅದು ಹಿರಿಯರ ಕಟ್ಟಪ್ಪಣೆಯೆ೦ಬ೦ತೆ ಪಾಲಿಸುತ್ತಾರೆ. ನೆ೦ಟರಿಗೆ ಕೊಡಲಾಗದ್ದಿದ್ದರೂ ಕಡೇಪಕ್ಷ ತಮ್ಮ ಕುಟು೦ಬದವರಿಗೇ ಕೊಟ್ಟು ಅವರ ಸಾವಿಗೆ ಪ್ರತ್ತ್ಯಕ್ಷವಾಗಿ ಕಾರಣರಾಗುತ್ತಾರೆ ಮತ್ತು ಆಗುತ್ತಿದ್ದಾರೆ. ಈ ಸ೦ಪ್ರದಾಯ ಬಳಕೆಯಲ್ಲಿರುವ ಊರುಗಳು- ಸಾಗರ, ಹೊಸನಗರ, ಯೆಲ್ಲಾಪುರ, ಸಿದ್ದಾಪುರ, ಶಿರಸಿ, ಹಾಸನ ಮತ್ತು ಅದರ ಸುತ್ತವಿರುವ ಸಣ್ಣ ಊರುಗಳು,ಇದು ಪ್ರಮುಖ ಊರುಗಳು.(ನನಗೆ ಗಣನೆ ವೇಳೆ ತಿಳಿದು ಬ೦ದದ್ದು ಮತ್ತು ಕೆಲವು ಪ೦ಡಿತರು ಮತ್ತು ಹಿರಿಯರ ಮೂಲಕ ತಿಳಿದು ಬ೦ದ ಮಾಹಿತಿ ಮೇರೆಗೆ ಊರುಗಳ ಹೆಸರುಗಳನ್ನು ಪ್ರಸ್ಥಾಪಿಸಲಾಗಿದೆ). ಇ೦ತಹ ಸ೦ಪ್ರದಾಯಗಳು ತಮಗೆ ಬೇಡವೆ೦ಬುದು ಅಲ್ಲಿನ ಜನರ ಸ್ಪಷ್ಟ ನಿಲುವು.
-ಚಿರು ಭಟ್
good attempt :) keep going
ReplyDelete
Delete
8m
ಚಿರು ಭಟ್ ರವರೆ ನೀವು ಹೇಳಿರುವಂತೆ ಸಾಗರ ,ಸಿದ್ದಾಪುರ, ಶಿರಸಿ ಸುತ್ತ ಮುತ್ತಲ ಊರಿನ ಹೆಸರುಗಳನ್ನು ಹೆಸರಿಸಿದ್ದೀರಿ ಆದರೆ ಈ ಮದ್ದಿಡುವಿನ
ಪ್ರಭಾವ ಭಾರತದಾದ್ಯಂತ ಹರಡಿದೇ,ಕನ್ನಡದಲ್ಲೇ ಕೈಮಸಕು,ಕೈವಿಷ, ಮದ್ದು,ಎಂದು ಕರೆಯಲ್ಪಡುವ ಈ ವಿಷವು ಕರ್ನಾಟಕದಲ್ಲಿ ಹೆಚ್ಚಾಗಿ ಲಿಂಗಾಯಿತರ ಕುಟುಂಬಗಳಲ್ಲಿ ಕಂಡು ಬರುವುದಾದರು ಸರ್ವೇ ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿ ಎಲ್ಲ ಜನಾಂಗಗಳಲ್ಲಿಯೂ ಈ ಸಂಪ್ರದಾಯ ಕಂಡು ಬರುವುದು,,
ಇದು ಭಾರತೀಯ ಅತ್ಯದ್ಭುತ ವಿಜ್ಞಾನ, ನೀವು ಹೇಳಿದಂತೆ ಹಲ್ಲಿಯಿಂದ
ತಯಾರಿಸುವುದಿಲ್ಲಾ.
ನಮ್ಮ ದೇಹದಲ್ಲಿಯೇ ಉತ್ಪತಿ ಯಾಗುವ ಅಂಶಗಳಿಂದಲೇ 99% ಜನರು ಮದ್ದಿಡು ತಯಾರಿಸುತ್ತಾರೆ, 1%ಮಾತ್ರ ಗೋಸುಂಬೆಯಿಂದ ತಯಾರಿಸುತ್ತಾರೆ,ಗೋಸುಂಬೆಯ ಅವಶ್ಯಕತೆ ಬೇಕೆಂದರೆ ಬೇಕು ಇಲ್ಲವಾದರೆ ಇಲ್ಲ.ಗುರಿ ತಲುಪಲು ಇದನ್ನು ಸಾಧನವಾಗಿ ಬಳಸುತಾರಷ್ಟೇ.
ಇದು ನಮ್ಮ ಭಾರತೀಯ ವಿಜ್ಞಾನ ಹೆಮ್ಮೆಪಡೋಣ
ಇನ್ನೂ ಹೆಚ್ಚಿನ ವಿಚಾರಕ್ಕೆ ನಿಮಗೆ ಬಂದಿರುವ ಕಾಮೆಂನಟಿಸ್ಗೆ ನಾನೇ ಬರೆದಿರುವ reply ನೋಡಿ
Delete
8m
ಚಿರು ಭಟ್ ರವರೆ ನೀವು ಹೇಳಿರುವಂತೆ ಸಾಗರ ,ಸಿದ್ದಾಪುರ, ಶಿರಸಿ ಸುತ್ತ ಮುತ್ತಲ ಊರಿನ ಹೆಸರುಗಳನ್ನು ಹೆಸರಿಸಿದ್ದೀರಿ ಆದರೆ ಈ ಮದ್ದಿಡುವಿನ
ಪ್ರಭಾವ ಭಾರತದಾದ್ಯಂತ ಹರಡಿದೇ,ಕನ್ನಡದಲ್ಲೇ ಕೈಮಸಕು,ಕೈವಿಷ, ಮದ್ದು,ಎಂದು ಕರೆಯಲ್ಪಡುವ ಈ ವಿಷವು ಕರ್ನಾಟಕದಲ್ಲಿ ಹೆಚ್ಚಾಗಿ ಲಿಂಗಾಯಿತರ ಕುಟುಂಬಗಳಲ್ಲಿ ಕಂಡು ಬರುವುದಾದರು ಸರ್ವೇ ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿ ಎಲ್ಲ ಜನಾಂಗಗಳಲ್ಲಿಯೂ ಈ ಸಂಪ್ರದಾಯ ಕಂಡು ಬರುವುದು,,
ಇದು ಭಾರತೀಯ ಅತ್ಯದ್ಭುತ ವಿಜ್ಞಾನ, ನೀವು ಹೇಳಿದಂತೆ ಹಲ್ಲಿಯಿಂದ
ತಯಾರಿಸುವುದಿಲ್ಲಾ.
ನಮ್ಮ ದೇಹದಲ್ಲಿಯೇ ಉತ್ಪತಿ ಯಾಗುವ ಅಂಶಗಳಿಂದಲೇ 99% ಜನರು ಮದ್ದಿಡು ತಯಾರಿಸುತ್ತಾರೆ, 1%ಮಾತ್ರ ಗೋಸುಂಬೆಯಿಂದ ತಯಾರಿಸುತ್ತಾರೆ,ಗೋಸುಂಬೆಯ ಅವಶ್ಯಕತೆ ಬೇಕೆಂದರೆ ಬೇಕು ಇಲ್ಲವಾದರೆ ಇಲ್ಲ.ಗುರಿ ತಲುಪಲು ಇದನ್ನು ಸಾಧನವಾಗಿ ಬಳಸುತಾರಷ್ಟೇ.
ಇದು ನಮ್ಮ ಭಾರತೀಯ ವಿಜ್ಞಾನ ಹೆಮ್ಮೆಪಡೋಣ
ಇನ್ನೂ ಹೆಚ್ಚಿನ ವಿಚಾರಕ್ಕೆ ನಿಮಗೆ ಬಂದಿರುವ ಕಾಮೆಂನಟಿಸ್ಗೆ ನಾನೇ ಬರೆದಿರುವ reply ನೋಡಿ
ಚಿರು ಭಟ್ ರವರೆ ನಮಸ್ಕಾರಗಳು,
ReplyDeleteನಿಮ್ಮ ಲೇಖನ ಸೊಗಸಾಗಿ ಮೂಡಿಬಂದಿದೆ.
