Translate

Saturday, 1 June 2013

ಪಾಕಿಸ್ತಾನದ ಐ.ಎಸ್.ಐ ಕುತಂತ್ರದಿಂದ ಭಾರತದ ಆರ್ಥಿಕ ಪರಿಸ್ಥಿತಿ ಅತಂತ್ರ!!



         ಪಾಕಿಸ್ತಾನದ ಐ.ಎಸ್.ಐ ಕುತಂತ್ರದಿಂದ ಭಾರತದ ಆರ್ಥಿಕ ಪರಿಸ್ಥಿತಿ ಅತಂತ್ರ!!

            

ಭಾರತದ ಅರ್ಥಿಕ ಪರಿಸ್ಥಿತಿ ಡಾಲರ್ ನ ವಿರುದ್ಧ ರೂಪಾಯಿಯ ಮೌಲ್ಯ ದಿನೇ ದಿನೇ ಕುಸಿಯುತ್ತಿದೆ, ಅದಕ್ಕೆ ನಮ್ಮ ಪ್ರಖ್ಯಾತ ಅರ್ಥಶಾಸ್ತ್ರಗ್ನರು ಎಷ್ಟೇ ಪಲ್ಟಿ ಹೊಡೆದರೂ ಕಾರಣ ಕಂಡು ಹಿಡಿಯಲಾಗದೆ ಕೈಚೆಲ್ಲಿದ್ದಾರೆ ಆದರೆ ಇದರಲ್ಲೂ ಐ.ಎಸ್.ಐ  ಕೈವಾಡವಿದೆಯೆಂದರೆ ನೀವು ನಂಬುತ್ತೀರಾ?? ನಂಬದಿದ್ದರೇ, ಐ.ಎಸ್.ಐ ಅವರ ನರಿ ಬುದ್ಧಿಯ ತಾಜಾ ತಾಜಾ ಸ್ಯಾಂಪಲ್ ಒಂದು ಇಲ್ಲಿದೆ ನೋಡಿ.
ಎರಡನೇ ಮಹಾಯುದ್ಧದ ಸಂಧರ್ಭದಲ್ಲಿ ಬ್ರಿಟೀಷ್ ಆರ್ಥಿಕ ಪರಿಸ್ಥಿಯನ್ನು ಕುಂದಿಸಲು ಜರ್ಮನಿಯ ಹಿಟ್ಲರ್ ಬ್ರಿಟೀಷ್ ರ ನಕಲಿ ನೋಟುಗಳನ್ನು ಮುದ್ರಿಸಿ ಇಂಗ್ಲೆಂಡಿಗೆ ರವಾನಿಸಿದ್ದ.
ಹಿಸ್ಟ್ರಿ ರಿಪೀಟ್ಸ್ ಎಂಬ ವಾಕ್ಯದಂತೆ ಪಾಕಿಸ್ತಾನದ ಗುಪ್ತದಳ ಐ.ಎಸ್.ಐ ಕೂಡ ಹಿಟ್ಲರ್ ನ ಹೀನ ಕೃತ್ಯದಿಂದ ಪ್ರೇರೇಪಿತಗೊಂಡು ಮತ್ತೊಮ್ಮೆ ತಮ್ಮ ನರಿ ಬುದ್ಧಿಯನ್ನು ಪ್ರದರ್ಶಿಸಿದೆ. ಭಾರತದ 500ರೂ ಮತ್ತು 100ರೂ ನಕಲಿ ನೋಟುಗಳನ್ನು ಕರಾಚಿಯಲ್ಲಿರುವ ಹೈ-ಸೆಕ್ಯುರಿಟಿ ಪ್ರೆಸ್ ನಲ್ಲಿ ಮತ್ತು ಪೇಶಾವರ್ ನಲ್ಲಿ ಮುದ್ರಿತವಾಗುತ್ತಿದೆ. ಇನ್ನು ನಕಲಿ ನೋಟುಗಳ ಚಲಾವಣೆಯನ್ನು ಕಂಡು ಹಿಡಿಯುವುದೇ ಮುಂಬೈ ಪೊಲೀಸರ ದಿನನಿತ್ಯದ ತಲೇ ನೋವಾಗಿ ಪರಿಣಮಿಸಿದೆ. ಮುಂಬೈ ಪೊಲೀಸ್ ಸಹ 10ಕೋಟಿಯಷ್ಟು ನಕಲಿ ನೋಟುಗಳು ಕೇವಲ ಮುಂಬೈ ಒಂದರಲ್ಲಿಯೇ ಚಲಾವಣೆಯಲ್ಲಿದೆಯೆಂದು ಅಂದಾಜಿಸಿದ್ದಾರೆ. ಹಾಗಿದ್ದರೆ ಕೋಲ್ಕತ್ತಾ, ಬೆಂಗಳೂರು, ದೆಹಲಿ, ಹೈದರಾಬಾದ್, ಚೆನ್ನೈನಲ್ಲಿ ಅದೆಷ್ಟು ಚಲಾವಣೆಯಾಗಿರಬಹುದೆಂದು ನೀವೇ ಊಹಿಸಿ. ನಕಲಿ ನೋಟು ಚಲಾವಣೆಯಲ್ಲಿ ಐ.ಎಸ್.ಐ ಪ್ರಮುಖ ಪಾತ್ರ ವಹಿಸಿದ್ದಲ್ಲದೇ, ಭಾರತಕ್ಕೆ ಬೇಕಾದ  ಮುಂಬೈ ಮೂಲದ ಡಾನ್ ಒಬ್ಬರ ಸಹಚರರಿಂದಲೂ ಚಲಾವಣೆಯನ್ನು ಮಾಡುತ್ತಿದ್ದಾರೆ. ಹಾಗಿದ್ದರೆ ನಮ್ಮ ಭಾರತದ ಗುಪ್ತದಳ ರಾ  ಅದೆಷ್ಟು ಮಟ್ಟಿಗೆ ಕಾರ್ಯ ನಿರ್ವಸುತ್ತಿದೆ?? 2000 ಇಸವಿಯ ಜುಲೈ 28ರಂದು, ಮುಂಬೈ ನ ಉತ್ತರ ಮತ್ತು ಪಶ್ಚಿಮ ವಲಯದ ಪೊಲೀಸರು 500 ಮತ್ತು 1001.45 ಕೊಟಿಯಷ್ಟು ಕೋಟಾ ನೋಟುಗಳನ್ನು ವಶಕ್ಕೆ ತೆಗೆದುಕೊಂಡರೂ ಸಹ ಇಂದಿಗೂ ನಮ್ಮ ಭಾರತದ ಆರ್ಥಿಕತೆ ಕುಂದುತ್ತಲೇ ಇದೆ. ಹಾಗಿದ್ದರೆ ಆ ನಕಲಿ ನೋಟುಗಳು ಭಾರತವನ್ನು ಹೇಗೆ ಮುಟ್ಟುತ್ತಿದೆಯೆನ್ನುವುದಕ್ಕೂ ಪೊಲೀಸರು ಕಾರ್ಯಾಚರಣೆ ನೆಡೆಸಿ ಬಹಿರಂಗಗೊಳಿಸಿದ್ದಾರಾದರೂ ಇಂದಿಗೂ ಸಹ ಅವರು ಹೇಳಿದ ಆ ಮಾರ್ಗದಲ್ಲಿಯೇ ನಕಲಿ ನೋಟುಗಳನ್ನು ಚಲಾವಣೆಯನ್ನು ಮಾಡುತ್ತಿದ್ದಾರೆಂದರೆ ನಮ್ಮ ಭಾರತದ ಭದ್ರತಾ ವ್ಯವಸ್ಥೆಯಾದರೂ ಏನು ಮಾಡುತ್ತಿದ್ದಾರೆ?? ಎದುರಿಗೆ ಯುದ್ಧ ಮಾಡಲಾಗದೇ ಜಮ್ಮು ಕಾಶ್ಮೀರದ ಮೂಲಕ ಉಗ್ರಗಾಮಿಗಳನ್ನು ಬಿಡುವ ಮೂಲಕ ಮತ್ತು ಕೋಟಾ ನೋಟನ್ನು ಚಲಾಯಿಸುವುದರ ಮೂಲಕ  ನಮ್ಮ ಭಾರತದ ಮೇಲೆ ಪರೋಕ್ಷವಾಗಿ ದಾಳಿ ಮಾಡುತ್ತಿದ್ದಾರೆ. ಅತ್ತ ಪ್ರಧಾನಿ ಮನಮೋಹನ್ ಸಿಂಗ್ ರವರು ಪಾಕಿಸ್ತಾನದ ಅಧ್ಯಕ್ಷರ ಜೊತೆಯಲ್ಲಿ ಕುಳಿತು ಶಾಂತಿ ಮಾತುಕಥೆತಲ್ಲಿ ನಿರತರಾಗಿದ್ದರೆ, ಇತ್ತ ಪಾಕಿಸ್ತಾನ, ತೊಟ್ಟಿಲು ತೂಗುತ್ತಲೇ ಮಗುವಿನ ಕುತ್ತಿಗೆಯನ್ನು ಹಿಸಿಕುತ್ತಿದೆಯೆಂಬಂತೆ  ಪರೋಕ್ಷವಾಗಿ ಐ.