Translate

Monday, 15 July 2013

“ಖಾನ್‌ ಗ್ರೇಸ್” ಭಾರತದಲ್ಲಿ “ನಾನು ಹಿಂದು” ಎಂದರೂ ತಪ್ಪೇ???

     ಖಾನ್‌ ಗ್ರೇಸ್ಭಾರತದಲ್ಲಿನಾನು ಹಿಂದುಎಂದರೂ ತಪ್ಪೇ???



    
ಅಂತು ಇಂತು ಸನ್ಮಾನ್ಯ ನರೇಂದ್ರ ಮೋದಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದಾಯಿತು. ಇನ್ನು BJP ಮೂಲಗಳ ಪ್ರಕಾರ ಇದೇ ಜುಲೈ ಅಂತ್ಯದಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವುದು ಬಹುತೇಕ ಖಚಿತವಾಗಿದೆ. ಇದರಿಂದ ತಲೆ ಕೆಡಿಸಿಕೊಂಡ ಕಾಂಗ್ರೇಸ್ ಚೇಲಾಗಳಂತಿರುವ ಕೆಲ ಆಂಗ್ಲ ಮತ್ತು ಹಿಂದಿ ಮಾಧ್ಯಮಗಳು ಮೋದಿಯ ವಿರುದ್ಧ ಬೇಕಾ ಬಿಟ್ಟಿ ಪ್ರಚಾರ ಮಾಡಿ ಪುಕ್ಕಟೆಯಾಗಿ TRP ಹೆಚ್ಚಿಸಿಕೊಳ್ಳುವ ಗೋಜಿನಲ್ಲಿದ್ದಾರೆ. ಇನ್ನು ಕಾಂಗ್ರೇಸ್ ನಾಯಕರು ಏನಾದ್ರು ಮಾಡ್ರೋ!!! ಎಂದು ಸೋನಿಯಾ TO ರಾಹುಲ್.... ರಾಹುಲ್ TO ಸೋನಿಯಾಎಂದು ಬೋರ್ಡ್ ತಗಲುಹಾಕಿಕೊಂಡು ದಿನವಿಡಿ TRIP ಹೊಡೆಯುತ್ತಿದ್ದಾರೆ. ಇನ್ನು ಸೋನಿಯಾ ಏನ್ ಮಾಡೋದು ಎಂದು ಯೋಚಿಸಷ್ಟರಲ್ಲೇ ನರೇಂದ್ರ ಮೋದಿ, ಪತ್ರಕರ್ತೆ ಶೃತಿ ಜೊತೆ ಸಂದರ್ಶನದಲ್ಲಿ ನಾನು ಒಬ್ಬ HINDU NATIONALIST” ಎಂದು ಹೇಳಿದ್ದಕ್ಕೆ ಕಾಂಗ್ರೇಸ್ ಪಡೆ ದೇಶವೇ ಏನೋ ಮುಳುಗಿ ಹೋಯಿತು ಎನ್ನುವಷ್ಟರ ಮಟ್ಟಿಗೆ ಬಿಲ್ಡಪ್ ಕೊಡುತ್ತಾ ಮಾಧ್ಯಮಗಳಿಗೆ ಫೋನಾಯಿಸಿ ಕರೆದು TV  ಮುಂದೆ ಬಂದು ಸಂಭಂಧಿಕರು ತೀರಿಕೊಂಡಂತೆ ಬಾಯಿ ಬಡಿದುಕೊಳ್ಳುತ್ತಿದ್ದಾರೆ. ಒಮ್ಮೆ ಆಲೋಚನೆ ಮಾಡಿ, ಮೋದಿ ಹುಟ್ಟಿದ್ದು ಹಿಂದು ಕುಟುಂಬದಲ್ಲಿ ಅದಕ್ಕೆ ಅವರು ನಾನು ಹಿಂದು ಮತ್ತು ಭಾರತೀಯ ಎಂದು ಸಹಜವಾಗಿಯೇ ಹೇಳಿದ್ದಾರೆ. ಇದರಲ್ಲಿ ತಪ್ಪೇನಿದೆ?? ಅಂದು ಓಮರ್ ಅಬ್ದುಲ್ಲಾ ನಾನು ಮೊದಲು