ಆ ಧರ್ಮಾಂಧರ ನಾಡಿನಲ್ಲಿ ಸರ್ವಂ ರಕ್ತಮಯಂ
ಅಂದು ಕ್ರಿ.ಶ. 1192ರಲ್ಲಿ ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾಣ್ ನನ್ನು ಹತ್ಯೆಗೈದು ತಾನು ಚಕ್ರವರ್ತಿಯೆಂದು ಮೆರೆದಿದ್ದ, ಆದರೆ ಅದೇ ಮುಂದಿನ ವರ್ಷದಲ್ಲಿ ಅಂದರೆ ಕ್ರಿ.ಶ. 1193ರಲ್ಲಿ ಮುಸಲ್ಮಾನ ವ್ಯಕ್ತಿಯೊಬ್ಬ ಘೋರಿಯ ಸಾಮ್ರಾಜ್ಯದಲ್ಲಿ ಮೃತಪಟ್ಟಿದ್ದ. ಅದನ್ನು ತಪ್ಪಾಗಿ ಗ್ರಹಿಸಿದ ಘೋರಿ ತನ್ನ ದಂಡೆತ್ತಿ ಬಂದು ಏಕಾಏಕಿ ಸಾವಿರಾರು ಹಿಂದುಗಳ ಶಿರಛ್ಚೇಧನ ಮಾಡಿ ಅವರುಗಳ ಬುರುಡೆಗಳನ್ನು ತನ್ನ ಕೋಟೆಗೆ ಸಿಂಗಾರಕ್ಕಾಗಿ ಹಾಕಿದ ಘಟನೆ ನೆಡೆದದ್ದು ಬಹಳ ಹಿಂದೆ. ಇಂದಿನ ಕಾಲದಲ್ಲಿ ಅಂಥ ಘಟನೆಗಳು ನೆಡೆಯುವುದಿಲ್ಲ ಬಿಡಿ, ಕಾನೂನು ಕಣ್ಣುಮುಚ್ಚಿಕೊಂಡು ಕೂರುವುದಿಲ್ಲ ಎಂದು ಬಹಳಷ್ಟು ನಂಬಿದ್ದರು. ಆದರೆ ಇದೇ ಜುಲೈನಲ್ಲಿ ಇಂಥದ್ದೊಂದು ಬೆಚ್ಚಿಬೀಳಿಸುವ ಘಟನೆ ನೆಡೆದಿದೆಯೆಂದರೆ ಅದನ್ನು ನೀವೆಲ್ಲಾ ನಂಬಲೇ ಬೇಕು.
ಅದು ದಕ್ಷಿಣ ಈಜಿಪ್ಟಿನ ನಗಾ ಹಸನ್ ಎಂಬ ಹಳ್ಳಿ, ಅಲ್ಲಿ ಮುಸಲ್ಮಾನರೇ ಹೆಚ್ಚು. ಶೇ.10ರಷ್ಟು ಮಾತ್ರ ಕ್ರಿಶ್ಚಿಯನ್ನರು.
As Expected ಅಲ್ಲಿ ಅಲ್ಪಸಂಖ್ಯಾತರ ಮೇಲೆ ಸಣ್ಣ ಪುಟ್ಟ ದಾಳಿಗಳು ನೆಡೆಯುತ್ತಿತ್ತು. ಆದರೆ ಅದೆಲ್ಲಾ ಸಹಿಸುವಂತಿತ್ತು. ಅದರೆ ಜುಲೈ 10ರಂದು ಮುಸಲ್ಮಾನ ಆತಂಕವಾದಿಗಳ ಗುಂಪೊಂದು ಊರಲ್ಲಿರುವ ಎಲ್ಲಾ ಕ್ರಿಶ್ಚಿಯನ್ನರ ಮನೆಗಳನ್ನು ಧ್ವಂಸ ಮಾಡಿ ಎಮಿಲಿ ನಸೀಮ್(41), ಮತ್ತು ಅವನ ಕುಟುಂಬವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದರು. ತಮ್ಮ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ನಸೀಮ್ ಮತ್ತು ಅವನ ಕುಟುಂಬ ಸದಸ್ಯರು