ಎಸ್.ಐ ಮೂಲಕ ಯುದ್ಧ ಸಾರುತ್ತಿದೆ. ಭಯೋತ್ಪಾದನೆಯಂದರೆ ಕೇವಲ ಶಸ್ತ್ರಾಸ್ತ್ರಗಳನ್ನು ಹಿಡಿದು ಹೋರಾಡುವುದೊಂದೇ ಅಲ್ಲ ಬದಲಾಗಿ ನಮ್ಮ ಭಾರತದ ಆರ್ಥಿಕ ಮಟ್ಟವನ್ನು ಕುಸಿಯುವಂತೆ ಮಾಡುವುದಕ್ಕೆ ಆರ್ಥಿಕ ಭಯೋತ್ಪಾದನೆಯೆಂದು ಕರೆಯುತ್ತಾರೆ. ಇದನ್ನು ಐ.ಎಸ್.ಐ ಇಂದು ಸಲೀಸಾಗಿ ಮಾಡುತ್ತಿದೆ. ನಕಲಿ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುವುದರಿಂದ ದೊಡ್ಡ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಂದ ಸಾಮಾನ್ಯ ಜನರಿಗೂ ಇದರ ಬಿಸಿ ಮುಟ್ಟುತ್ತದೆ. ಇನ್ನು ಕರಾಚಿ ಮತ್ತು ಪೇಶಾವರ್ ನಲ್ಲಿ ಮುದ್ರಿತವಾದ ನೋಟುಗಳನ್ನು ನಕಲಿ ನೋಟುಗಳೆಂದು ಕಂಡು ಹಿಡಿಯುವುದು ಸುಲಭದಲ್ಲಿಲ್ಲ ಎಂದು ಮುಂಬೈ ಪೊಲೀಸರು ಮತ್ತು ದೆಹಲಿ ಪೊಲೀಸರು ಸ್ವತಃ ಒಪ್ಪಿಕೊಂಡಿದ್ದಾರೆ. ಇಂತಹ ಕೋಟಾ ನೋಟುಗಳನ್ನು ಸೌತ್ ದೆಹಲಿ ಸ್ಕೂಲ್ ನಲ್ಲಿ ಫೀಸ್ ನ ಮೂಲಕ 500ರೂ ಗಳ ನೋಟುಗಳನ್ನು ಚಲಾವಣೆ ಮಾಡುತ್ತಿದ್ದನ್ನು ಈಗಾಗಲೇ ಪತ್ತೆ ಹಚ್ಚಿದ್ದಾರೆ. ಇನ್ನು ಈ ಕೋಟಾ ನೋಟನ್ನು ಚಲಾವಣೆ ಮಾಡಲೆಂದು ಕೋಡ್ ವರ್ಡ್ ಗಳನ್ನು ಬಳಸಲಾಗುತ್ತಿದೆ. ಥಾನ್ ಎಂದರೆ 5ಲಕ್ಷದ ನೋಟುಗಳೆಂದು, “ಬಡೀ ಚಪ್ಪಲ್ ಎಂದರೆ 500ರೂ ನಕಲಿ ನೋಟು, ಚೋಟಾ ಚಪ್ಪಲ್ ಎಂದರೆ 100ರೂ ಗಳು ಎಂದು ಹೇಳುತ್ತಾರೆಂದು (MCOCA)  ಆದೇಶದಂತೆ ನೆಡೆಸಿದ ತೀವ್ರ ಕಾರ್ಯಾಚರಣೆಯಿಂದ ನಕಲಿ ನೋಟು ಚಲಾಯಿಸುವಾಗಲೇ ಸೆರೆಸಿಕ್ಕ ಒಂಬತ್ತು ಐ.ಎಸ್.ಐ ಏಜೆಂಟ್ ಗಳು ಮತ್ತು ಡಾನ್ ಒಬ್ಬರ ಕೆಲ ಸಹಚರರಿಗೆ ಸತತ ಟ್ರೀಟ್ ಮೆಂಟ್ಕೊಟ್ಟು ಬಾಯಿ ಬಿಡಿಸಲಾಯಿತು. ಇನ್ನು ಅನೇಕರು ತಪ್ಪಿಸಿಕೊಂಡಿದ್ದಾರೆ.