ಮುಸ್ಲಿಮ್ ನಂತರ ಭಾರತೀಯ ಎಂದು ಹೇಳಿದಾಗ ಖಾನ್ ಗ್ರೇಸ್ಏನು ಮಾಡುತ್ತಿತ್ತು?? ಮಾಧ್ಯಮಗಳು ಎಲ್ಲಿ ಹೋಗಿತ್ತು?? ಅಷ್ತಕ್ಕೂ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದು ಇಂಥ ಹೊಲಸು ಜಾತಿ ರಾಜಕಾರಣವೇ ಹೊರತು ಮತ್ತಿನೇನಲ್ಲ. ಮೋದಿಯವರನ್ನು CONCLAVE, ಪ್ರೆಸ್ ಮೀಟ್,  ಇನ್ನಿತರ ಕಾರ್ಯಕ್ರಮಗಳೆಲ್ಲ ಕಡೆಯೂ ಅದೇ 2002ನೇ ಇಸವಿಯ ಹತ್ಯಾಕಾಂಡದ ಪ್ರಶ್ನೆಯನ್ನೇ ಪದೇ ಪದೇ ಕೇಳುವ ಅಗತ್ಯವೇನಿದೆ?? ಅದೂ, SIT ಅವರಿಗೆ ಕ್ಲೀನ್ ಚಿಟ್ ಕೊಟ್ಟ ಮೇಲೆ!!! ಮುಸ್ಲಿಮ್ ಗುಂಪು ಗೋಧ್ರಾ ಸ್ಟೇಷನ್ ನಲ್ಲಿ ಸಾವಿರಾರು ಹಿಂದುಗಳ ಮಾರಣ ಹೋಮವನ್ನೇ ಮಾಡಿದರರು. ಆಗ ಮೋದಿಯೇನು ಅಹಮ್ಮದಾಬಾದ್ ಬೀದಿಗಳಲ್ಲಿ AK47  ಹಿಡಿದು ಮುಸಲ್ಮಾನರನ್ನು ಕೊಂದಿದ್ದರೇ??

ಇನ್ನು ಮಾಧ್ಯಮಗಳಲ್ಲಿ ಮೋದಿಯನ್ನುಮೌತ್ ಕಾ ಸೌದಾಗರ್ಎಂದು ಕರೆದಿದ್ದೇಕೆ?? ಹತ್ಯಾಕಾಂಡದ ಸಮಯದಲ್ಲಿ ಮೋದಿ ಮುಖ್ಯಮಂತ್ರಿಯಾಗಿದ್ದರು ಎಂಬ ಒಂದೇ ಕಾರಣಕ್ಕೆ ಅವರನ್ನು ಮೌತ್ ಕಾ ಸೌದಾಗರ್ ಎಂದು ಕರೆಯುವುದಾದರೆ ರಾಜೀವ್ ಗಾಂಧಿಯ ಅಧಿಕರಾವಧಿಯಲ್ಲಿ ಸಾವಿರಾರು ಅಮಾಯಕ ಸಿಖ್ಖರ ಮಾರಣಹೋಮವನ್ನೇ ಮಾಡಲಾಯಿತಲ್ಲ ಆಗ ರಾಜೀವ್ ಗಾಂಧಿಯನ್ನು ಏಕೆ ಮೌತ್ ಕಾ ಸೌದಾಗರ್ ಎಂದು ಕರೆಯಲಿಲ್ಲ??
1992ರಲ್ಲಿ ಖಾನ್‌ಗ್ರೆಸ್‌ನ ಸುಧಾಕರ್ ರಾವ್ ಮುಖ್ಯಮಂತ್ರಿಯಾಗಿದ್ದಾಗ ಮುಂಬೈನಲ್ಲಿ ದೇಶ ಕಂಡರಿಯದಂಥ ದೊಡ್ಡದೊಂದು ಗಲಭೆ ನಡೆಯಿತು. ಅವರನ್ನು ನಿಯಂತ್ರಿಸುವುದಕ್ಕೂ ಆಗಲಿಲ್ಲ. ಮತ್ತು ಅವರ ಕಾಲಾವಧಿಯಲ್ಲಿ ಇನ್ನು ಅನೇಕ ಗಲಭೆಗಳು ನೆಡೆದಿರುವುದಕ್ಕೆ ಉದಾಹರಣೆಗಳು ಸಿಗುತ್ತವೆ. ಆದರೆ ಸುಧಾಕರ್ ರಾವ್ ಅವರನ್ನ ಮಾತ್ರ ಏಕೆ ಮೌತ್ ಕಾ ಸೌದಾಗರ್ ಎಂದು ಕಾಂಗ್ರೆಸ್ ಕರೆಯಲಿಲ್ಲ??