ಪಕ್ಕಾ ಸಿನಿಮೀಯ ಶೈಲಿಯಲ್ಲಿ ಮನೆಯ ಮಹಡಿಯಿಂದ ಮಹಡಿಗೆ ಹಾರಿ ಹಾರಿ ಓಡುತ್ತಿದ್ದರು ಅವರ ಹಿಂದೆ ಆತಂಕವಾದಿಗಳ ತಂಡ ಕತ್ತಿ, ಕಬ್ಬಿಣದ ರಾಡು, ಸರಪಳಿ ಮತ್ತು ಮರದ ದೊಣ್ಣೆಗಳನ್ನು ಹಿಡಿದು ಅಟ್ಟಿಸಿಕೊಂಡು ಬಂದು ಸಾರ್ವಜನಿಕವಾಗಿಯೇ ಜಜ್ಜಿ ಜಜ್ಜಿ ಕೊಂದರು. ಆದರೂ ಸಹ ಯಾವ ಪೊಲೀಸ್ ಅಥವಾ ಸರ್ಕಾರ ಅವರ ತಂಟೆಗೆ ಹೋಗಲಿಲ್ಲವೆಂದರೆ ಧರ್ಮಾಂಧರು ಇನ್ನು ಇದ್ದಾರೆಂದು ಇಲ್ಲಿ ಸಾಬೀತಾಗಿತ್ತದೆ. ಆ ಧರ್ಮಾಂಧರ ನಾಡಿನಲ್ಲಿ ಸರ್ವಂ ರಕ್ತಮಯಂ ಎಂಬಂತಿರುತ್ತದೆ.
ಅಲ್ಲಿ ನಡೆದಿದ್ದೇನು??
ನಗಾ ಹಸನ್ ನಲ್ಲಿ ಕ್ರಿಶ್ಚಿಯನ್-ಮುಸ್ಲಿಮ್ ಜಗಳಗಳು ಸದಾ ನಡೆಯುತ್ತಿತ್ತು. ಅದನ್ನು ನಡೆಸುತ್ತಿದ್ದದ್ದು ಮಾಜಿ ಯೋಧ ಮೊಹಮ್ಮದ್ ಮೋರ್ಸಿ. ಮೋರ್ಸಿ 100% ಧರ್ಮಾಂಧನಾಗಿದ್ದರಿಂದ ಅವನ ಅನೈತಿಕ ಚಟುವಟಿಕೆಗಳಿಂದ ಬೇಸತ್ತು ಮಿಲಿಟರಿಯಿಂದ ಹೊದಬ್ಬಲಾಗಿತ್ತು. ಹೊರಬಂದವನೇ ತನ್ನದೇ ಒಂದು ಇಸ್ಲಾಮಿಸ್ಟ್ ಸಂಘ ಕಟ್ಟಿ ಪಕ್ಕಾ ಜಿಹಾದಿಗಳ ಶೈಲಿಯಲ್ಲಿ ನಗಾ ಹಸನ್ ಊರನ್ನು ತನ್ನ ಕೈವಶ ಮಾಡಿಕೊಂಡಿದ್ದ. ಎಲ್ಲಿಯಾದರೂ ಕ್ರಿಶ್ಚಿಯನ್ನರು ಹೆಚ್ಚಾಗಿ ಕಂಡಲ್ಲಿ ಪದೇ ಪದೇ “ನೀವು ಅಲ್ಪಸಂಖ್ಯಾತರೆನ್ನುವುದನ್ನು ಮರೆಯದಿರಿ, ನಾವು ಬಹುಸಂಖ್ಯಾತರು ಮನಸ್ಸು ಮಾಡಿದರೆ ನಿಮ್ಮ ನ್ನು ಏನು ಬೇಕಾದರು ಮಾಡಬಹುದು”ಎಂದು ವಾರ್ನಿಂಗ್ ಕೊಡುತ್ತಿದ್ದ. ಮೋರ್ಸಿಯ ಕಾಟ ತಾಳಲಾಗದೆ ಕ್ರಿಶ್ಚಿಯನ್ನರು ತಮ್ಮ, ನವೆಂಬರ್ ನಲ್ಲಿ ಪೋಪ್ ಚಿಕ್ಕಾಣಿ ಹಿಡಿದ ಟವದ್ರೋಸ್ II ರ ಬಳಿ ತಮ್ಮ ದೂರುಗಳನ್ನಿಟ್ಟಿದ್ದರು ಅದಕ್ಕೆ ಸರಿಯಾಗಿ ಟವದ್ರೋಸ್ II ಮೋರ್ಸಿಯನ್ನು ಬರಿರಂಗವಾಗಿ ನಿಂದಿಸಿದ್ದರು ಮತ್ತು ಕ್ರಿಶ್ಚಿಯನ್ನರು ಎಲ್ಲರಂತೆ ರಾಜಕೀಯ ರಂಗಕ್ಕೂ ಪ್ರವೇಶಿಸಬಹುದೆಂದು ಅನುಮತಿ ನೀಡಿದ್ದ. ಇದೆಲ್ಲಾ ಮೋರ್ಸಿಯನ್ನು ಕೆರಳಿಸಿತ್ತು. ಇನ್ನು ಅದೇ ಊರಿನಲ್ಲಿ ಸ್ವಲ್ಪ ಓದಿ ತಿಳಿದವನನಾಗಿದ್ದವನು ಎಮಿಲಿ ನಸೀಮ್. ಊರಮಂದಿಗೆಲ್ಲಾ ರಾಜಕೀಯ ಮತ್ತು ಇನ್ನಿತರ ಸಮಾಜದಲ್ಲಿನ ವಿಚಾರಗಳನ್ನು ಭೋದಿಸಿ ಅವರ ಸಮಯೆಗಳನ್ನು ಪರಿಹಾರ ಮಾಡಿಕೊಡುತ್ತಿದ್ದ. ಇದರ ಬಗ್ಗೆ ಮೋರ್ಸಿ ಅನೇಕ ಬಾರಿ ನಸೀಮ್ ಜೊತೆ ಕಿತ್ತಾಡಿದ್ದನಾದರು ನಸೀಮನ ನಸೀಬು ಸರಿಯಿದ್ದು ಆತ ಬಚಾವ್ ಆಗುತ್ತಿದ್ದ. ಮೋರ್ಸಿಯ ಈ ದಬ್ಬಾಳಿಕೆ ತಾಳಲಾಗದೇ ನಸೀಮ್ ಮುಸಲ್ಮಾನರ ಜೊತೆಗೂಡಿ ಜೂನ್.30ರಂದು ಒಂದು ದೊಡ್ದ ಪ್ರತಿಬಟನೆಯನ್ನೇ ನಡೆಸಿ ಮೋರ್ಸಿಯ ಅಸಲೀ ಬಣ್ನವನ್ನು ಜನರಿಗೆ ತೋರಿಸಿ ಮೋರ್ಸಿಯನ್ನು ಜುಲೈ.3ರಂದು ಇಸ್ಲಾಮಿಸ್ಟ್ ಅಧ್ಯಕ್ಷತೆಯಿಂದ ಕೆಳಗಿಳಿಸಿದ್ದ.ತನ್ನ ಆಸೆಗಾಗಿ ಅವನ ಕಡೆಯವರನ್ನೇ ಕೊಂದ
ಆದರೆ EVERYDAY IS NOT 30th JUNE ಎನ್ನುವುದು ನಸೀಮ್ ಮರೆತಿದ್ದ. ನಸೀಮನ ನಸೀಬು ಕೆಟ್ಟಿತ್ತು. ಅಂದು ಮೋರ್ಸಿ ಸುಮ್ಮನಿದ್ದನಾದರೂ ನಸೀಮ್ ನನ್ನು ಕೆಡವಲು ಅದಾಗಲೇ ಹೊಂಚು ಹಾಕಿದ್ದ. ತನ್ನ ಕಡೆಯವನಾಗಿದ್ದ ಅದೇ ಊರಿನಲ್ಲಿದ್ದ ಮುಸಲ್ಮಾನನನ್ನು ಕೊಂದಿದ್ದ. ಆ ವ್ಯಕ್ತಿಯ ದೇಹ ಜುಲೈ.5ರಂದು ಊರ ಜನರಿಗೆ ನೈಲ್ ನದಿಯ ಬಳಿ ಸಿಕ್ಕಿತ್ತು. ಅಷ್ಟೇ ಸಾಕಿತ್ತು ಮೋರ್ಸಿಗೆ. ತಡಮಾಡದೇ ತಮ್ಮ ಹುಡುಗನನ್ನು ಕ್ರಿಶ್ಚಿಯನ್ನರು ಹತ್ಯೆಮಾಡಿದ್ದಾರೆಂದು ಗುಲ್ಲೆಬ್ಬಿಸಿ ಏಕಾಏಕಿ ಊರಿನಲ್ಲಿದ್ದ ಕ್ರಿಶ್ಚಿಯನ್ನರ 30ಮನೆಗಳಿಗೆ ನುಗ್ಗಿ ಸಿಕ್ಕ ಸಿಕ್ಕವರಿಗೆ ಥಳಿಸಿದರು. ಅವರುಗಳ ಮನೆಗಳನ್ನು ಸಂಪೂರ್ಣ ನೆಲಸಮ ಮಾಡಿದರು, ಆ ಮನೆಯಲ್ಲಿದ್ದ ಹೆಣ್ಣುಮಕ್ಕಳಿಗೆ ಲೈಂಗಿಕವಾಗಿ ಹಿಂಸಿಸಲಾಯಿತು. ಆದರೆ ಅದು