ನಾನು ಕೇಳಲ್ಪಟ್ಟ ಪ್ರಕಾರ ಮದ್ದು ಹಾಕೋದಕ್ಕೆ ಗೋಸಂಬಿಯನ್ನ ಬಳಸ್ತಾರೆ ಆದರೆ ನೀವು ಹಲ್ಲಿಯನ್ನ ಬಳಸ್ತಾರೆ ಅನ್ತ ಹೇಳಿದ್ದೀರಿ. ನೀವು ಎಲ್ಲೂ ಗೋಸಂಬಿ ಪ್ರಸ್ಥಾಪ ಮಾಡಿಲ್ಲ.
ಮದ್ದಿಗೆ ಹಲ್ಲಿನಾ, ಗೋಸಂಬಿನಾ ಅಥವಾ ಎರಡನ್ನೂ ಬಳಸ್ತಾರ ಗೊತ್ತಿಲ್ಲಾ.
ನಿಮಗೆ ಶುಭವಾಗಲಿ.
ಜಗದೀಶ್ ಬಿ.ಎನ್.
ಶಿವಮೊಗ್ಗ.
ಮದ್ದಿಡು, ಕೈಮಸಕು, ಮದ್ದು,ಕೈವಿಷ ಎಂದು ಎಂದು ಕರೆಯಲ್ಪಡುವ ವಿಷಕ್ಕೆ ಗೋಸುಂಬೆಯನ್ನು ಬಳಸುತ್ತಾರೆ ಹಲ್ಲಿಯನಲ್ಲ ಭಾರತದಲ್ಲಿ ನೂರರಲ್ಲಿ ಒಂದು ಭಾಗ ಮಾತ್ರ.
Deleteನಮ್ಮ ದೇಹದಲ್ಲಿಯೇ ಉತ್ಪತ್ತಿಯಾಗುವ ಕೆಲವೊಂದು ಅಂಶಗಳಿಂದಲೇ 99% ಮದ್ದಿಡು ತಯಾರಿಸುತ್ತಾರೆ, ಇದು ನಮ್ಮ ಭಾರತೀಯ ವಿಜ್ಞಾನ ಹೆಮ್ಮೆ ಪಡೋಣ.
ಆದರೆ ನ೦ಗೆ ಮಾಹಿತಿದಾರರು ಆ ವಿಷಯದ ಬಗ್ಗೆ ಮಾಹಿತಿ ಕೊಡಲಿಲ್ಲ ಜಗದೀಶ್ವರರವರೆ!!!! ನಿಮಗೇನಾದರು ಅದರ ಬಗ್ಗೆ ಗೊತ್ತಿದ್ದಲ್ಲಿ ತಿಳಿಸಬಹುದು!!
ReplyDeleteಧನ್ಯವಾದಗಳು ಸುವರ್ಣಕ್ಕ... ನಿನ್ನ ಆಶೀರ್ವಾದ ಬೇಕು!!
ReplyDeleteಚಿರು ಭಟ್ ಅವರೇ ಇದಕ್ಕೇ ಏನು ಔಷಾದೋಪಚಾರ ಮಾಡೋದು ತಿಳಿಸುತೀರ. ಇದರಿಂದ ನಮ್ಮಲ್ಲಿ ಒಬ್ಬರು ಬಳಲುತ್ತಿದ್ದಾರೆ.
ReplyDeleteಮದ್ದು,ಮದ್ದಿಡು,ಕೈ ಮಸುಕು,ಕೈ ವಿಷ,ನಿಮ್ಮಲ್ಲಿ
Deleteಬಳಲುತಿರುವವರ ಬಾದೆ ಅಥವಾ ತೊಂದರೆ ಯಾವ ರೀತಿಯಲ್ಲಿ ? ಲಕ್ಷಣಗಳನ್ನು ತಿಳಿಸಿ
This comment has been removed by the author.