ಸರಿ, ನರೇಂದ್ರ ಮೋದಿ ಅವರನ್ನು ಒಬ್ಬ ಕಮ್ಯೂನಿಸ್ಟ್ ಎಂದು ಹೇಳುವುದಾದರೆ, ಮೋದಿ ಇಂದು ಗುಜರಾತ್‌ನಲ್ಲಿ ಅನೇಕ ಫ್ಲೈ ಓವರ್, ರಸ್ತೆಗಳು, ಆಸ್ಪತ್ರೆಗಳನ್ನು ಕಟ್ಟಿಸಿದ್ದಾರೆ. ಇದೆಲ್ಲಾ ಸೌಕರ್ಯಗಳನ್ನು ಕೇವಲ ಹಿಂದುಗಳಿಗಾಗಿಯೇ ಎಂದು ಬೋರ್ಡು ತಗಲುಹಾಕಿದ್ದರೇ?? ದೊಡ್ಡ ದೊಡ್ಡ ಇಂಡಸ್ಟ್ರಿಗಳಿಂದ ಲಕ್ಷಾಂತರ ಹುದ್ದೆಗಳನ್ನು/ಉದ್ಯೋಗಾವಕಾಶವನ್ನು ಸೃಷ್ಟಿಸಿರುವ ಮೋದಿ ಹಿಂದುಗಳಿಗೆ ಮಾತ್ರ ನೀದಿದ್ದಾರೆಯೇ? ಅಥವಾ ಹಿಂದುಗಳಿಗೆ ಈ ಸೌಕರ್ಯಗಳನ್ನು ಬಳಸಲು ವಿಶೇಷ ಮೀಸಲಾತಿಯನ್ನೇನಾದರು ಕೊಟ್ಟಿದ್ದರೇ?? ಹಾಗೆ ನೋಡಿದರೆ ಅದನ್ನೆಲ್ಲಾ ಕೊಟ್ಟವರು
 ಕಾಂಗ್ರೇಸಿನವರು. ಕರ್ನಾಟಕದಲ್ಲಿ ನಮ್ಮ ಸರ್ಕಾರ ಬಂದರೆ ಗೋ ಹತ್ಯೆ ನಿಷೇಧವನ್ನು ರದ್ದು ಮಾಡುತ್ತೇವೆ ಎಂದು ಸನ್ಮಾನ್ಯ ಸಿದ್ದರಾಮಯ್ಯನವರು ಹೇಳುತ್ತಾರೆಂದರೆ ಕಾಂಗ್ರೇಸ್ ಸರ್ಕಾರ ಪಕ್ಕಾ ಖಾನ್‌ಗ್ರೇಸ್ ಸರ್ಕಾರ ಎಂದು ಸಾಬೀತಾಯಿತಲ್ಲ. ಗೋ ಹತ್ಯೆ ನಿಷೇಧವನ್ನು ರದ್ದು ಮಾಡುತ್ತೇವೆಎಂದು ಹೇಳುವಾಗ ಬಹುಸಂಖ್ಯಾತ ಹಿಂದೂಗಳ ಭಕ್ತಿ ಭಾವನೆಗಳಿಗೆ ಧಕ್ಕೆಯಾಗುತ್ತವೆಯೆನ್ನುವುದು ಸ್ವತ: ಹಿಂದುವಾದ ಸಿದ್ದರಾಮಯ್ಯನವರಿಗೆ ತಿಳಿಯಲಿಲ್ಲವೇ?? ಅಲ್ಲಿ ಅವರ ಮುಸ್ಲಿಮ್ ವೋಟ್ ಮಾತಾಡುತ್ತಿತ್ತು. ಆದರೆ ಅದೇ ಮೋದಿಯವರು ಹಂದಿ ಮಾಂಸವನ್ನು ಶಾಲಾ ಕಾಲೇಜುಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಹಂಚುವಂತೆ ಆದೇಶಿಸಿದ್ದರೆ ಏನಾಗುತ್ತಿತ್ತು ಹೇಳಿ?? ಇನ್ನು ಮನಮೋಹನ್ ಸಿಂಗ್ ಕೂಡ “Muslims have first share in India’s resources” ಎಂದಿದ್ದಾರೆ. ಯಾರನ್ನು ಮೆಚ್ಚಿಸುವುದಕ್ಕೆ ಕಾಂಗ್ರೇಸ್ ಈ ಮಾತನ್ನು ಪಡಪಾಯಿ ಪ್ರಧಾನಿ ಮನಮೋಹನ್ ಸಿಂಗ್ ಬಾಯಲ್ಲಿ ಹೇಳಿಸಿತು?? COMMUNALIST ಮತ್ತು NATIONALIST ಪದದ ಅರ್ಥವೇ ಕಾಂಗ್ರೇಸನವರಿಗೆ ಸರಿಯಾಗಿ ಗೊತ್ತಿಲ್ಲ ಅಂತ ಕಾಣುತ್ತೆ, ಉದಾಹರಣೆಯೆಂಬಂತೆ, ನಾಡಿನ ಯುವರಾಜನೆಂದೇ ಬಿಟ್ಟಿ ಪೋಸ್ ಕೊಡುತ್ತಿರುವ ಪಪ್ಪು ರಾಹುಲ್ ಗಾಂಧಿ ಉತ್ತರಪ್ರದೇಶದ ರೈತರನ್ನುದ್ದೇಶಿಸಿ ಮಾತನಾಡುವಾಗ I AM ASHAMED TO CALL MYSELF AS INDIAN ಎಂದು ಬಹಿರಂಗ ಸಭೆಯಲ್ಲಿ ಮೈಕಿನಲ್ಲಿ ಕೂಗಿ ಹೇಳಿದರೂ ಅವರು NATIONALIST.. ಮೋದಿಯವರು ನಾನೊಬ್ಬ ಹಿಂದು ಎಂದಿದ್ದಕ್ಕೆ COMMUNALIST ಆಗಿ ಬಿಟ್ಟರೇ?? ನಮ್ಮ ಭಾರತದಲ್ಲಿ ಹುಟ್ಟಿ ಬೆಳೆದ ಹಿಂದೂಗಳೇ ಹಿಂದು ಉಗ್ರಗಾಮಿಗಳಾಗಿ ದೇಶವನ್ನು ಹಾಳುಗೆಡವುತ್ತಿದ್ದಾರೆಂದು ಪಪ್ಪು ರಾಹುಲ್ ಹೇಳಿದಾಗ ಏಕೆ ಯಾವ ಕಾಂಗ್ರೇಸ್ ನವರು ತುಟಿ ಬಿಚ್ಚಲಿಲ್ಲ. ಎಲ್ಲದರಲ್ಲೂ ನಂದೂ ಒಂದ್ ಇರಲಿ ಎಂದು ಬರುವ ದಿಗ್ವಿಜಯ್ ಸಿಂಗ್ ಏಕೆ ಮೂಕರಾಗಿದ್ದರು?? ಹಾಸ್ಯ ಮಾಡುವುದಕ್ಕೂ ಒಂದು ಇತಿಮಿತಿಯಿಲ್ಲವೇ ಡಿಯರ್ ಕಾಂಗ್ರೇಸ್??  ಸರಿ, ಭಾರತದಲ್ಲಿ ಜಾತಿಯ ಬಗ್ಗೆ ಮಾತನಾಡಲೇ ಬಾರದು ಎಂದಾದರೆ Reservation ಪದ್ದತಿಯನ್ನೇಕೆ ಇಟ್ಟಿರಿ?? ಮುಸಲ್ಮಾನರು ಅಲ್ಪ ಸಂಖ್ಯಾತರೆಂದು ಅವರಿಗೆ ಮೀಸಲಾತಿಯನ್ನೇಕೆ ಕೊಟ್ಟಿರಿ?? ಹೀಗೆ ಅಲ್ಪ ಸಂಖ್ಯಾತರೆಂದು ಪರಿಗಣಿಸಿದ್ದಕ್ಕೆ ಓವೈಸಿ ನಾವು(ಮುಸಲ್ಮಾನರು) ಅಲ್ಪ ಸಂಖ್ಯಾತರಿರಬಹುದು ಆದರೆ ಕೇವಲ 20 ನಿಮಿಷದಲ್ಲಿ ಬಹುಸಂಖ್ಯಾತ ಹಿಂದೂಗಳನ್ನು ಹೋಡೆದುರುಳಿಸುತ್ತೇವೆಎಂದಾಗ ಅವನನ್ನು ಕೇವಲ 14 ದಿನಗಳ ಕಸ್ಟಡಿಗೆ ತೆಗೆದುಕೊಂಡು ರಾಜಮರ್ಯಾದೆಯಿಂದ ಮನೆಗೆ ಕಳುಹಿಸಿ ಬಿಟ್ಟರಲ್ಲ??  ಏಕೆ??  