Translate

Monday, 15 July 2013

ಆ ಧರ್ಮಾಂಧರ ನಾಡಿನಲ್ಲಿ ಸರ್ವಂ ರಕ್ತಮಯಂ







                       ಆ ಧರ್ಮಾಂಧರ ನಾಡಿನಲ್ಲಿ ಸರ್ವಂ ರಕ್ತಮಯಂ


                
ಅಂದು ಕ್ರಿ.ಶ. 1192ರಲ್ಲಿ ಮೊಹಮ್ಮದ್ ಘೋರಿ ಪೃಥ್ವಿರಾಜ್ ಚೌಹಾಣ್ ನನ್ನು ಹತ್ಯೆಗೈದು ತಾನು ಚಕ್ರವರ್ತಿಯೆಂದು ಮೆರೆದಿದ್ದ, ಆದರೆ ಅದೇ ಮುಂದಿನ ವರ್ಷದಲ್ಲಿ ಅಂದರೆ ಕ್ರಿ.ಶ. 1193ರಲ್ಲಿ ಮುಸಲ್ಮಾನ ವ್ಯಕ್ತಿಯೊಬ್ಬ ಘೋರಿಯ ಸಾಮ್ರಾಜ್ಯದಲ್ಲಿ ಮೃತಪಟ್ಟಿದ್ದ. ಅದನ್ನು ತಪ್ಪಾಗಿ ಗ್ರಹಿಸಿದ ಘೋರಿ ತನ್ನ ದಂಡೆತ್ತಿ ಬಂದು ಏಕಾಏಕಿ ಸಾವಿರಾರು ಹಿಂದುಗಳ ಶಿರಛ್ಚೇಧನ ಮಾಡಿ ಅವರುಗಳ ಬುರುಡೆಗಳನ್ನು ತನ್ನ ಕೋಟೆಗೆ ಸಿಂಗಾರಕ್ಕಾಗಿ ಹಾಕಿದ ಘಟನೆ ನೆಡೆದದ್ದು ಬಹಳ ಹಿಂದೆ. ಇಂದಿನ ಕಾಲದಲ್ಲಿ ಅಂಥ ಘಟನೆಗಳು ನೆಡೆಯುವುದಿಲ್ಲ ಬಿಡಿ, ಕಾನೂನು ಕಣ್ಣುಮುಚ್ಚಿಕೊಂಡು ಕೂರುವುದಿಲ್ಲ ಎಂದು ಬಹಳಷ್ಟು ನಂಬಿದ್ದರು. ಆದರೆ ಇದೇ ಜುಲೈನಲ್ಲಿ ಇಂಥದ್ದೊಂದು ಬೆಚ್ಚಿಬೀಳಿಸುವ ಘಟನೆ ನೆಡೆದಿದೆಯೆಂದರೆ ಅದನ್ನು ನೀವೆಲ್ಲಾ ನಂಬಲೇ ಬೇಕು.
ಅದು ದಕ್ಷಿಣ ಈಜಿಪ್ಟಿನ ನಗಾ ಹಸನ್ ಎಂಬ ಹಳ್ಳಿ
, ಅಲ್ಲಿ ಮುಸಲ್ಮಾನರೇ ಹೆಚ್ಚು. ಶೇ.10ರಷ್ಟು ಮಾತ್ರ ಕ್ರಿಶ್ಚಿಯನ್ನರು.
 As Expected  ಅಲ್ಲಿ ಅಲ್ಪಸಂಖ್ಯಾತರ ಮೇಲೆ ಸಣ್ಣ ಪುಟ್ಟ ದಾಳಿಗಳು ನೆಡೆಯುತ್ತಿತ್ತು. ಆದರೆ ಅದೆಲ್ಲಾ ಸಹಿಸುವಂತಿತ್ತು. ಅದರೆ ಜುಲೈ 10ರಂದು ಮುಸಲ್ಮಾನ ಆತಂಕವಾದಿಗಳ ಗುಂಪೊಂದು ಊರಲ್ಲಿರುವ ಎಲ್ಲಾ ಕ್ರಿಶ್ಚಿಯನ್ನರ ಮನೆಗಳನ್ನು ಧ್ವಂಸ ಮಾಡಿ ಎಮಿಲಿ ನಸೀಮ್(41), ಮತ್ತು ಅವನ ಕುಟುಂಬವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದರು. ತಮ್ಮ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ನಸೀಮ್ ಮತ್ತು ಅವನ ಕುಟುಂಬ ಸದಸ್ಯರು ಪಕ್ಕಾ ಸಿನಿಮೀಯ ಶೈಲಿಯಲ್ಲಿ ಮನೆಯ ಮಹಡಿಯಿಂದ ಮಹಡಿಗೆ ಹಾರಿ ಹಾರಿ ಓಡುತ್ತಿದ್ದರು ಅವರ ಹಿಂದೆ ಆತಂಕವಾದಿಗಳ ತಂಡ ಕತ್ತಿ, ಕಬ್ಬಿಣದ ರಾಡು, ಸರಪಳಿ ಮತ್ತು ಮರದ ದೊಣ್ಣೆಗಳನ್ನು ಹಿಡಿದು ಅಟ್ಟಿಸಿಕೊಂಡು ಬಂದು ಸಾರ್ವಜನಿಕವಾಗಿಯೇ ಜಜ್ಜಿ ಜಜ್ಜಿ ಕೊಂದರು. ಆದರೂ ಸಹ ಯಾವ ಪೊಲೀಸ್ ಅಥವಾ ಸರ್ಕಾರ ಅವರ ತಂಟೆಗೆ ಹೋಗಲಿಲ್ಲವೆಂದರೆ ಧರ್ಮಾಂಧರು ಇನ್ನು ಇದ್ದಾರೆಂದು ಇಲ್ಲಿ ಸಾಬೀತಾಗಿತ್ತದೆ. ಆ ಧರ್ಮಾಂಧರ ನಾಡಿನಲ್ಲಿ ಸರ್ವಂ ರಕ್ತಮಯಂ ಎಂಬಂತಿರುತ್ತದೆ.


ಅಲ್ಲಿ ನಡೆದಿದ್ದೇನು??

ನಗಾ ಹಸನ್ ನಲ್ಲಿ ಕ್ರಿಶ್ಚಿಯನ್-ಮುಸ್ಲಿಮ್ ಜಗಳಗಳು ಸದಾ ನಡೆಯುತ್ತಿತ್ತು. ಅದನ್ನು ನಡೆಸುತ್ತಿದ್ದದ್ದು ಮಾಜಿ ಯೋಧ ಮೊಹಮ್ಮದ್ ಮೋರ್ಸಿ. ಮೋರ್ಸಿ 100% ಧರ್ಮಾಂಧನಾಗಿದ್ದರಿಂದ ಅವನ ಅನೈತಿಕ ಚಟುವಟಿಕೆಗಳಿಂದ ಬೇಸತ್ತು ಮಿಲಿಟರಿಯಿಂದ ಹೊದಬ್ಬಲಾಗಿತ್ತು. ಹೊರಬಂದವನೇ ತನ್ನದೇ ಒಂದು ಇಸ್ಲಾಮಿಸ್ಟ್ ಸಂಘ ಕಟ್ಟಿ ಪಕ್ಕಾ ಜಿಹಾದಿಗಳ ಶೈಲಿಯಲ್ಲಿ ನಗಾ ಹಸನ್ ಊರನ್ನು ತನ್ನ ಕೈವಶ ಮಾಡಿಕೊಂಡಿದ್ದ. ಎಲ್ಲಿಯಾದರೂ ಕ್ರಿಶ್ಚಿಯನ್ನರು ಹೆಚ್ಚಾಗಿ ಕಂಡಲ್ಲಿ ಪದೇ ಪದೇ ನೀವು ಅಲ್ಪಸಂಖ್ಯಾತರೆನ್ನುವುದನ್ನು ಮರೆಯದಿರಿ, ನಾವು ಬಹುಸಂಖ್ಯಾತರು ಮನಸ್ಸು ಮಾಡಿದರೆ ನಿಮ್ಮ ನ್ನು ಏನು ಬೇಕಾದರು ಮಾಡಬಹುದುಎಂದು ವಾರ್ನಿಂಗ್ ಕೊಡುತ್ತಿದ್ದ. ಮೋರ್ಸಿಯ ಕಾಟ ತಾಳಲಾಗದೆ ಕ್ರಿಶ್ಚಿಯನ್ನರು ತಮ್ಮ, ನವೆಂಬರ್ ನಲ್ಲಿ  ಪೋಪ್ ಚಿಕ್ಕಾಣಿ ಹಿಡಿದ ಟವದ್ರೋಸ್ II ರ ಬಳಿ ತಮ್ಮ ದೂರುಗಳನ್ನಿಟ್ಟಿದ್ದರು ಅದಕ್ಕೆ ಸರಿಯಾಗಿ ಟವದ್ರೋಸ್ II ಮೋರ್ಸಿಯನ್ನು ಬರಿರಂಗವಾಗಿ ನಿಂದಿಸಿದ್ದರು ಮತ್ತು ಕ್ರಿಶ್ಚಿಯನ್ನರು ಎಲ್ಲರಂತೆ ರಾಜಕೀಯ ರಂಗಕ್ಕೂ ಪ್ರವೇಶಿಸಬಹುದೆಂದು ಅನುಮತಿ ನೀಡಿದ್ದ. ಇದೆಲ್ಲಾ ಮೋರ್ಸಿಯನ್ನು ಕೆರಳಿಸಿತ್ತು. ಇನ್ನು ಅದೇ ಊರಿನಲ್ಲಿ ಸ್ವಲ್ಪ ಓದಿ ತಿಳಿದವನನಾಗಿದ್ದವನು ಎಮಿಲಿ ನಸೀಮ್. ಊರಮಂದಿಗೆಲ್ಲಾ ರಾಜಕೀಯ ಮತ್ತು ಇನ್ನಿತರ ಸಮಾಜದಲ್ಲಿನ ವಿಚಾರಗಳನ್ನು ಭೋದಿಸಿ ಅವರ ಸಮಯೆಗಳನ್ನು ಪರಿಹಾರ  ಮಾಡಿಕೊಡುತ್ತಿದ್ದ. ಇದರ ಬಗ್ಗೆ ಮೋರ್ಸಿ ಅನೇಕ ಬಾರಿ ನಸೀಮ್ ಜೊತೆ ಕಿತ್ತಾಡಿದ್ದನಾದರು ನಸೀಮನ ನಸೀಬು ಸರಿಯಿದ್ದು ಆತ ಬಚಾವ್ ಆಗುತ್ತಿದ್ದ. ಮೋರ್ಸಿಯ ಈ ದಬ್ಬಾಳಿಕೆ ತಾಳಲಾಗದೇ ನಸೀಮ್ ಮುಸಲ್ಮಾನರ ಜೊತೆಗೂಡಿ ಜೂನ್.30ರಂದು ಒಂದು ದೊಡ್ದ ಪ್ರತಿಬಟನೆಯನ್ನೇ ನಡೆಸಿ ಮೋರ್ಸಿಯ ಅಸಲೀ ಬಣ್ನವನ್ನು ಜನರಿಗೆ ತೋರಿಸಿ ಮೋರ್ಸಿಯನ್ನು ಜುಲೈ.3ರಂದು ಇಸ್ಲಾಮಿಸ್ಟ್ ಅಧ್ಯಕ್ಷತೆಯಿಂದ ಕೆಳಗಿಳಿಸಿದ್ದ.

ತನ್ನ ಆಸೆಗಾಗಿ ಅವನ ಕಡೆಯವರನ್ನೇ ಕೊಂದ

ಆದರೆ EVERYDAY IS NOT 30th JUNE ಎನ್ನುವುದು ನಸೀಮ್ ಮರೆತಿದ್ದ. ನಸೀಮನ ನಸೀಬು ಕೆಟ್ಟಿತ್ತು. ಅಂದು ಮೋರ್ಸಿ ಸುಮ್ಮನಿದ್ದನಾದರೂ ನಸೀಮ್ ನನ್ನು ಕೆಡವಲು ಅದಾಗಲೇ ಹೊಂಚು ಹಾಕಿದ್ದ. ತನ್ನ ಕಡೆಯವನಾಗಿದ್ದ ಅದೇ ಊರಿನಲ್ಲಿದ್ದ ಮುಸಲ್ಮಾನನನ್ನು ಕೊಂದಿದ್ದ. ಆ ವ್ಯಕ್ತಿಯ ದೇಹ ಜುಲೈ.5ರಂದು ಊರ ಜನರಿಗೆ ನೈಲ್ ನದಿಯ ಬಳಿ ಸಿಕ್ಕಿತ್ತು. ಅಷ್ಟೇ ಸಾಕಿತ್ತು ಮೋರ್ಸಿಗೆ. ತಡಮಾಡದೇ ತಮ್ಮ ಹುಡುಗನನ್ನು ಕ್ರಿಶ್ಚಿಯನ್ನರು ಹತ್ಯೆಮಾಡಿದ್ದಾರೆಂದು ಗುಲ್ಲೆಬ್ಬಿಸಿ  ಏಕಾಏಕಿ ಊರಿನಲ್ಲಿದ್ದ ಕ್ರಿಶ್ಚಿಯನ್ನರ 30ಮನೆಗಳಿಗೆ ನುಗ್ಗಿ ಸಿಕ್ಕ ಸಿಕ್ಕವರಿಗೆ ಥಳಿಸಿದರು. ಅವರುಗಳ ಮನೆಗಳನ್ನು ಸಂಪೂರ್ಣ ನೆಲಸಮ ಮಾಡಿದರು, ಆ ಮನೆಯಲ್ಲಿದ್ದ ಹೆಣ್ಣುಮಕ್ಕಳಿಗೆ ಲೈಂಗಿಕವಾಗಿ ಹಿಂಸಿಸಲಾಯಿತು. ಆದರೆ ಅದು ಅಷ್ಟಕ್ಕೇ ಮುಗಿಯಲಿಲ್ಲ. ಮೋರ್ಸಿ ಪಡೆಯ ದುರುದ್ದೇಶ ಬೇರೆಯೇ ಆಗಿತ್ತು. ನೇರವಾಗಿ ಬಂದು ಎಮಿಲಿ ನಸೀಮ್ ಮನೆಯ ಮುಂದೆ ಬಂದು ಮೊದಲು ಪ್ರತಿಭಟನೆ ಮಾಡಿದರಾದರೂ ಕಡೆಗೆ ಕಲ್ಲುತೂರಾಟ ನಡೆಸಿದರು. ಅಕ್ಕಪಕ್ಕದಲ್ಲಿದ್ದ ಸಹೃದಯಿ ಮುಸಲ್ಮಾನರು ಆ ಗುಂಪನ್ನು ತಡೆಯಲು ಪ್ರಯತ್ನಿಸಿದರು ಆದರೆ ಅವರಿಗೂ ಸಹ ಈ ಗುಂಪು ಕತ್ತಿಯ ನೆತ್ತರನ್ನು ತೋರಿಸಿತ್ತು. ನಸೀಮ್ ಹೊರಬರದ್ದಿದ್ದರೆ ಮನೆಯನ್ನು ಧ್ವಂಸ ಮಾಡುವುದಾಗಿ ವಾರ್ನಿಂಗ್ ಕೊಡುತ್ತಿದ್ದರು. ತಕ್ಷಣವೇ ನಸೀಮ್ ನ ಹೆಂಡತಿ ಪೊಲೀಸರನ್ನು ಕರೆದಿದ್ದಾಳೆ. ಅನೇಕ ಬಾರಿ ಕರೆದ ಮೇಲೆ ಬಂದ ಪೊಲೀಸರು ಪರಿಸ್ಥಿಯನ್ನು ಹತೋಟಿಗೆ ತೆಗೆದುಕೊಂಡವರಂತೆ ನಟಿಸಿ ನಸೀಮ್ ಮತ್ತು ಕುಟುಂಬವನ್ನು ವಶಕ್ಕೆ ತೆಗೆದುಕೊಳ್ಳದ್ದೇ ಅಲ್ಲಿಂದ ಹೊರಡುವ ಮಾತಾಡಿದ್ದಾರೆ. ಪೊಲೀಸರು ನಮ್ಮನ್ನು ಬಿಟ್ಟು ಹೋದರೆ ಮನೆಯ ಹೊರಗಡೆ ನಿಂತಿರುವ ಆತಂಕವಾದಿಗಳು ನಮ್ಮ ಜೀವಸಹಿತ ಬಿಡುವುದಿಲ್ಲವೆಂದು ಬೇಡಿದ್ದಾಳೆ. ಆದರೆ ಹೇಗೋ ಕಾರಣಗಳನ್ನು ನೀಡಿ ಪೊಲೀಸರು ಹಿಂದಿನ ಬಾಗಿಲಿನಿಂದ ಟೆಂಟ್ ಕಿತ್ತಿದ್ದಾರೆ. ಈ ವಿಷಯ ತಿಳಿದಿದ್ದೇ, ಆ ಗುಂಪು ನಸೀಮ್ ನ ಮನೆಯೊಳಗೆ ನುಗ್ಗಿ ಅವನ ಹೆಂಡತಿ ಮತ್ತು ಸಹೋದರನನ್ನು ಹತ್ಯೆಮಾಡಿಯೇಬಿಟ್ಟಿತು. ಇನ್ನು ಮನೆಯಲ್ಲಿದ್ದ ನಸೀಮ್ ಮತ್ತು ಅವನ ಸಹೋದರನ ಮಗ ಇಬ್ಬರು ಮೃತಪಟ್ಟವರ ಶವದ ಮುಂದೆ ಕಣ್ಣೀರಿಡುವುದಕ್ಕೂ ಆಗದೇ ಓಟಕ್ಕಿಳಿದಿದ್ದಾರೆ. ಮೊದಲಿಗೆ ವಾಸವಾಗಿದ್ದ ಮನೆಯ ಟಾರ್ಸಿಯ ