ಪಾಕಿಸ್ತಾನದ ಕುತಂತ್ರಕ್ಕೆ ಮತ್ತೊಬ್ಬ ಬಲಿಯಾಗಿದ್ದಾನೆ. ಹೌದು, ಈ ಬಾರಿ ಬಲಿಯಾಗಿದ್ದು ಅಮಾಯಕ ಪ್ರಜೆ ಸರಬ್ಜಿತ್. ಈ ಹಿಂದೆ ರವೀಂದ್ರ ಕೌಶಿಕ್ ನನ್ನು ಇದೇ ಮಾದರಿಯಲ್ಲೇ ಬಲಿ ತೆಗೆದುಕೊಂಡಿದ್ದನ್ನು ಓದಿದ್ದೇವೆ. ಆದರೆ ಆತ ದೇಶಕ್ಕಾಗಿ ದುಡಿದು ವೀರಮರಣವನ್ನು ಮಡೆದನು ಆದರೆ ಪಂಜಾಬಿನ ಬಡ ಕುಟುಂಬದ ಸರಬ್ಜಿತ್ ಆದರೂ ಪಾಕಿಸ್ತಾನಕ್ಕೆ ಏನು ಮಾಡಿದ್ದ?? ಆದರೂ ಸರಬ್ಜಿತ್ ನನ್ನು ಇಟ್ಟಿಗೆಯಲ್ಲಿ ಮತ್ತು ಕಬ್ಬಿಣದ ರಾಡಿನಲ್ಲಿ ಜಜ್ಜಿ ಜಜ್ಜಿ ಕೊಂದಿದ್ದರು.
ಸರಬ್ಜಿತ್‌ನನ್ನು ಹೇಗೆ ವಶಕ್ಕೆ ತೆಗೆದುಕೊಳ್ಳಲಾಯಿತು??
ಅಂದು 1990 ಆಗಸ್ಟ್ 28 ರ ಬೆಳಿಗ್ಗೆ. ಸರಬ್ಜಿತ್ ಎಂದಿನಂತೆ ನೇಗಿಲನ್ನು ಹಿಡಿದು ಉಳುಮೆಗೆ ಹೋಗಿದ್ದ. ಹೋಗಿದ್ದ ಕೆಲಸ ಚೆನ್ನಾಗಿಯೇ ಮಾಡಿದ್ದ. In Fact ಅವನ ಹೆಂಡತಿ ಸುಖ್‌ಪ್ರೀತ್ ಕೌರ್ ಮಧ್ಯಾಹ್ನದ ರೋಟಿ ಮತ್ತು ಅವನ ಇಷ್ಟದ ಮೆಣಸಿನಕಾಯಿಯನ್ನು ತೆಗೆದುಕೊಂಡು ಹೋಗಿದ್ದಳು. ಕುಷಿಯಿಂದ ಊಟ ಸವಿದ ಸರಬ್ಜಿತ್ ಇನ್ನೂ ಕತ್ತಲಾಗುವವರೆಗೂ ಉಳುಮೆ ಮಾಡಿ ಮನೆಗೆ ಬೇಗ ಬರುವೆನೆಂದು ಹೆಂಡತಿಗೆ ಹೇಳಿದ. ಆದರೆ ಅದೇಕೋ ಹೆಂಡತಿಯ ಮನಸ್ಸು ಒಪ್ಪಲಿಲ್ಲ. ಅವಳು ಅಂದು ತಾನೂ ನಿಮ್ಮ ಜೊತೆ ಇದ್ದು ಸಹಾಯ ಮಾಡುವೆನೆಂದು ಗೋಗರೆದಿದ್ದಳು. ಸರಬ್ಜಿತ್‌ಗೆ ಮುಂದಿನ ಅರಿವು ಇರಲಿಲ್ಲವಾದ್ದರಿಂದ ಅವನು ಹೆಂಡತಿಗೆ ಒಂದಿಷ್ಟು ಚೇಷ್ಟೆಯ ಮಾತುಗಳನ್ನಾಡಿದ್ದ. ಹೆಂಡತಿ ಪ್ರೀತಿಯಿಂದಲೇ ಮುನಿಸಿಕೊಂಡು ಹೋಗಿದ್ದಳು. ಸಂಜೆಯಾಗುತ್ತಿದ್ದಂತೆ ನಮ್ಮ ಪಂಜಾಬ್ ಅಥವಾ ಸಿಂಗ್‌ಗಳಿಗೆ ಎಣ್ಣೆ ಏರಿಸುವ ಚಾಳಿಯಿರುತ್ತದೆ. ಏಕೆಂದರೆ ಅವರು ಬೆಳಿಗ್ಗೆಯಿಂದ ಒಂದು ಕ್ಷಣವೂ ಬಿಡದೇ ದುಡಿದು ದುಡಿದು ದಣಿದಿರುತ್ತಾರೆ. ಅದನ್ನು ನಿವಾರಿಸಿಕೊಳ್ಳಲು ಅವರಿಗೆ ಮಧ್ಯಪಾನ ಅತ್ಯವಶ್ಯಕ ಏಕೆಂದರೆ ಮತ್ತೆ ಮಾರನೆಯ ದಿನದ ಬೆಳಿಗ್ಗೆಯಿಂದ ಮತ್ತದೇ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು. ಹಾಗಾಗಿ ಸರಬ್ಜಿತ್ನೂ ಸಹ ಅಂದು ಅವನ ಗ್ರಹಚಾರಕ್ಕೆ ಹೆಚ್ಚಾಗಿಯೇ ಕುಡಿದಿದ್ದ, ಕುಡಿದ ಅಮಲಿನಲ್ಲಿ ಅವನಿಗೆ ಎಲ್ಲಿ ಹೋಗಬೇಕೆಂಬುದು ತಿಳಿಯಲಿಲ್ಲ. ಹಾಗೇ ವಾಲಾಡುತ್ತಾ ಅಂದು ಆಗಸ್ಟ್ 28 ರ ರಾತ್ರಿ ಇಂಡೋ-ಪಾಕ್ ಗಡಿ ಪ್ರದೇಶವಾದ ಕಸುರ್‌ಗೆ ಕುಡಿದ ಅಮಲಿನಲ್ಲೇ ಬಂದು ಬಿದ್ದಿದ್ದ. ಪಾಕಿಸ್ತಾನಕ್ಕೆ ಇಷ್ಟೇ ಸಾಕಿತ್ತು. ಇದನ್ನು ಗಮನಿಸಿದ ಇಲ್ಲಿನ ಇಬ್ಬರು ಯೋಧರು ಅಜ಼ಾದುಲ್ಲಾ ಮತ್ತು ಹಫೀಜ್, ಸರಬ್ಜಿತ್ ಒಬ್ಬ ಭಾರತದಿಂದ ಬಂದ ಉಗ್ರಗಾಮಿಯೆಂದು ತಿಳಿದು ಅವನನ್ನು ಹಿಡಿದುಕೊಟ್ಟರೆ ತನಗೆ ರ‍್ಯಾಂಕ್ ಹೆಚ್ಚಬಹುದೆಂಬ ಆಸೆಯಿಂದ ಅವನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಸರಬ್ಜಿತ್ ಮೇಲೆ ಯಾವ ಚಾರ್ಜ್ ಶೀಟ್ ಹಾಕೆಬೇಕೆಂದು ಹುಡುಕುತ್ತಿದ್ದರು!!
ಸರಬ್ಜಿತ್‍ನನ್ನು ಕರೆತಂದ ಪಾಕಿಸ್ತಾನಿ ಯೋಧರು ಅವನನ್ನು ಊಟ ನಿದ್ರೆಯನ್ನು ಮಾಡಲು ಬಿಡದೆ 8ದಿನಗಳ ಕಾಲ ಅನೈತಿಕವಾಗಿ ವಶದಲ್ಲಿರಿಸಿಕೊಂಡು ನಿಮಿಷ ನಿಮಿಷಕ್ಕೂ ಮಾರಕಾಸ್ತ್ರಗಳಿಂದ ಹಿಂಸೆಯನ್ನು ನೀಡಿ ಅವನನ್ನು ಉಗ್ರಗಾಮಿಯೆಂದು ಒಪ್ಪಿಕೊಳ್ಳಲು ಪೀಡಿಸುತ್ತಿದ್ದರು. ಮೊದಲೇ ಪಂಜಾಬಿನವರು ಅಪಾರ ದೇಶಭಕ್ತರು, ಇನ್ನು ತಾನು ಉಗ್ರಗಾಮಿಯೆಂದು ಒಪ್ಪಿಕೋ ಎಂದರೆ ಸುಮ್ಮನಿರುತ್ತರೆಯೇ?? ಹಾಗಾಗಿ ಸರಬ್ಜಿತ್ನೂ ಸಹ ಒಪ್ಪಲಿಲ್ಲ. ಹೀಗಾಗಿ ಸರಬ್ಜಿತ್‍ನ ಮೇಲೆ ಯಾವ ಕೇಸ್ ಹಾಕಬೇಕೆಂಬುದೇ ತಿಳಿಯದಾಗ್ ಹೋಯಿತು ಆ ಕುತಂತ್ರಿ ಪಾಕಿಸ್ತಾನಿಯರಿಗೆ. ಕಡೆಯದಾಗಿ ಬೇರೆ ವಿಧಿಯಿಲ್ಲದೆ ಸರಬ್ಜಿತ್‍ನನ್ನು ಮಾತನಾಡುವುದಕ್ಕೂ ಆಗದಿರುವ ಹಾಗೆ ಹೊಡೆದು 9ನೇ ದಿನ ಅವನನ್ನು ಆಗಷ್ಟೇ 1990ರಂದು ಫೈಸ್ಲಾಬಾದ್‌ನಲ್ಲಿ ಆಗಿದ್ದ ಬಾಂಬ್ ಬ್ಲಾಸ್ಟ್ ನೆಡೆಸಿದ ಉಗ್ರನೆಂದು ಮೊದಲಿಗೆ ಅಪವಾದ ಹಾಕಿ ಪಾಕಿಸ್ತಾನಿ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಇನ್ನು ಕೆಲ ದಿನಗಳಾದಬಳಿಕ ಅವನೊಬ್ಬ ಭಾರತದ ಸ್ಪೈ ಅಂದರೆ RAW(Research and Analysis Wing) ನ ಏಜೆಂಟ್ ಎಂದು ಹಾಗು ಅವನು ಪಾಕಿಸ್ತಾನದ ಚಲನವಲನಗಳನ್ನು ಗಮನಿಸಲು ಒಬ್ಬ ಕುಡುಕನ ವೇಷದಲ್ಲಿ ಬಂದಿದ್ದಾನೆಂದು ಅನುಮಾನಿಸಿ, ಆ ಅನುಮಾನದ ಮೇಲೆ ಕೇಸನ್ನು ಬದಲಿಸಲಾಯಿತು!!!! ಅಸಲಿಗೆ ಪಾಕಿಸ್ತಾನಕ್ಕೆ ಆತನು ಯಾರೆಂಬುದೆ ತಿಳಿದಿರಲಿಲ್ಲ ಮತ್ತು ಆತನ ಮೇಲೆ ಯಾವ ದೋಷಾರೋಪ ಸಲ್ಲಿಸಬಹುದೆಂದು literally ತಡಕಾಡುತ್ತಿದ್ದರು. ಇನ್ನು ಇತ್ತ ಉಳುಮೆಗೆ ಹೋದವನು ಎಷ್ಟು ದಿನವಾದರೂ ಮನೆಗೆ ಬರದಿರುವುದನ್ನು ಕಂಡ ಮನೆಯವರು ಗಾಬರಿಗೊಂಡು ಪೊಲೀಸ್ ಕಂಪ್ಲೇಂಟ್ ಸಹ ಕೊಟ್ಟಿದ್ದರು. ಆದರೆ ನಮ್ಮ ಪೊಲೀಸ್ ಮಹಾಶಯರಿಗೆ ಒಬ್ಬ ಬಡ ರೈತನ ಬಗ್ಗೆ ಕಾಳಜಿಯೆಲ್ಲಿರಬೇಕು ಹೇಳಿ?? ಹಾಗಾಗಿ ಅವರಿಗೆ ಸರಬ್ಜಿತ್‍ನ ವಿಷಯವಾಗಿ ಯಾವ ಮಾಹಿತಿಯೂ ಸಿಗಲಿಲ್ಲ. ಕಡೆಗೆ ಸರಬ್ಜಿತ್‍ನನ್ನು ಪಾಕಿಸ್ತಾನಿಯರು ಹಿಡಿದು ಹೋಗಿದ್ದಾರೆಂದು ತಿಳಿದುದು ಬರೋಬ್ಬರಿ 9ತಿಂಗಳುಗಳ ನಂತರವೇ!!!! ಇನ್ನು ಸರಬ್ಜಿತ್‍ನನ್ನು ಕುತಂತ್ರದಿಂದ ಹಿಡಿದು ಕೊಟ್ಟ ಯೋಧ ಹಫೀಜ್‍ಗೆ ಪಾಕಿಸ್ತಾನದಲ್ಲಿ ಗುಪ್ತವಾಗಿ ಪರ್ವೀಜ್ ಮುಶರಫ್ ಶ್ಲಾಘಿಸಿ ಅವನ ಆಸೆಯೆಂತೆ ಅವನಿಗೆ ಏಕ್‍ದಮ್ ಮೇಜರ್ ರ‍್ಯಾಂಕ್‍ಗೆ ಏರಿಸಿದರು.