ಪಂಜಾಬ್, ಕಚ್ ಮತ್ತು ರಾಜಸ್ತಾನದ ಬಾರ್ಡರ್ ನಿಂದಲೂ ಚಲಾವಣೆ

  

ಗಡಿ ಪ್ರದೇಶಗಳು ಸಾಮಾನ್ಯವಾಗಿ  ನದಿ, ಸಮುದ್ರ ಕಾಡುಗಳು ಮತ್ತು ಕೆಲ ನರಗಳಿಂದ ಬೇರ್ಪಟ್ಟಿರುತ್ತವೆ. ಭಾರತದ ಗಡಿಗಳೆಂದರೆ ಜಮ್ಮು ಮತ್ತು ಕಾಶ್ಮೀರ(704km), ಪಂಜಾಬ್(523km), ರಾಜಸ್ಥಾನ(1,037km), ಗುಜರಾತ್(508km). ಈ ಗಡಿ ಪ್ರದೇಶಗಳಲ್ಲಿ ಇರುವ ಜನರಿಗೆ ಗಡಿಯಾಚೆ ಇರುವ ಜನರಿಗೂ ಸಂಬಂಧವಿರುತ್ತದೆ. ತಮ್ಮ ಎಷ್ಟೋ ಸಂಬಂಧಿಕರು ಪಾಕಿಸ್ತಾನದ ಗಡಿಯಲ್ಲಿ ನೆಲೆಸಿರುತ್ತಾರೆ. ಇದನ್ನೆ ತಮ್ಮ ದಾಳವಾಗಿ ಬಳಸಿಕೊಳ್ಳುವ ಭಯೋತ್ಪಾದಕರು ಮತ್ತು ಐ.ಎಸ್.ಐ ಏಜೆಂಟ್ ಗಳು ಹಣದ ಆಮಿಶವೊಡ್ಡಿ ತಮ್ಮ ಕೋಟಾ ನೋಟನ್ನು ಗಡಿ ಪ್ರದೇಶದ ಮೂಲಕ ರವಾನಿಸುತ್ತಾರೆ. ಹೀಗೆ ಈ ಗಡಿ ಪ್ರದೇಶಗಳಲ್ಲಿ ಅನೈತಿಕ ವ್ಯವಹಾರಗಳು ಸಾಗುತ್ತಿರುತ್ತವೆ ಆದರೆ ವಿಪರ್ಯಾಸವೆಂದರೆ ಇದೆಲ್ಲ ವಿಷಯಗಳು ತಿಳಿದಿದ್ದೂ ಸಹ ನಮ್ಮ ಭದ್ರತಾ ಸಿಬ್ಭಂದಿಗಳು ಯಾವ ಕ್ರಮವೂ ಕೈಗೊಳ್ಳದೇ ಇರುವುದು ಅನುಮಾನಾಸ್ಪದವಾಗಿದೆ. ಹಾಗಿದ್ದರೆ ಈ ವಿಷಯಗಳೆಲ್ಲಾ ನಮ್ಮ ಮಾನ್ಯ ರಾಷ್ಟ್ರಪತಿಗಳಿಗೆ ಮತ್ತು ಪ್ರಧಾನಿಗಳಿಗ್ ತಿಳಿಯುತ್ತಲೇ ಇಲ್ಲವೆ?? ಎಲ್ಲಾ ಗಡಿ ಪ್ರದೇಶಗಳನ್ನು ಸಂಪೂರ್ಣವಾಗಿ ಸೀಲ್ ಮಾಡುವುದು ಕಷ್ಟಕರವೇ ಆದರೂ ಸಹ ಇಂದಿಗೂ ಕಚ್ ರಾಜ್ಯದ ಭುಜ್ ಎಂಬಲ್ಲಿ ಸ್ಥಳೀಯರಿಗೆ ಕಾನ್ ಟ್ರಾಕ್ಟ್ ಕೊಟ್ಟು ನೋಟುಗಳನ್ನು ರವಾನಿಸಲಾಗುತ್ತಿರುವ ಸ್ಥಳಗಳಿಗಾದರೂ ಹೆಚ್ಚಿನ ಭದ್ರತಾ ಸಿಭ್ಬಂದಿಯನ್ನು ನಿಯೋಜಿಸಬಹುದಲ್ಲವೇ?? ರಾಷ್ಟ್ರಪತಿಗಳು ಇನ್ನು ಯಾವ ಲೋಕದಲ್ಲಿ ಮುಳುಗಿದ್ದಾರೋ ತಿಳಿಯದು.

ನೇಪಾಲ್ ನಲ್ಲಿರುವ ಪಾಕಿಸ್ತಾನದ ಹೈ-ಕಮೀಶನ್

ಪಾಕಿಸ್ತಾನ ಮತ್ತು ನೇಪಲದ ಸ್ನೇಹದ ಒಪೊಪಂದದ ಮೇರೆಗೆ ಪಾಕಿಸ್ತಾನದಿಂದ ನೇಪಾಲ್ ಗೆ ಮತ್ತು ಮತ್ತು ನೇಪಾಲ್ ನಿಂದ ಪಾಕಿಸ್ತಾನಕ್ಕೆ ಯಾವುದೇ ವೀಸಾ, ಪಾಸ್ ಪೋರ್ಟ್ ಇಲ್ಲದ ಪ್ರಯಾಣ ಮಾಡಬಹುದು. ಇದನ್ನು ದಾಳವಾಗಿಟ್ಟುಕೊಂಡು ತಮ್ಮ ಕೋಟಾ ನೋಟನ್ನು ಸಾಗಿಸುತ್ತಿದ್ದಾರೆ. 2000ನೇ ಇಸವಿಯಲ್ಲಿ ನೇಪಾಲ್ ರಾಜಧಾನಿ ಕಟ್ಮಂಡುವಿನಲ್ಲಿ ಪಾಕಿಸ್ತಾನಿಯೊಬ್ಬ ನಕಲಿ ನೋಟುಗಳನ್ನು ಚಲಾಯಿಸುತ್ತಿರುವಾಗಲೇ ಹಿಡಿದಿದ್ದಾರೆ. ಈ ವಿಷಯದ ಕುರಿತಾಗಿ ನಮ್ಮ ಭಾರತ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲವಾದ್ದರಿಂದ ಇಂದಿಗೂ ನಕಲಿ ನೋಟಿನ ವಹಿವಾಟನ್ನು ಐ.ಎಸ್.ಐ ಏಜೆಂಟ್ ಗಳು ನೆಡೆಸುತ್ತಿದ್ದಾರೆ.

