ನಿಮ್ಮ ಮಕ್ಕಳು, ನೀವು ಮತ್ತು... ಡ್ರಗ್ಸ್!!!
ಆ ಹುಡುಗಿ ಆತ್ಮಹತ್ಯೆ ಮಾಡುಕೊಂಡು ತಿಂಗಳುಗಳೇ ಕಳೆದಿರಬಹುದು. ಮತ್ತದೇ ವಿಷಯ ಈಗ್ಯಾಕಪ್ಪ ಎಂದು ನಿಮಗನಿಸುವುದು ಅದು ಸಹಜ. ಇಲ್ಲಿ ನಮಗೆ ಕರಾವಳಿಯ ಸ್ನೇಹಾಳ ಸಾವು ಮುಖ್ಯವಲ್ಲ, ಆದರೆ ಅದರ ಮೂಲವಾದ ಡ್ರಗ್ ಮಾಫಿಯದ ನಿರ್ಮೂಲನೆ ನಮ್ಮ ಗುರಿ. ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ. ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದ ಆ ಬಾಲಕಿ ಎಲ್ಲದರಲ್ಲೂ ಕ್ಷಣವೇಗದಲ್ಲಿ ಹಿಂದೆ ಬೀಳುತ್ತಿದ್ದರೆ ಅದು ಅವಳ ತಪ್ಪಲ್ಲ, ಬದಲಾಗಿ ಅವಳ ಆ ವಯಸ್ಸಿನ ಕೆಟ್ಟ ಸ್ನೇಹವೇ ಮತ್ತು ದುಶ್ಚಟಗಳೇ..! ಅದರೆ ನೋವು ಮಾತ್ರ ತಂದೆ ತಾಯಿಯರಿಗೆ.. ಏಕೆ ? ನಿಮ್ಮನ್ನು ಹೆತ್ತಿದ್ದೇ ತಪ್ಪಾಯಿತೇ ? ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು ನಿಜ, ಆದರೆ ಕೊಟ್ಟ ಸ್ವಾತಂತ್ರ್ಯವನ್ನೇ ದುರುಪಯೋಗಿಸಿ ದುಶ್ಚಟಗಳಿಗೆ ಬಲಿಯಾದರೆ, ನಿಮ್ಮ ಹೆತ್ತವರು ಇನ್ಯಾರನ್ನ ತಾನೆ ನಂಬುವರು ? ಡ್ರಗ್ಸ್ ನ ಆವಾಸ ಸ್ಥಾನವೇ ಕಾಲೇಜುಗಳು, ಹೊರ ದೇಶಗಳಿಂದ ತರುವ ಕಳ್ಳಮಾಲುಗಳು ಮತ್ತು ಇನ್ನು ಹಲವಾರು ವಿಧವಾದ ಡ್ರಗ್ಸ್ ಗಳು ಮುಂಬೈ, ಮಂಗಳೂರು, ಗೋವಾ ಮತ್ತು ಇನ್ನಿತರ ಕರಾವಳಿ ತೀರಗಳಿಗೆ ಬಂದು ಸೇರುತ್ತವೆ. ಇವರ ರೆಗ್ಯುಲರ್ ಗಿರಾಕಿಗಳೆ ವಿದ್ಯಾರ್ಥಿಗಳು. ಇದು “ಬೇಲ್ ಸಿಗದ ಅಪರಾಧ”ವಾದರೂ, ಅದು ಕಾನೂನಿನ ಪುಸ್ತಕದಲ್ಲಿ ಮಾತ್ರ . ಈ ಯುವಕ ಯುವತಿಯರು ತಮ್ಮ ಮನಬಂದಂತೆ ನಡೆದುಕೊಳ್ಳುವ ಮತ್ತು ಅತಿರೇಖದ ವರ್ತನೆಗೆ Generation gap ಎಂದು ಕಾರಣವೊಡ್ಡಿ ಇಂತಹ ನರಕಕ್ಕೆ ಪ್ರವೇಶಿಸುತ್ತಾರೆ. “Education Hub” ಎಂದೇ ಪ್ರಖ್ಯಾತಿಯಾಗಿದ್ದ ಈ ಕರಾವಳಿ ತೀರಗಳಲ್ಲಿ ಇಂದು ಬಹುತೇಕ ಕಾಲೇಜು ಹುಡುಗ, ಹುಡುಗಿಯರು ಡ್ರಗ್ಸ್ ಗಳಿಗೆ ಬಲಿಯಾಗುತ್ತಿರುವುದರಿಂದ ಕರಾವಳಿ ಕಲುಷಿತಗೊಂಡು ಕುಖ್ಯಾತಿಗೊಳ್ಳುತ್ತಿದೆ. ಮಧ್ಯರಾತ್ರಿ ಪಬ್ ಗಳಲ್ಲಿ ಗಂಡು ಹೈಕಳ ಜೊತೆ ಕುಡಿದು ಕುಪ್ಪಳಿಸುತ್ತಿದ್ದ ಹುಡುಗಿಯರಿಗೆ ಹಿಂದೂಪರ ಸಂಘಟನೆಗಳು ದಾಳಿ ಮಾಡಿ ಅಲ್ಲಿದ್ದ ಹೆಣ್ಣುಮಕ್ಕಳಿಗೆ ಅಣ್ಣನ ಸ್ಥಾನದಲ್ಲಿ ನಿಂತು ಒಂದೆರೆಡು ಕೆನ್ನೆಗೆ ಬಾರಿಸಿ ಮನೆಗೆ ಕಳುಹಿಸಿದರೆ, ಬೆಳಗ್ಗೆ ದೇಶದಲ್ಲಿ ಏನೋ ಹೆಣ್ಣುಮಕ್ಕಳಿಗೆ ಅಪಚಾರವಾದಂತೆ ಕೆಲ ಮಾಧ್ಯಮಗಳು ವರದಿಮಾಡಿತ್ತು. ಅಷ್ಟಕ್ಕೂ ಸ್ನೆಹಾಳ ರೀತಿ ಡ್ರಗ್ಸ್ ಗೆ ದಾಸ್ಯರಾಗಿ ಅಸುನೀಗುವುದಕ್ಕಿಂತ, ಒಂದೆರಡು ಹೊಡೆತ ಹೋಡದು ಬುದ್ದಿ ಹೇಳಿ ಕಳುಹಿಸಿದರೆ ಅವರೂ ಸಹ ತಿದ್ದುಕೊಳ್ಳಬಹುದಲ್ಲವೇ...?? ಇಂತಹ ಕೆಲಸ ಮಾಡುತ್ತಿರುವ ಹಿಂದೂಪರ ಸಂಘಟನೆಗಳಿಗೆ ಕೆಲ ಪ್ರತಿಷ್ಟಿತ ರಾಜಕಾರಣಿಗಳು ಕೊಡುವ ಹೆಸರೇ “ಹಿಂದೂ Terrorist” ಎಂದು. ನಾವು ನಮ್ಮ ಮನೆಗಳಲ್ಲಿ ಬೇಡದಿರುವ ಬೆಕ್ಕು ನಾಯಿಗಳನ್ನು ತೆಗೆದುಕೊಂಡು ಹೋಗಿ ಮನೆಯಿಂದ ಎಲ್ಲಾದರೂ ದೂರದ ಕಾಡಲ್ಲಿ ಬಿಟ್ಟು ಬರುತ್ತೇವಲ್ಲವೇ?. ಆದರೆ ದುರದೃಷ್ಟವಶಾತ್ ಇದೇ ಕರಾವಳಿ ತೀರದಲ್ಲಿ ಪೋಷಕರೊಬ್ಬರು ತಮ್ಮ ಮಗಳು ಡ್ರಗ್ಸ್ ತೆಗೆದುಕೊಳ್ಳುವದನ್ನರಿತು ಅವಳನ್ನು ಕಾಡಲ್ಲಿ ಬಿಟ್ಟು ಬಂದಿದ್ದಾರೆಂದು ಅಲ್ಲಿಯ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ಕೆಲ ದಿನಗಳ ನಂತರ ಹಿಂದೂಪರ ಸಂಘಟನೆಯೊಂದು ಅವಳನ್ನು ಕಂಡು ವಿಚಾರಿಸಿದಾಗ ದಂಗಾಗಿದ್ದರು! ಮತ್ತು ಅವಳನ್ನು ಅವಳ ಮನೆಗೆ ವಾಪಾಸ್ ತಂದು ಬಿಟ್ಟಿದ್ದರು. ಹಾಗಿದ್ದರೆ ಡ್ರಗ್ಸ್ ತೆಗೆದುಕೊಳ್ಳುವವರು ಪ್ರಾಣಿಗಳಿಗಿಂತಲೂ ಹೀನವಾದರೇ? ಕರುಣಾಮಯಿಗಳಾದ ಹೆತ್ತವರೇ ಕಾಡಿನಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಬರುವಷ್ಟು ಮಟ್ಟಿಗೆ ಅವರ ಮನಸ್ಸು ಕಲ್ಲಾಗಿದೆಯೆಂದರೆ ಅವರಿಗಾಗಿರುವ ನೋವಾದರು ಎಂತಹದು? ಯೋಚಿಸಿ ನೋಡಿ.
ಈ ಡ್ರಗ್ಸ್ ಅನ್ನು ನಿರ್ಮೂಲನೆ ಮಾಡುವ ವಿಚಾರದ ಕುರಿತು ಸದನದಲ್ಲಿ ಚರ್ಚೆಯಾದರೆ, ನಮ್ಮ
ಹಿರಿತಲೆಯ ರಾಜಕಾರಣಿಗಳು “ಅದು ಯಾವುದೋ ಒಂದು ಧರ್ಮದ ಜನರು ಕೆಟ್ಟ ಉದ್ದೇಶದಿಂದ ಡ್ರಗ್ಸ್
ಮಾರಾಟದಲ್ಲಿ ತೊಡಗಿದ್ದಾರೆ” ಎಂದು common
sense ಇಲ್ಲದೆ ಹಾಸ್ಯಾಸ್ಪದವೆನಿಸುವ
ಉತ್ತರಗಳನ್ನು ಕೊಡುತ್ತಾ ಕಿತ್ತಾಡುತ್ತಿರುತಾರೆ. ಯಾವುದೋ ಒಂದು ಧರ್ಮದವರು ಡ್ರಗ್ಸ್ ಅನ್ನು
ಮಾರಾಟಮಾಡಲು ಅವರೇನು ಜಿಹಾದಿಗಳೇ ಅಥವಾ ಇನ್ಯಾವುದೋ ಮತಾಂಧರೇ? ಹಾಗಿದ್ದರೆ ಕಡೇಪಕ್ಷ
ಕರ್ನಾಟಕವನ್ನಾದರು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಿ ಸುಭದ್ರ ಮಾಡಿಕೊಳ್ಳುವ ಹೊಣೆಯನ್ನು
ಹೊರುವವರಾದರೂ ಯಾರು? ಭಾರತದಲ್ಲೇ ಅತೀ ಶಕ್ತಿಯುತವಾದ ಮತ್ತು ಯುವಕರೇ ತುಂಬಿರುವಂತಹ,
ಯುವಕರಿಗಾಗಿಯೇ ಇರುವಂತಹ ಸಂಘವೆಂದರೆ ಅದು ABVP.
ವಿದ್ಯಾರ್ಥಿಗಳ ಎಲ್ಲಾ
ಸಮಸ್ಯೆಗಳನ್ನು ಚಾಕಚಕ್ಯತೆಯಿಂದ ಸರಾಗವಾಗಿ ಪರಿಹಾರ ಮಾಡಿಕೊಡುವ ABVP ಇಂದಲೂ ಸಹ ಏಕೆ ಇನ್ನು ಪ್ರಭಲವಾದ ಕೂಗು ಕೇಳಿಬರುತ್ತಿಲ್ಲ? ಇದರ ವಿರುದ್ಧ ಹೋರಾಡಲೂ ಸಹ
ಯಾರೂ ಏಕೆ ಮುಂದೆ ಬರುತ್ತಿಲ್ಲಾ? ಇವರನ್ನು ತಡೆಹಿಡಿಯುತ್ತಿರುವ ಶಕ್ತಿಯಾದರೂ ಯಾವುದು? ಸ್ನೇಹಾಳ
ವಿಚಾರದಲ್ಲೂ ಅವಳ ಪೋಷಕರು ಅವಳ ದುಶ್ಚಟಗಳನ್ನು ಬಿಡಿಸಲು ಹರಸಾಹಸ ಮಾಡಿದರೂ ಯಾವ ಪ್ರಯೋಜನವೂ
ಆಗಲಿಲ್ಲ. ಕಟ್ಟ ಕಡೇಯ ಅಸ್ತ್ರವಾಗಿ ಅವಳಿಗೆ ಹಣವನ್ನು ಕೊಡಲು ನಿರಾಕರಿಸಿದಾಗ ಅವಳು
ಆತ್ಮಹತ್ಯೆಯಂತಹ ಹೀನ ಕೃತ್ಯವೆಸಗಿದಳು. ಇವರನ್ನು ತಡೆದು ನಿಲ್ಲಿಸುವ ಬಗೆಯಾದರೂ ಹೇಗೆ? ಇಂದಿಗೂ
ಬೆಂಗಳೂರಿನ ಕೆಲ ಕೆಳವರ್ಗದ ಮತ್ತು ಮೇಲ್ವರ್ಗದ ಕಾಲೇಜುಗಳಲ್ಲಿ ಡ್ರಗ್ಸ್ ಗಳು ಎಗ್ಗಿಲ್ಲದೆ
ಮಾರಾಟವಾಗುತ್ತಿವೆ, ಆದರೆ ಕರಾವಳಿ ಪ್ರದೇಶಗಳಲ್ಲಿ ಇದರ ದುಪ್ಪಟ್ಟು ವಹಿವಾಟುಗಳು