ಅಷ್ಟಕ್ಕೇ ಮುಗಿಯಲಿಲ್ಲ. ಮೋರ್ಸಿ ಪಡೆಯ ದುರುದ್ದೇಶ ಬೇರೆಯೇ ಆಗಿತ್ತು. ನೇರವಾಗಿ ಬಂದು ಎಮಿಲಿ ನಸೀಮ್ ಮನೆಯ ಮುಂದೆ ಬಂದು ಮೊದಲು ಪ್ರತಿಭಟನೆ ಮಾಡಿದರಾದರೂ ಕಡೆಗೆ ಕಲ್ಲುತೂರಾಟ ನಡೆಸಿದರು. ಅಕ್ಕಪಕ್ಕದಲ್ಲಿದ್ದ ಸಹೃದಯಿ ಮುಸಲ್ಮಾನರು ಆ ಗುಂಪನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವರಿಗೂ ಸಹ ಈ ಗುಂಪು ಕತ್ತಿಯ ನೆತ್ತರನ್ನು ತೋರಿಸಿತ್ತು. ನಸೀಮ್ ಹೊರಬರದ್ದಿದ್ದರೆ ಮನೆಯನ್ನು ಧ್ವಂಸ ಮಾಡುವುದಾಗಿ ವಾರ್ನಿಂಗ್ ಕೊಡುತ್ತಿದ್ದರು. ತಕ್ಷಣವೇ ನಸೀಮ್ ನ ಹೆಂಡತಿ ಪೊಲೀಸರನ್ನು ಕರೆದಿದ್ದಾಳೆ. ಅನೇಕ ಬಾರಿ ಕರೆದ ಮೇಲೆ ಬಂದ ಪೊಲೀಸರು ಪರಿಸ್ಥಿಯನ್ನು ಹತೋಟಿಗೆ ತೆಗೆದುಕೊಂಡವರಂತೆ ನಟಿಸಿ ನಸೀಮ್ ಮತ್ತು ಕುಟುಂಬವನ್ನು ವಶಕ್ಕೆ ತೆಗೆದುಕೊಳ್ಳದ್ದೇ ಅಲ್ಲಿಂದ ಹೊರಡುವ ಮಾತಾಡಿದ್ದಾರೆ. ಪೊಲೀಸರು ನಮ್ಮನ್ನು ಬಿಟ್ಟು ಹೋದರೆ ಮನೆಯ ಹೊರಗಡೆ ನಿಂತಿರುವ ಆತಂಕವಾದಿಗಳು ನಮ್ಮ ಜೀವಸಹಿತ ಬಿಡುವುದಿಲ್ಲವೆಂದು ಬೇಡಿದ್ದಾಳೆ. ಆದರೆ ಹೇಗೋ ಕಾರಣಗಳನ್ನು ನೀಡಿ ಪೊಲೀಸರು ಹಿಂದಿನ ಬಾಗಿಲಿನಿಂದ ಟೆಂಟ್ ಕಿತ್ತಿದ್ದಾರೆ. ಈ ವಿಷಯ ತಿಳಿದಿದ್ದೇ, ಆ ಗುಂಪು ನಸೀಮ್ ನ ಮನೆಯೊಳಗೆ ನುಗ್ಗಿ ಅವನ ಹೆಂಡತಿ ಮತ್ತು ಸಹೋದರನನ್ನು ಹತ್ಯೆಮಾಡಿಯೇಬಿಟ್ಟಿತು. ಇನ್ನು ಮನೆಯಲ್ಲಿದ್ದ ನಸೀಮ್ ಮತ್ತು ಅವನ ಸಹೋದರನ ಮಗ ಇಬ್ಬರು ಮೃತಪಟ್ಟವರ ಶವದ ಮುಂದೆ ಕಣ್ಣೀರಿಡುವುದಕ್ಕೂ ಆಗದೇ ಓಟಕ್ಕಿಳಿದಿದ್ದಾರೆ. ಮೊದಲಿಗೆ ವಾಸವಾಗಿದ್ದ ಮನೆಯ ಟಾರ್ಸಿಯ ಮೇಲೆ ಬಚ್ಚಿಟ್ಟುಕೊಂಡರು ಆದರೆ ಅವರನ್ನು ಕಂಡುಹಿಡಿದ ಗುಂಪು ಅಟ್ಟಿಸಿಕೊಂಡು ಬರಲಾರಂಭಿಸಿತು. ಬಿಲ್ಡಿಂಗ್ ಮೇಲಿಂದ ಬಿಲ್ಡಿಂಗ್ ಗೆ ಹಾರಿ ಕೆಳಗೆ ಬಿದ್ದ ನಸೀಮ್ ನನ್ನು ಸುತ್ತುವರಿದ ಸುಮಾರು 15ಜನರ ಗುಂಪು ತಮ್ಮ ಮಾರಕಾಸ್ತ್ರಗಳಿಂದ ಜಜ್ಜಿ ಜಜ್ಜಿ ಕೊಂದರು.ತಪ್ಪಸಿಕೊಂಡ ನಸೀಮ್ ನ ಸಹೋದರನ ಮಗ ಜುಲೈ 9ರ ವರೆಗೂ ಅಡಗಿದ್ದು ಹೇಗೋ ಊರಿಂದ ಹೊರ ಬಂದು ವಿಷಯ ಮುಟ್ಟಿಸಿದ್ದಾನೆ. ಜಾಗೃತಗೊಂಡ ಸಂಘಟನೆಗಳು ಅವನನ್ನು ರಕ್ಷಿಸಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದರಾದರೂ ಇನ್ನೂ ಆ ಗುಂಪನ್ನು ವಶಕ್ಕೆ ತೆಗೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಅಲ್ಲಿಗೆ ಹಳೆಯ ಕಾಲದಲ್ಲಿದ್ದ ಅವಿಧ್ಯಾವಂತ, ಚಾರಿತ್ರ್ಯಹೀನ ರಾಜರ ನಡೆಯನ್ನೇ ಇನ್ನು ಪಾಲಿಸುತ್ತಿದ್ದಾರೆನ್ನಬಹುದೇ ಅಥವಾ ಜಿಹಾದಿಗಳ ತಪ್ಪು ಎನ್ನಬಹುದೇ ಇಲ್ಲವೇ ಧರ್ಮಾಂಧರ ತಪ್ಪೆನ್ನಬಹುದೇ..?? ಎನೇ ಆಗಲಿ ಇಂದು ಆ ರಾಕ್ಷಸರ ಕೃತ್ಯದಿಂದ ಎಮಿಲಿ ನಸೀಮ್ ಮನೆಯ ಕುಟುಂಬವೇ ನಾಶವಾಗಿದೆ. ಇದಕ್ಕೆ ಪ್ರತೀಕಾರವಾಗಿ ಕ್ರಿಶ್ಚಿಯನ್ನರು ಸಿಡಿದೆದ್ದಿದ್ದಾರೆ.. ಇನ್ನು ಖಚಿತವಾಗಿಯೂ Killing Continues!!! ಹೀಗೆ ಧರ್ಮಾಂಧರ ನಾಡಿನಲ್ಲಿ ಬದುಕುತ್ತಿರುವ ಸಹೃದಯಿ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರಿಗೂ ತೊಂದರೆಯುಂಟಾಗುತ್ತಿದೆ. ಇದು ಕೇವಲ ಹೊರದೇಶದ ವಿಷಯವೆಂದು ಭಾರತೀಯರು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ನಮ್ಮಲ್ಲೂ ಸಹ ಅಲ್ಪಸಂಖ್ಯಾತರೆಂದುಕೊಂಡೇ ಜನರ ಶಾಂತಿಯನ್ನು ಕದಡುತ್ತಿರುವ ಓವೈಸಿಯಂಥ ನಾಯಕರನ್ನು ಸರ್ಕಾರ ಇನ್ನಾದರೂ ಕಠಿಣವಾಗಿ ಶಿಕ್ಷಿಸಲಿ ಇಲ್ಲವೇ ಗಡಿಪಾರು ಮಾಡಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ.
No comments:
Post a Comment