ಹಾಗಿದ್ದರೆ ಸಿಂಹವನ್ನು(ಪಂಜಾಬಿನ ಸಿಂಹ ಸರಬ್ಜಿತ್) ತಂದು ಅದಕ್ಕೆ ಹಿಗ್ಗಮುಗ್ಗ ಥಳಿಸಿ ಅದಕ್ಕೆ ಶೇವಿಂಗ್ ಮಾಡಿ ಸಿಂಹವನ್ನು ನಾಯಿಯೆಂದು ಹಿಡಿದು ಕೊಟ್ಟವರಿಗೆ ಪಾಕಿಸ್ತಾನದಲ್ಲಿ ಸಿಗುವ ಗೌರವವೇ ಪ್ರತಿಷ್ಟಿತ “”ಮೇಜರ್”” ಹುದ್ದೆಯೆಂದಾಯಿತಲ್ಲವೇ??
ವಿಚಾರಣೆಯೇ ಇಲ್ಲದೇ, ಗಲ್ಲು ಶಿಕ್ಷೆ ವಿಧಿಸಿದರು
ಇನ್ನು 199ರಲ್ಲಿ ಸರಬ್ಜಿತ್‍ಗೆ ಪಾಕಿಸ್ತಾನದ Army Act ನ ಅಡಿಯಲ್ಲಿ ವಿಚಾರಣೆಯೇ ಮಾಡದೇ ಗಲ್ಲು ಶಿಕ್ಷೆ ವಿಧಿಸಲಾಯಿತು. ಇದನ್ನು ಪಾಕಿಸ್ತಾನದ ಹೈಕೋರ್ಟ್ ಎತ್ತಿಹಿಡಿದಿತ್ತದರೂ ಪ್ರಯೋಜನವಾಗಲಿಲ್ಲ. ಇನ್ನು ಈ ಕೇಸನ್ನು ಸುಪ್ರೀಮ್ ಕೋರ್ಟ್ ತನ್ನ ತಕ್ಕೆಗೆ ತೆಗೆದುಕೊಂಡು ವಿಚಾರಣೆ ನೆಡೆಸುವುದಾಗಿ ಹೇಳಿತು ಆದರೆ ಸರಬ್ಜಿತ್‍ನ ಗ್ರಹಚಾರ ಎಷ್ಟು ಕೆಟ್ಟದಾಗಿತ್ತೆಂದರೆ ವಿಚಾರಣೆಯ ದಿನ ಸರಬ್ಜಿತ್‍ನ ಲಾಯರ್ ಹಾಜರಾಗದ ಕಾರಣ appeal had been dismissed by the Pakistan Supreme Court for non-prosecution only because of lack of interest by his former lawyer ಎಂದು ತೀರ್ಪು ನೀಡಿ ಸರಬ್ಜಿತ್‍ಗೆ ಗಲ್ಲು ಶಿಕ್ಷೆಯೇ ಕಾಯಮ್‍ಗೊಳಿಸಿ ಎಂದು ಮಾರ್ಚ್ 2006ರಂದು ಫೈನಲ್ ತೀರ್ಪನ್ನು ನೀಡಿತು.
ಜೈಲಿನೊಳಗಿದ್ದ ಆ ದಿನಗಳು
ಜೈಲಿನೊಳಗಿದ್ದ ಅವನ ಪ್ರತಿ ಕ್ಷಣಗಳೂ ಘೋರವಾಗಿದ್ದವು ಅವನಿಗೆ ಹಲವಾರು ಬಾರಿ ಪೊಲೀಸರಿಂದ ಹಿಡಿದು ಖೈದಿಗಳವರೆಗೂ ಪ್ರತಿಯೊಬ್ಬರೂ ಹಿಂಸಿಸುತ್ತಿದ್ದರು. ಈ ಕೃತ್ಯದ ಬಗ್ಗೆ ಆತ ಎಷ್ಟೇ ಪತ್ರಗಳನ್ನು ಬರೆದರೂ ಅದು ಆಫೀಸರ್‌ನ ಟೇಬಲ್ ಮುಟ್ಟುವ ಮ್ಪೊದಲೇ ಹರಿದು ಹೋಗುತ್ತಿತ್ತು. ಹೀಗೆ ಅಲ್ಲಿನ ತನ್ನ ದೇಶದ ಖೈದಿಗಳ ಸಹಾಯದಿಂದ ಸರಬ್ಜಿತ್ ತನ್ನ ಮನೆಯವರಿಗೆ ತನಗೆ ಕೊಡುತ್ತಿರುವ ಕಷ್ಟಗಳ ಬಗ್ಗೆ ಪತ್ರವನ್ನೂ ಬರೆದಿದ್ದ. ಇದನ್ನರಿತ ಸರಬ್ಜಿತ್ ಪರ ಲಾಯರ್ ಅವೈಸ್ ಶೇಕ್‌ರವರು ಸಾಕಷ್ಟು ಪತ್ರಗಳನ್ನು ಬರೆದರೂ At Least ಮಾನವೇಯತೆಗಾಗಿಯಾದರೂ ಒಂದಕ್ಕೂ ಪ್ರತ್ಯುತ್ತರ ಬರೆಯಲಿಲ್ಲ. ಹೀಗೆ ಜೈಲಿನಲ್ಲಿ ಅವರ ಕಷ್ಟಗಳನ್ನು ಸತತ 22 ವರ್ಷಗಳವರೆಗೆ ಸಹಿಸಿಕೊಂಡು ಭೂಲೋಕದಲಲ್ಲೇ ಇನ್ನು ಏಳು ಜನ್ಮದಲ್ಲೂ ಕೊಡಬಲ್ಲಂತಹ ಕಷ್ಟಗಳನ್ನು ಅನುಭವಿಸುತ್ತಾ ಮಾನಸಿಕವಾಗಿ ಮತ್ತು ದೈಹಿಕವಾಗಿ ದುರ್ಬಲನಾಗಿದ್ದ.
ಅಂದು ಏಪ್ರಿಲ್ 26ರ ಮಧ್ಯಾಹ್ನ ಸರಿಸುಮಾರು 4.30. ಸರಬ್ಜಿತ್ ಊಟ ಮುಗಿಸಿಕೊಂಡು, ಅವನಂತೆಯೇ ಮರಣದಂಡನೆ ಶಿಕ್ಷೆಗೆ ಗುರಿಯಾದ ಸರಬ್ಜಿತ್‌ನ ಇನ್ನಿತರ ಸ್ನೇಹಿತರ ಜೊತೆಗೂಡಿ ಅವನ ಸೆಲ್, ಬ್ಲಾಕ್ ನೊ.7ರ ಹೊರಗೆ ವಾಯುವಿಹಾರಕ್ಕೆಂದು ಹೊರಟ್ಟಿದ್ದನು ಆದರೆ ವಿಧಿ ಸರಬ್ಜಿತ್‌ಗಾಗಿ ಕಾಯುತ್ತಿತ್ತು. ಅವನು ಹೊರ ಬರುವುದನ್ನೇ ಕಾಯುತ್ತಿದ್ದ ಅಮಿರ್ ಅಫ್ತಾಬ್ ಹಾಗು ಮುದಾಸ್ಸಿರ್ ಎಂಬ ಇಬ್ಬರು ಪಾಕಿಸ್ತಾನಿ ಖೈದಿಗಳು ಸರಬ್ಜಿತ್‍ನ ಪಕ್ಕದಲ್ಲಿ ಅವಹ್ನ ಸ್ನೇಹಿತರಿದ್ದರೂ ಸರಬ್ಜಿತ್‍ನ ಮೇಲೆ ಹಿಂದಿನಿಂದ ಎರಗಿದರು. ಇಲ್ಲಿ ನಾವು ಗಮನಿಸಬೇಕಾದ ವಿಷಯವೇನೆಂದರೆ ಆ ಕೃತ್ಯ ಸರಬ್ಜಿತ್‍ನ ಮೇಲೆ ಪೂರ್ವ ನಿಯೋಜಿತವೆಂಬುದು. ಸರಬ್ಜಿತ್‍ನ ಮೇಲೆ ಎರಗಿದವರೇ ತಮ್ಮ ಬಳಿಯಿದ್ದ ಕಬ್ಬಿಣದ ರಾಡ್‍ಗಳು ಮತ್ತು ಚಾಕುವಿನಿಂದ ಅವನ ಮುಖ ಮತ್ತು ತಲೆಯ ಭಾಗಗಳಿಗೆ ಮೊದಲು ಇರಿದರು. ಅವರ ಹೊಡೆತಕ್ಕೆ ಸರಬ್ಜಿತ್ ಅಲ್ಲೆ ಸತ್ತು ಹೋದನೆಂದು ಆ ಖೈದಿಗಳು ಭಾವಿಸಿದರು. ಆದರೆ ಆತ ಮತ್ತೆ ಎದ್ದು ಕಣ್ಣು ಬಿಟ್ಟಿದ್ದನ್ನು ಗಮ್ನನಿಸಿದ ಖೈದಿಗಳು ತಕ್ಷಣವೇ ಧಾವಿಸಿ ಬಂದು ಅಲ್ಲೇ ಇದ್ದ ಇಟ್ಟಿಗೆಗಳನ್ನು ತೆಗೆದುಕೊಂಡು ಸುಮಾರು ಎಂಟು ಒಂಭತ್ತು ಬಾರಿ ಜಜ್ಜಿ ಜಜ್ಜಿ, ಅವನು ಎಚ್ಚರ ತಪ್ಪಿದ ಮೇಲೆ ಆ ಖೈದಿಗಳು ಆತ ಸತ್ತನೆಂದು ಭಾವಿಸಿ “ಮರ್‌ಗಯಾ ಸಾಲೆ” ಎಂದು ಹೊರಟು ಹೋದರು. ಮತ್ತು ಅಲ್ಲೇ ನಿಂತು ನೋಡುತ್ತಿದ್ದ ಸಶಸ್ತ್ರ ವಾರ್ಡ್‌ಗಳು ಸರಬ್ಜಿತ್‍ಗೆ ಹೊಡೆಯುವಾಗ ಬಿಡಿಸಿವ ಕನಿಷ್ಟ ಪ್ರಯತ್ನವೂ ಮಾಡಲಿಲ್ಲ. ಆದರೆ ಇಟ್ಟಿಗೆಯಲ್ಲಿ ಹೊಡೆಯುತ್ತಿರುವಾಗ ಬಂದು ಅಡ್ದಗಟ್ಟಿದ್ದಕ್ಕೆ ತಮಗೆ ಗಾಯವಾಯಿತೆಂದು ಸುಳ್ಳು ಹೇಳಿಕೆ ನೀಡಿ ಆ ಇಬ್ಬರು ಖೈದಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅವರು ಹೊಡೆದ ಹೊಡೆತಕ್ಕೆ ಸರಬ್ಜಿತ್ ಕೋಮಾಗೆ ಹೋಗಿದ್ದ ಮತ್ತು ಮೆದುಳು ಸಹ ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿವ ಹಂತದಲ್ಲಿತ್ತು ಎಂದ ಆಸ್ಪತ್ರೆಯ ವರದಿಯಿಂದ ತಿಳಿದುಬಂದಿದೆ. ಇನ್ನು ಪೊಲೀಸರು ಪಾಕಿಸ್ತಾನದ ಮೀಡಿಯಾಗೆ ವಿವರಗಳನ್ನು ನೀಡಬೇಕಾದರೆ ಆ ಇಬ್ಬರು ಖೈದಿಗಳು ಅಮಿರ್ ಮತ್ತು ಮುದಾಸ್ಸಿರ್‌ನನ್ನು ಬಿಟ್ಟು ಇನ್ಯಾವುದೋ ಆರು ಖೈದಿಗಳ ಹೆಸರನ್ನು ಪ್ರಸ್ಥಾಪಿಸಿದರು. ಇಲ್ಲಿಗೆ ಸರಬ್ಜಿತ್‍ನ ಸಾವು ಪೂರ್ವನಿಯೋಜಿತವೆಂಬುದು ಫಿಕ್ಸ್ ಆಯಿತು. ಕಡೇ ಪಕ್ಷ ಕೋಮಾದಲ್ಲಿದ್ದ ಸರಬ್ಜಿತ್‍ನನ್ನು ಎಥಾಸ್ಥಿತಿಯಲ್ಲಿ ನಮಗೆ ಹಸ್ತಾಂತರಿಸಿಯೆಂದು ಸರಬ್ಜಿತ್‌ನ ಸಹೋದರಿ ದಲ್ಬಿರ್ ಕೌರ್ ಪಾಕಿಸ್ತಾನವನ್ನು ಕೇಳಿದಾಗ, ಅಲ್ಲಿದ್ದ ಪಾಕಿಸ್ತಾನದ so called ಸಮಾಜ ಸೇವಕ ಅನ್ಸರ್ ಬರ್ನಿ, 25ಕೋಟಿ ಹಣವನ್ನು ಡಿಮ್ಯಾಂಡ್ ಮಾಡಿದ್ದರು ಆದರೆ ನಾವು ಅಷ್ಟು ಹಣ ಕೊಡಲು ಶಕ್ತರಲ್ಲವೆಂದು ಹೇಳಿದಾಗ ಕೊನೇಯದಾಗಿ 2ಕೋಟಿಯನ್ನಾದರೂ ವ್ಯವಸ್ಥೆ ಮಾಡಿಕೊಳ್ಳಲು ಹೇಳಿದ್ದರು. ಅಂದು ನಾವು 2ಕೋಟಿ ಕೊಟ್ಟಿದ್ದರೂ ಸರಬ್ಜಿತ್‌ನನ್ನು ಜೀವಂತ ನೋಡಬಹುದಿತ್ತು ಎಂದು ದಲ್ಬಿರ್ ಕೌರ್ ಕಣ್ಣೀರಿಡುತ್ತಾರೆ. ಇನ್ನು ಇಷ್ಟೇಲ್ಲಾ ಪಾಪದ ಕೃತ್ಯವನ್ನು ಮಾಡಿ ಪಾಕಿಸ್ತಾನ ತಾನು ಸರಬ್ಜಿತ್‍ಗೆ ಉತ್ತಮ ಚಿಕಿತ್ಸೆಯನ್ನು ನೀಡುತ್ತಿದ್ದೇವೆಂದು ಪಂಚತಂತ್ರದ ಕಥೆಗಳನ್ನು ಹೇಳುತ್ತಲೇ ಇತ್ತು. ಇದನ್ನು ಕೇಳಿ ಕೇಳಿ ಎಂದಿನಂತೇ ಸುಮ್ಮನೇ ಬಾಯಿಗೆ ಬೀಗ ಜಡಿದುಕೊಂಡು ಬರುತ್ತಿದರು ನಮ್ಮ ಪ್ರಧಾನಿಗಳು. ಇತ್ತ ಎಲೆಕ್ಷನ್ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ಪ್ರಧಾನಿಗಳು ಸಾರ್ವಜನಿಕ ಸಭೆಯಲ್ಲಿ ಸರಬ್ಜಿತ್‍ನ ಬಗ್ಗೆ ಮಾನವೀಯತೆಗಾದರೂ ಒಂದು ಮಾತನ್ನು ಆಡದೇ ಚೀಟಿಯಲ್ಲಿ ಬರೆದುಕೊಟ್ಟ ಭಾಷಣವನ್ನು ಎಥಾವತ್ತಾಗಿ ಮಕ್ಕಳು ಮಗ್ಗಿ ಹೇಳುವಂತೆ ಹೇಳಿ ಕರ್ನಾಟಕದಿಂದ ಕಾಲ್ಕಿತ್ತರು. ಒಮ್ಮೆ ಆಲೋಚಿಸಿ, ನಮ್ಮಲ್ಲೇ ಇದ್ದ ಕಸಬ್ ನನ್ನು ನಮ್ಮ ದೇಶದವರು ಅವನಿಗೆ ವಿವಿಐಪಿ ಗಿಂತಲೂ ಅದ್ಭುತ ಸವಲತ್ತುಗಳನ್ನು ಕೊಟ್ಟು ಬರೋಬ್ಬರಿ 31ಕೋಟಿಯನ್ನು ಅವನಿಗಾಗಿ ಕರ್ಚು ಮಾಡಿದ್ದಾರೆ. ಆದರೆ ಅಮಾಯಕ ಸರಬ್ಜಿತ್‌ನನ್ನು ಪೂರ್ವ ನಿಯೋಜಿತವಾಗಿ ಸಾಮಾನ್ಯ ಸೆಲ್‍ನಲ್ಲಿ ಕೂಡಿಹಾಕಲಾಯಿತು! ಅದೇ 31ಕೋಟಿಯಿಂದ ಇನ್ನು 10 ಕಸಬ್‍ನನ್ನು ಪಾಕಿಸ್ತಾನದ ವಿರುದ್ಧ ಹುಟ್ಟುಹಾಕಬಹುದಿತ್ತು ಭಾರತ. ಅದೇ ಭಾರತ ಮತ್ತು ಪಾಕಿಸ್ತಾನಕ್ಕೆ ಇರುವ ವ್ಯತ್ಯಾಸ. ಅದಿರಲಿ, ಇಂದು ಸರಬ್ಜಿತ್‍ನ ಮನೆಯವರು ಅವನ ಪಾರ್ಥೀವ ಶರೀರಕ್ಕಾಗಿ ಹಾತುಹೊರೆಯುತ್ತಿದ್ದಾರೆ. ಮತ್ತು ಸರಬ್ಜಿತ್‍ನನ್ನು “Martyr (ಧರ್ಮವೀರ)” ನೆಂದು ಗೌರವಿಸಬೇಕೆಂದು ಅವವ ಮನೆಯವರು ಮತ್ತು ಊರಿನವರು ಹಾಗು ಇಡೀ ದೇಶವೇ ಕೂಗುತ್ತಿದೆ. ಕನಿಷ್ಟ ಪಕ್ಷ ಆ ಪುಕ್ಕಲು/ರಣಹೇಡಿ ಸರ್ಕಾರ Martyr Sarabjit Singh ಎಂದಾದರೂ ಗೌರವಿಸಲಿ ಮತ್ತು ಸರಬ್ಜಿತ್‍ನ ಆತ್ಮ ಆ ಭಾರತಾಂಬೆಯ ಮಡಿಲನ್ನು ಸೇರಲಿಯೆಂಬುದೆ ನಮ್ಮೆಲರ ಆಶಯ!
----------ಚಿರಂಜೀವಿ ಭಟ್ email: chirubhat007@gmail.com
©Chiranjeevi Bhat
--------------
--------------
ಚೆನ್ನಾಗಿ ಬರೆದಿದ್ದೀರಿ..... ಸರಭಜಿತ್ ಬಗ್ಗೆ ಓದುವಾಗ ಮನ ಕಲಕುತ್ತದೆ. ಆದರೆ ಮತ್ತೂ ಬೇಸರದ ಸಂಗತಿಯೆಂದರೆ ಈ ವಿಷಯವಾಗಿ ನಮ್ಮ ಲೋಕಲ್ ಬುದ್ಧಿಜೀವಿಗಳು ಚಕಾರ ಎತ್ತಲಿಲ್ಲ.
ReplyDeleteಹೌದು.. ಏನ್ ಮಾಡೋದು ಹೇಳಿ..?? ನಾವು ಇರೋದು ಭಾರತದಲ್ಲಿ!! ಅನುಭವಿಸಲಿಕ್ಕೆ ಇನ್ನು ಸಾಕಷ್ಟಿದೆ..!!
ReplyDeleteಎಂತಾ ದೇಶದಲ್ಲಿ ಇದ್ದೀವಿ ಅಂತ ಒಮ್ಮೊಮ್ಮೆ ಬಹಳ ಬೇಜಾರಾಗುತ್ತದೆ. ಆತನ ದೇಹ ಬಂದಮೇಲೆ ಅದರಲ್ಲಿ ಕಿಡ್ನಿ ಮುಂತಾದ ಅಂಗಗಳನ್ನು ತೆಗೆಯಲಾಗಿತ್ತು ಅಂತ ಪತ್ರಿಕೆಗಳಲ್ಲಿ ಓದಿದೆ. :( :(
ReplyDeleteNice Point Vi.Ra.He..!! Can u give me the link of that paper which u read????
ReplyDeletejust say "no comments" to this article...cz any comment can't full fill the target tht i wn 2 say.
ReplyDelete