ನೆಡೆಯುತ್ತಿದೆಯೆನ್ನುವುದಿಕ್ಕೆ ಅಲ್ಲಿ ಮಂದಗತಿಯಲ್ಲಿ ಬೆಳಕಿಗೆ ಬರುತ್ತಿರುವ ಡ್ರಗ್ಸ್, ಹೋಮ್
ಸ್ಟೇ, ರೇವ್ ಪಾರ್ಟಿಗಳೇ ಉದಾಹರಣೆಗಳು. ಹಿಂದೆ 2001ನೇ ಇಸವಿಯಲ್ಲಿ ಮಂಗಳೂರಿನ ಮಧ್ಯಮವರ್ಗದ ಯುವಕನೋರ್ವ ವಿಧ್ಯಾಭ್ಯಾಸಗಳಲ್ಲಿ ಅವನೇ
ಮೊದಲಿಗನಾಗಿದ್ದ. ದಿನಗಳು ಉರುಳುತ್ತಿದ್ದಂತೆ ಅವನ ನಡತೆಯಲ್ಲಿ ವಿಪರೀತ
ಬದಳಾವಣೆಗಳಾಗುತ್ತಿತ್ತು. ಆದರೆ ಇದೆಲ್ಲಾ ಆಯಾ ವಯಸ್ಸಿನ ಲಕ್ಷಣಗಳೆಂದು ಸುಮ್ಮನಿದ್ದ ಪೋಷಕರಿಗೆ
ಹೃದಯವೇ ಚೂರಾಗುವಂತಹ ಸುದ್ದಿಯೊಂದು ಕೇಳಿತು. ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕಿದ್ದ ಮಗ
ಬರಲಿಲ್ಲ, ಹುಡುಕಿ ನೋಡಿದರೆ ಆತ ಅತಿಯಾದ ವಿಷಪೂರಿತ ಡ್ರಗ್ಸ್ ಸೇವಿಸಿದ್ದರಿಂದ ಅಸುನೀಗಿದ್ದ.
ಮಕ್ಕಳು ಒಳ್ಳೆಯ ಅಂಕಗಳು ತೆಗೆಯುತ್ತಿದ್ದರೆ ಪೋಷಕರಿಗೆ ಮಕ್ಕಳ ಮೇಲಿನ ಜವಾಬ್ದಾರಿಗಳು
ಕಳೆದಂತಲ್ಲ. ಕೇವಲ ಹಾಳೆಯ ಮೇಲಿರುವ ಅಂಕ ಮುಖ್ಯವಲ್ಲ, ಅಂಕಗಳನ್ನು ತೆಗೆಯುವ ಶರೀರ ಮತ್ತು ಮನಸ್ಸುಗಳೂ
ಅಷ್ಟೇ ಮುಖ್ಯ ಏಕೆಂದರೆ “ಶರೀರ ಮಾಧ್ಯಮಮ್ ಖಲುಧರ್ಮ ಸಾಧನಮ್”. ಆದ್ದರಿಂದಲೇ ಅವರನ್ನು ಸದಾ
ಗಮನಿಸುತ್ತಿರಬೇಕು. ಹಾಗೆಂದು ಅವರನ್ನು ಕಟ್ಟುಪಾಡಿನಲ್ಲಿಡುವುದಲ್ಲ. ನಿಮ್ಮ ಕಣ್ಣೆದುರೇ ಒಂದು
ಚೌಕಟ್ಟನ್ನು ನಿರ್ಮಿಸಿ, ಚೌಕಟ್ಟಿನಲ್ಲಿ ನಿಮ್ಮ ಮಕ್ಕಳನ್ನು ಬಿಡುವುದೊಳಿತು. ಅದೊಂದೇ ಈ
ಡ್ರಗ್ಸ್ ಮತ್ತು ದುಶ್ಚಟಗಳಿಂದ ನಿಮ್ಮ ಮಕ್ಕಳನ್ನು ದೂರವಿಡುವ ಏಕೈಕ ಮಾರ್ಗ. ವ್ಯವಸ್ಥೆಯು
ನಮ್ಮನ್ನು ಸರಿಮಾಡುತ್ತವೆಯೆಂದು ನಂಬಿ ಕುಳಿತರೆ,
ಸ್ನೇಹಾಳಂತಹ ಇನ್ನೂ ನೂರಾರು ಪ್ರತಿಭಾನ್ವಿತ ಮಕ್ಕಳನ್ನು ಈ ದೇಶ ಕಳೆದುಕೊಳ್ಳಬೇಕಾಗುತ್ತದೆ
ಎಚ್ಚರ!
--ಚಿರಂಜೀವಿ ಭಟ್ email: chirubhat007@gmail.com
just reed ds artical before think independence...its a duty of every student
ReplyDelete