 ದೆಹಲಿ ಮತ್ತು ಅಜ್ಮೆರ್ ನ ಧರ್ಗಾ ಗೆ ಬೇಟಿಕೊಡುವ ನೆಪದಲ್ಲಿ ಬರುವ ಪಾಕಿಸ್ತಾನಿಯರು

ಪ್ರತೀ ವರ್ಷ 150ರಿಂದ 200 ಪಾಕಿಸ್ತಾನಿ ಯಾತ್ರಿಕರು ಭಾರತಕ್ಕೆ ಭೇಟಿ ನೀಡುತ್ತಾರೆ. ರಾಜಸ್ತಾನದ ಅಜ್ಮೆರ್ ನಲ್ಲಿರುವ ಖ್ವಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಬೇಟಿ ನೀಡುವ ನೆಪದಲ್ಲಿ ಭಾರತಕ್ಕೆ ಬಂದವರು ವಾಪಾಸ್ ಹೋಗುವುದು ಕೇವಲ 50ರಿಂದ 70ಜನರು ಮಾತ್ರ. ಹಾಗಿದ್ದರೆ ಇನ್ನುಳಿದವರ ಲೆಕ್ಕವೆಲ್ಲಿ? ವಿದೇಶಿಯರು ನಮ್ಮ ದೇಶಕ್ಕೆ ಬಂದರೆ ಅವರು ಯಾವ ಯಾವ ಸ್ಥಳದಲ್ಲಿದ್ದಾರೆಂಬುದನ್ನು ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಡುತ್ತಿರಬೇಕು. ಆದರೆ ಈ ಪಾಕಿಸ್ತಾನಿಯರ ಲೆಕ್ಕವೇ ಸಿಗದಿರುವಾಗ ಅವರು ಹಾಜರಿ ಹಾಕಲು ಎಲ್ಲಿಂದ ಬರುತ್ತಾರೆ??

ಇನ್ನು ರೈಲು, ಬಸ್ಸು ಮತ್ತು ಇನಿತರ ಮಾರ್ಗವಾಗಿ ನಮ್ಮ ದೇಶಕ್ಕೆ ಬಂದು ಇಲ್ಲಿಯೇ ಪ್ಲಾನ್ ಮಾಡಿ ತಮ್ಮ ನಕಲಿ ನೋಟುಗಳನ್ನು ಹಂಚಿ ನಮ್ಮ ದೇಶದ ಆರ್ಥಿಕತೆಯನ್ನು ನಾಶ ಮಾಡಿ ಕಡೆಯದಾಗಿ ಯುದ್ಧ ಸಾರುವ ತವಕದಲ್ಲಿರುವ ಪಾಕಿಸ್ತಾನದ ಐ.ಎಸ್.ಐ ಏಜೆಂಟ್ ಗಳು ತಮ್ಮ ದೇಶ ನೀಯತ್ತಾಗಿಯೇ ದುಡಿಯುತ್ತಿದ್ದಾರೆ ಆದರೆ ನಮ್ಮ ದೇಶದ ರಾಜಕಾರಣಿಗಳು ಮತ್ತು ಪ್ರಜೆಗಳೇ ಅವರು ಕೊಡುವ ಪುಡಿ ಕಾಸಿಗೆ ನಮ್ಮ ದೇಶವನ್ನು ಮಾರಿಕೊಳ್ಳುತ್ತಿದ್ದಾರೆ. ಇಷ್ಟಕ್ಕೂ ಈ ರಾದ್ಧಾಂತಗಳೆಲ್ಲಾ ಗೊತ್ತಿದ್ದೂ ನಮ್ಮ ಅಧಿಕಾರಿಗಳು ಯಾವ ಕ್ರಮವನ್ನೂ ಅಳವಡಿಸದೇ ಇರುವುದು ಭಾರಿ ಅನುಮಾನಕ್ಕೆ ಈಡು ಮಾಡಿಕೊಟ್ಟಂತಾಗಿದೆಯಲ್ಲವೇ?? 

-------ಚಿರಂಜೀವಿ ಭಟ್.     
          email: chirubhat007@gmail.com

2 comments:

  1. nice article...vyavsthita jala astu sulubhavagi bahirangavaguvudilla....

    ReplyDelete