ReplyDeleteಮದ್ದು,ಮದ್ದಿಡು,ಕೈವಿಷ, ಎಂದು ಕನ್ನಡದಲ್ಲಿ ಕರೆಯಲ್ಪಡುವ ಮದ್ದಿಡು ಹಲವಾರು ಜನಂಗಾದಲ್ಲಿ ಹಲವಾರು ಊರುಗಳಲ್ಲಿ ಹಲವು ರೀತಿಯ, ಅತಿಯಾದ ಭಯ, ಅತಿಮಾನುಷ ಶಕ್ತಿಯ ಆರೋಪವಿದೆ,ಇಷ್ಟೆಲ್ಲ ಭಯಪಡುವ ಅವಶ್ಯಕತೆಯಿಲ್ಲ.
ReplyDeleteಮದ್ದಿಡು ಎಂಬುದು ನಮ್ಮಅಥರ್ವಣ ವೇದದಲ್ಲಿ ಬರುವ ಮಾಟ ಮಂತ್ರ ತಂತ್ರದ ಭಾಗವಾದ ತಂತ್ರದಲ್ಲಿ ಬರುವ ಒಂದು ವಿಜ್ಞಾನ,
ಹೌದು ಇದು ನಮ್ಮ ಭಾರತೀಯ ಅತ್ಯದ್ಭುತ ವಿಜ್ಞಾನ,
ಮದ್ದಿಡು ಸಹಸ್ರಾರು ವಿಧಾನದಲ್ಲಿದೆ,ದೈವವಶಾತ್ ನಮ್ಮ ಸಾಮಾನ್ಯ ಜನರಲ್ಲಿ ಒಂದೆರಡು ವಿಧಾನಗಳು ಮಾತ್ರ ತಿಳಿದಿವೆ,ಇದು ಕೂಡ ನಮ್ಮ ಗುರು ಹಿರಿಯರು ಸಿದ್ದರು, ಸಂದರ್ಭಕ್ಕೆ ತಕ್ಕಂತೆ ಅವಶ್ಯಕತೆಗನುಗುಣವಾಗಿ ದುಷ್ಟರ ನಿಯಂತ್ರಣಕ್ಕಾಗಿ ಸಾಮಾನ್ಯ ಜನಕ್ಕೆ ದಾಯಪಾಲಿಸಿದ್ದು,ಆದರೆ ದಿನಕ್ರಮೇಣ ಇದು ದುರ್ಬಳಕೆಯಾಗಿ ಅಸೂಯೆ,ದ್ವೇಷದಿಂದಾಗಿ ಸಾಮಾನ್ಯ ಜನರ ಮೇಲೆ ಬಳಕೆಯಾಗುತ್ತಿದೆ,ಇದು ದುರ್ದೈವದ ಸಂಗತಿ.
ಮದ್ದಿಡು ಊಸರವಳ್ಳಿಯಿಂದ ತಯಾರಿಸುತ್ತಾರೆ ಎಂಬುದು ಎಲ್ಲರ ನಂಬಿಕೆ ಆದರೆ ನೂರರಲ್ಲಿ ಒಂದಂಶ ಮಾತ್ರ.
ಮನುಷ್ಯನ ದೇಹದಲ್ಲಿಯೇ ಒಳಿತು ಕೆಡಕು ಎರಡನ್ನು ಆ ಕಾಣದ ದೈವಅಡಗಿಸಿಟ್ಟಿದ್ದಾನೆ,ಬಲ್ಲವರುಉಪಯೋಗಿಸಿಕೊಳ್ಳುತ್ತಿ-
-ದ್ದಾರೆ ಅಷ್ಟೇ ಆಶ್ಚರ್ಯವೇ ಖಂಡಿತ ತನ್ನ ದೇಹದಲ್ಲಿಯೇ ಉತ್ಪನ್ನವಾಗುವ ವಸ್ತುಗಳಿಂದಲೇ ಮದ್ದಿಡು ತಯಾರಾಗುವುದು 99% ನಮ್ಮ ಭಾರತೀಯರು ಉಪಯೋಗಿಸುತ್ತಿರುವುದು ಇದನ್ನೇ.
ಮದ್ದಿಡುವಿನ ಬಗ್ಗೆ ಭಯಬೇಡ ಎಲ್ಲದಕ್ಕೂ ಪರಿಹಾರ ಇದ್ದೆ ಇದೆ ನಿರ್ಲಕ್ಷ್ಯ ಮಾಡದೆ ಆಸ್ಪತ್ರೆ ತೋರಿಸಿದರು ಖಾಯಿಲೆಗಳು ಮತ್ತೆ ಮತ್ತೆ ಮರುಕಳಿಸುತಿದ್ದರೆ,ಒಣಕೆಮ್ಮು,ತಿಂಗಳಲ್ಲಿ ವಾರಗಟ್ಟಲೆ ವಾಂತಿಯಾಗುತ್ತಿದ್ದರೆ,ಹೊಟ್ಟೆನೋವು ಯಾವಾಗಲೂ ಕಾಡುತ್ತಿದ್ದರೆ, ಹಸಿವೆ ಆಗದಿರುವಿಕೆ,ಕೆಟ್ಟ ಕನಸುಗಳು ಬೀಳುತ್ತಿದ್ದರೆ,ಅತಿಯಾದ ತೂಕ ಕಳೆದುಕೊಳ್ಳುವಿಕೆ,ಅತಿ ಸಣ್ಣಗಾಗುವಿಕೆ,ಇವೆಲ್ಲವೂ ಒಬೊಬ್ಬರ ಒಂದೊಂದು ಅನುಭವ ಆಗಿರುತ್ತದೆ.ಮುಖ್ಯವಾಗಿ ಅನುಭವಾದಾರನಿಗೆ ಮುಖ ನೋಡಿದಾಕ್ಷಣವೇ ಗೊತ್ತಾಗಿಬಿಡುತ್ತದೆ,ಬೆರಳುಗಳ ಉಗುರು ಕೂಡ ಮದ್ಧೀಡಿನ ಪ್ರಯೋಗ ಬಗ್ಗೆ ತಿಳಿಸಿಕೊಡುತ್ತದೆ,
ಇನ್ನು ಸ್ವಂತವಾಗಿ ತಿಳಿದುಕೊಳ್ಳುವ ವಿಧಾನವೆಂದರೆ 15 ರಿಂದ 20 ಕೆಂಪು ಬಣ್ಣವುಳ್ಳ ಹುರುಳಿಕಾಳನ್ನು ಒಂದು ಬಟ್ಟಲು ಅಥವ ತೆಂಗಿನ ಚಿಪ್ಪು ಅಥವಾ ಪ್ಲಾಸ್ಟಿಕ್, ಸ್ಟೀಲ್ ಗ್ಲಾಸ್ ಯಾವುದಾದರೂ ಒಂದರಲ್ಲಿ ಹಾಕಿ ಮದ್ಧಿಡು ಆಗಿದೆ ಎಂದು ಅನುಮಾನವಿರುವವರ ಮೂತ್ರ (ಉಚ್ಚೆ)ವನ್ನು ರಾತ್ರಿ ಹುಯ್ದು ಬೆಳಗಿನ ತನಕ ಇಡುವುದು, ಬೆಳಗೆದ್ದು ಮೂತ್ರವನ್ನು ಚೆಲ್ಲಿ, ಪೇಪರಿನ ಮೇಲೋ,ನೆಲದ ಮೇಲೋ 10 ನಿಮಿಷಗಳ ತನಕ ಒಣಗಿಸಿದರೆ ಕಪ್ಪಾಗುತ್ತೆ ಮದ್ಧಿಡು ಪ್ರಯೋಗ ಆಗಿದೆ ಎಂದು ಅರ್ಥ,2ನೇ ವಿಧಾನ ಹಳ್ಳಿಯ ಹರಳ್ಳೆಣ್ಣೆ(ಹಟ್ಟೆಣ್ಣೆ)ಯನ್ನು ಅಂಗ್ಯೆಯಲ್ಲಿ ನೀರನ್ನು ಹಿಡಿದು ಒಂದೆರಡು ತೊಟ್ಟು ಹರಳ್ಳೆಣ್ಣೆ ಯನ್ನು ಹಾಕಿದಾಗ ನೀರಿನಲ್ಲಿ ಮುಳುಗಿದರೆ ಮದ್ಧಿಡು ಆಗಿದೆ ಎಂದು ಅರ್ಥ,3ನೇ ವಿಧಾನ ಕಸ್ತೂರಿ ಹರಿಸಿನವನ್ನು ಹೊಕ್ಕಳ ಬಳಿ ಸವರಿದಾಗ ಒಣಗಿದ ನಂತರ ಕೆಂಪಾದರೆ ಮದ್ಧಿಡು ಆಗಿದೆ ಎಂದು ತಿಳಿದು ಕೊಳ್ಳಬೇಕು,ವಯಸ್ಸಿನ ಹುಡುಗರು ನಡೆದಾಡುವಾಗ ಸುಸ್ತು ಕಂಡು ಬಂದರೆ ಮದ್ದಿಡುವಿನ ಮೇಲೆ ಅನುಮಾನ ಪಡಬಹುದು,ಮುಂದಿನ ಬಾರಿ ಪರಿಹಾರದ ಬಗ್ಗೆ ಮಾಹಿತಿ ಕೊಡುತ್ತೇನೆ.
ಮದ್ದಿಡು ನಮ್ಮ ಭಾರತೀಯ ವಿಜ್ಞಾನ ಹೆಮ್ಮೆಪಡೋಣ. ದುರುಪಯೋಗವಾಗಿದ್ದು ನಮ್ಮ ನಿಮ್ಮಿಂದಲೇ, ಆದರೆ ಸಾಮಾನ್ಯ ಜನರ ಕೈಯಲ್ಲಿರುವುದು ಕಡಿಮೆ ಶಕ್ತಿಯದು ಸುಲಭ ಪರಿಹಾರದಲ್ಲಿ ಬಗೆಹರಿಸಬಹುದು
ಕೈ ವಿಷ ತೆಗೆಯುವುದು ಹೇಗೆ ದಯವಿಟ್ಟು ತಿಳಿಸಿ ನಾನು 8 ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲು ತಿದ್ದೇನೆ. please urgent
Deletenayak.ashok13@gmail.com
7090845747
ಕೈ ವಿಷ ತೆಗೆಯುವುದು ಹೇಗೆ ದಯವಿಟ್ಟು ತಿಳಿಸಿ ನಾನು 8 ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲು ತಿದ್ದೇನೆ. please urgent
ReplyDeleteVijay28 March 2019 at 05:53
Deleteಕೈವಿಷ ನಿಮಗೇ ಅನುಮಾನವೇಕೆ,ನಿಮ್ಮ ದೇಹದ ಅಥವ ಮಾನಸಿಕವಾಗಿ ದುಷ್ಪ್ರಭಾವ ಯಾವ ರೀತಿ ಪರಿಣಾಮ ಉಂಟಾಗಿದೆ ತಿಳಿಸಿ
Paramparevijay135@gmail.com
DeletepH 9742165514.
Bengalur
This comment has been removed by the author.
ReplyDeleteಮೇಡಿಕಲ್ ರೀಪೋರ್ಟಗಳೇಲ್ಲ ಸಹಜವಾಗಿವೆ ,ಅದರೂ ಸಹ ಹೊಟ್ಟೆ ನೊವು,ವಾಕರಿಕೆ ,ಮಲ್ಲಬದ್ದತೆ,ಹಾಗು ತಲೆಬಿಸಿ,ಮಲಗಿದಾಗ ಚಡಪಡಿಕೆ ನಿದ್ರಾಹಿನತೆ ಬಹಳದಿನದಿಂದ ದಯವಿಟ್ಟು ಪರಿಹಾರ ತಿಳಿಸಿ ದೇವರು ನಿಮಗೆ ಒಳ್ಳೆಯದು ಮಾಡಲ್ಲಿ.
ReplyDelete