ಓವೈಸಿಯನ್ನು ಒಳಗಿಟ್ಟರೇ ಮುಸಲ್ಮಾನರ ಓಟು ಬೀಳುವುದಿಲ್ಲವೆಂಬ ಭಯವೇ?? ಅಥವಾ ನಿಮ್ಮ ಮನೆಗಳ ಮೇಲೆ ಕಲ್ಲು ಬೀಳುತ್ತದೆಯೆಂಬ ಅಂಜಿಕೆಯೇ?? ಅಷ್ಟಕ್ಕೂ ಮೋದಿ 2002 ಗೋಧ್ರಾ ಹತ್ಯಾಕಾಂಡದ ಬಗ್ಗೆ ಹೇಳಿದ್ದಾದರೂ ಏನು?? ನಮ್ಮವರೊಬ್ಬರು ಕಾರು ಓಡಿಸುತ್ತಿರುವಾಗ ಒಂದು ನಾಯಿಮರಿ ಕಾರಿನ ಚಕ್ರಕ್ಕೆ ಸಿಕ್ಕರೆ ನಾವು ಹಿಂದೆ ಕುಳಿತಿದ್ದರೂ ನಮ್ಮ ಮನಸ್ಸಿಗೆ ನೋವಾಗುವುದಿಲ್ಲವೇ?? ನಾನು CM ಎನ್ನುವುದಕ್ಕೂ ಮೊದಲು ಒಬ್ಬ ಮನುಷ್ಯ ಅದಕ್ಕಾಗಿ ನನಗೆ ಆ ಹತ್ಯಾಕಾಂಡದಿಂದ ಬೇಸರವಾಗಿದೆ ಎಂದಿದ್ದಕ್ಕೆ ಮುಸಲ್ಮಾನರು ನಿಮಗೆ ನಾಯಿಗಿಂತಲೂ ಕಡೆಯಾದರೇ? ಎಂದು ಬೊಬ್ಬೆ ಹೊಡೆಯುವ ನಾಯಿ ಬುದ್ಧಿಯ ಸಮಾಜವಾದಿ ಪಕ್ಷದ ಕಮಲ್ ಫರೂಕಿಗೆ ಎನನ್ನೋಣ ಹೇಳಿ??
It is utterly shameful that he is justifying the genocide and using inappropriate examples and analogies to trivialise the enormity of it ಎಂದು ಮೋದಿ ಕೊಟ್ಟ ಉದಾಹರಣೆಯನ್ನು ಟೀಕೆ ಮಾಡುವ ಕಾಂಗ್ರೇಸ್, ಪಪ್ಪು ರಾಹುಲ್ ದೊಡ್ಡ ಬ್ಯುಸಿನೆಸ್ ಸೆಮಿನಾರ್ ನೆಡೆದಾಗ ಎಲ್ಲಾ ಶ್ರೀಮಂತ ಬ್ಯುಸಿನೆಸ್‌ಮ್ಯಾನ್‌ಗಳ ಮುಂದೆ ಯಾವುದೋ ಒಂದು ಬಡವನನ್ನು ನಾನು ರೈಲಿನ್ಲ್ಲಿ ಬೇಟಿಯಾದೆ ಆತನ ಕೈಯಲ್ಲಿ ಒಂದು ನಯಾ ಪೈಸವೂ ಇರಲಿಲ್ಲ ಆದರೆ ಬ್ಯುಸಿನೆಸ್ ಮಾಡುವ ಮನಸ್ಸಿತ್ತು ಎಂದು ರೈಲು ಬಿಡುತ್ತಾ ಕಾಲ್ಪನಿಕ ಕಥೆ ಹೇಳುತ್ತಾರಲ್ಲ.. ಅಂಥ ಶ್ರೀಮಂತರ ಮೀಟ್‌ನಲ್ಲಿ ಕಡು ಬಡವನ ಉದಾಹರಣೆ ಕೊಡಬಾರದು ಎನ್ನುವ ಕಾಮನ್ ಸೆನ್ಸ್ ಕೂಡ ಪಪ್ಪು ರಾಹುಲ್‌ಗೆ ಇರಲಿಲ್ಲ. ಆಗ ಇಡೀ ದೇಶವೇ ಪಪ್ಪು ರಾಹುಲ್ ಪಪ್ಪು ರಾಹುಲ್ಎಂದು ಕೇಕೇ ಹಾಕಿಕೊಂಡು ನಗುತ್ತಿತ್ತು. ಆಗ ಕಾಂಗ್ರೇಸ್ ಏಕೆ ಏನು ಹೇಳಲಿಲ್ಲ?? ಯುವರಾಜನ ಮೇಲಿನ ಮಮಕಾರವೇ ಸೋನಿಯಾ?? ಮಾನವೀಯತೆಯ ದೃಷ್ಟಿಯಿಂದ ಯೋಚನೆ ಮಾಡಿ ನಾಯಿಮರಿಯ ಉದಾಹರಣೆ ಕೊಟ್ಟಿದ್ದಕ್ಕೆ ನರೇಂದ್ರ ಮೋದಿ COMMUNALIST ಆಗಿಬಿಟ್ಟರೇ??  
ಇನ್ನು ಜನತಾದಳ ಯುನೈಟೆಡ್ ಶಿವಾನಂದ್ ತಿವಾರಿ ಹೇಳುವಂತೆ
ಮೋದಿಯವರು HINDU NATIONALISM ಬಗ್ಗೆ ಏಕೆ ಮಾತನಾಡಬೇಕಿತ್ತು?? ಮುಸಲ್ಮಾನರನ್ನು ಹೊರ ಹಾಕಬೇಕೆಂದಿದ್ದೀರೇನು??  Hitler ಎಷ್ಟಾದರೂ jews ಅನ್ನು ನಾಶ ಮಾಡಲಾಗಲಿಲ್ಲವೋ ಹಾಗೆಯೇ ಮೋದಿಯೂ ಕೂಡ.. ಈ ಹಿಂದುತ್ವ-ವಾದಿ ಜನರಿಂದ ದೇಶದ ಶಾಂತಿ ಕದಡುತ್ತಿದೆ ಮತ್ತು ಭಾವನೆಗಳು ನುಚ್ಚು ನೂರಾಗುತ್ತಿವೆ ಎಂದು ಹೇಳುವುದಾದರೇ ಹಿಂದುತ್ವ, ಭಗವದ್ಗೀತೆ, ರಾಮಾಯಣ ಹೇಳುವ ಹಕ್ಕೂ ಭಾರತದಲ್ಲಿದ್ದವರಿಗೆ ಇಲ್ಲವೇ?? ಪಾಕಿಸ್ತಾನದಂಥ ಕಠಿಣ ಹೃದಯಿಗಳಿರುವಲ್ಲಿಯೇ ಇಸ್ಲಾಮ್ ಬಗ್ಗೆ ಯಾರಾದರೂ ಒಳ್ಳೇ ಮಾತನಾಡುವ ಹಕ್ಕು ಇದೆಯೆಂದಾದರೇ ಭಾರತ ಪಾಕಿಸ್ತಾನಕ್ಕಿಂತಲೂ ಕಡೆಯಾಯಿತಲ್ಲವೇ ಶಿವಾನಂದ ತಿವಾರಿಯವರೇ??
ಇನ್ನು ಕಾಂಗ್ರೇಸಿನ ನವರಸನಾಯಕ ದಿಗ್ವಿಜಯ್ ಸಿಂಗ್ ಪ್ರೆಸ್ ಮೀಟ್ ನಲ್ಲಿ ಮಾತನಾಡುತ್ತಾಮೋದಿಯವರು ಬಿಹಾರದ ಪಾರ್ಟಿ ವರ್ಕರ್ಸ್ ಜೊತೆ ಟೆಲಿ ಕಾನ್ಫರೆನ್ಸ್ ನಲ್ಲಿ ನಿತೀಶ್ ಕುಮಾರ್ ಗೆ ಪಾಠ ಕಲಿಸಿ ಎಂದು ಮಾತನಾಡಿದ ಮಾರನೇಯ ದಿನವೇ ಭೋದ್ ಗಯಾ ಬ್ಲಾಸ್ಟ್ ಆಗಿದೆ ಹಾಗಾಗಿ ಇದಕ್ಕೂ ಮೋದಿಗೂ ಏನಾದರೂ ಸಂಭಂದವಿರಬಹುದಾ ಎಂದಿದ್ದಾರೆ. ಜೋಕರ್ ದಿವಿಜಯ್ ಸಿಂಗ್ ರವರೇ ನೀವು ನಿಮ್ಮ ಮನೆಯಲ್ಲಿದ್ದಾಗ ನಿಮ್ಮ ಮನೆಯ ನಾಯಿ, ಮರಿ ಹಾಕಿದರೆ ಅದಕ್ಕೇ ನೀವೇ ಅಪ್ಪ ಇರಬಹುದಾ ಎಂದು ಪ್ರಶ್ನಿಸಿದರೆ ಹೇಗೆ Foolish ಅನ್ನಿಸುತ್ತೋ ಹಾಗೇಯೇ ನಿಮ್ಮ ಹೇಳಿಕೆಯೂ ಪಕ್ಕಾ Foolish & rubbish ಎನಿಸುತ್ತದೆ. ಇನ್ನು CPI ಮುಖ್ಯಸ್ಥ ರಾಜ ಪ್ರೆಸ್ ಮೀಟ್‌ನಲ್ಲಿ The huge massacre could not have taken place without the active connivance of the state machinery. Now Narendra Modi says he has nothing to regret, I can't understand ಎಂದು ಹೇಳಿದ್ದಾರೆ. ಕಾಷ್ಮೀರದಲ್ಲಿ ಸಾವಿರಾರು ಅಲ್ಲಿನ ಪಂಡಿತರನ್ನು ಮುಸಲ್ಮಾನರು ಹತ್ಯೆ ಮಾಡಿದರಲ್ಲ, ಅದ್ಕ್ಕೆ ನೀವು ಏನಂತೀರಿ?? ಇಲ್ಲಿ ನಿಮ್ಮ ಹೇಳಿಕೆಯ ಪ್ರಕಾರ ನೋಡಿದರೆ ಕಷ್ಮೀರೀ ಪಂಡಿತರನ್ನು ಹತ್ಯೆ ಮಾಡುವಲ್ಲಿ ಕಾಂಗ್ರೇಸ್ ಕೈವಾಡವಿದೆಯಂದಾಯಿತಲ್ಲ Dear ರಾಜ??  ನಿಮ್ಮ So called Khanಗ್ರೇಸ್ ಇದುವರೆಗೂ ಏಕೆ ಏನೂ ಮಾತನಾಡಿಲ್ಲವಲ್ಲ??
Atleast  
ಮಾನವೀಯತೆಗಾಗಿಯಾದರೂ ಪ್ರಧಾನಿ ಸಿಂಗ್ ಒಂದು ಹೇಳಿಕೆಯನ್ನೂ ಕೊಡಲಿಲ್ಲವಲ್ಲ ಇದಕ್ಕೆ ಏನಂತೀರಿ???

 ಇಷ್ಟೆಲ್ಲಾ ಟೀಕೆಗಳಿಗೆ ಕಾರಣ ಆ
ReutersRoss Colvin ಮತ್ತು Shruthi Gottipati ನಡೆಸಿದ ಸಂದರ್ಶನದಿಂದ ಎಂಬುದು ಹಲವರ ವಾದ. ಆದರೆ ಕಾಂಗ್ರೇಸ್ ಎಂಜಲು ತಿನ್ನುವ ಕೆಲ ಆಂಗ್ಲ ಮತ್ತು ಹಿಂದಿ ಮಾಧ್ಯಮಗಳು ಆ  ಸಂದರ್ಶನವನ್ನು ತಮಗೆ ಬೇಕಂತೆ Manipulate ಮಾಡಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಪತ್ರಕರ್ತೆ ಶೃತಿಯವರೇ ಅಧೀಕೃತವಾಗಿ ಟ್ವಿಟರ್ ನಲ್ಲಿ “Modi’s Remarks Poorly Contextualized in News Papers & TV Debates Last Night. Read the original Interview” ಎಂದು ಬೇಸರ ವ್ಯಕ್ತಪಡಿಸಿದ್ದರು ಆದರೆ ಅದೇನಾಯಿತೋ ಗೊತ್ತಿಲ್ಲ ಆಕೆ ಭಯ ಬಿದ್ದವಳಂತೆ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾಳೆ. ಅಲ್ಲಿಗೆ ಕಾಂಗ್ರೇಸ್ ಮತ್ತು ದೊಡ್ದ ದೊಡ್ಡ ಮಾಧ್ಯಮಗಳು ಶೃತಿಯನ್ನು ಸಕತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದೆಯಂತಾಯಿತಲ್ಲವೇ?? ಇನ್ನು ಈ ಮಾಧ್ಯಮಗಳು ಕೇವಲ ದುಡ್ಡಿಗಾಗಿ ದೋ ನಂಬರ್ದಂಧೆ ಮಾಡುತ್ತಿದೆಯೆನ್ನುವುದು ಸಾಭೀತಾಯಿತಲ್ಲವೇ?? ಅದೇನೇ ಆಗಲಿ ಇಷ್ಟೆಲ್ಲಾ Critics ಇದ್ದರೂ Critics ಬರುತ್ತಿರುವುದರಿಂದಲೇ ನಾವು ಮೇಲೆ ಬರಲು ಸಾಧ್ಯ ಎನ್ನುತ್ತಿರುವ ಮೋದಿಯನ್ನು ಮೆಚ್ಚಲೇ ಬೇಕು. ಯಾರು ಏನೇ ಅನ್ನಲಿ ಹಿಂದೆ ಮುಂದೆ ಯೋಚಿಸದೇ ನಾನು ಒಬ್ಬ ಹಿಂದು ಎಂದು ಹೇಳುವ ಮೋದಿಯ ಧೈರ್ಯ ಮತ್ತು ರಷ್ಟ್ರೀಯತೆಗೆ ಒಂದು ಹ್ಯಾಟ್ಸ್ ಆಫ್ ಹೇಳಲೇ ಬೇಕು ಅಲ್ಲವೇ??



 ------- ಚಿರಂಜೀವಿ ಭಟ್                                              mechirubhat@gmail.com

6 comments:

  1. Please change "Communist" to "Communal" or "Communalist".

    ReplyDelete
  2. Critics ಬರುತ್ತಿರುವುದರಿಂದಲೇ ನಾವು ಮೇಲೆ ಬರಲು ಸಾಧ್ಯ ಎನ್ನುತ್ತಿರುವ ಮೋದಿಯನ್ನು ಮೆಚ್ಚಲೇ ಬೇಕು..this is your line & acceptable one by every one.

    ReplyDelete
  3. Done Aravind.. was in hurry so Spell Mistake.. Thankx anyways

    ReplyDelete
  4. ತುಂಬಾ ಚೆನ್ನಾಗಿ ಬರೆದಿದ್ದೀರ. ಎಲ್ಲಾ ಗೊತ್ತಿದ್ದು ಆಂಗೈನಲ್ಲಿ ಟವೆಲ್ ಹಿಡಿದು ಪಕ್ಷಗಳು ಕೊಡುವ ಬಿಕ್ಷೆಯ ತೆಗೆದುಕೊಂಡು ಮತ ಚಲಾಯಿಸುವವರಿಗೆ ಏನು ಮಾಡುವುದು. ಇನ್ನೂ ಪ್ರಜ್ಞಾವಂತರ ಕತೆ ಬಿಡಿ ಮನೆಯೊಳಗೆ ಕೂತು ಹೋರಾಟ ಅವರದು ಇಲ್ಲವಾದಲ್ಲಿ ವಾರಾಂತ್ಯದಲ್ಲಿ ಪಾರ್ಟಿ. ಒಂದು ಹೆಮ್ಮೆಯ ವಿಚಾರವೆಂದರೆ ಅಂತರ್ಜಾಲ ಕ್ರಾಂತಿಯಿಂದ ಹೆಚ್ಚು ಯುವಕರು ವಾಸ್ತವಕ್ಕೆ ಹತ್ತಿರವಾಗಲು ತೊಡಗಿದ್ದಾರೆ. ಇದೊಂದೆ ಆಶಯ ನಮಗೆ ಯಾಕೆಂದರೆ ಇತರ ಮಾಧ್ಯಮಗಳು ತಮ್ಮನ್ನು ತಾವು ಮಾರಿಕೊಂಡಿದ್ದಾರೆ. ಬೇರೆ ಸಂಸ್ಕೃತಿಯಲ್ಲ ಇದು. ಕಾಂಗ್ರೆಸ್ ಹಾಕಿಕೊಟ್ಟ ಶಿಕ್ಷಣದ ತಳಪಾಯದ ಪ್ರಭಾವವಲ್ಲದೇ ಇನ್ನೇನು ಇರಲು ಸಾಧ್ಯವಿಲ್ಲ. ನಿಮ್ಮ ಲೇಖನ ಖಂಡಿತವಾಗಿ ಓದುಗರ ಮನಸ್ಸನ್ನು ತಲುಪುತ್ತೆ ಎಂಬ ಆಶಯ ನನ್ನದು.

    ReplyDelete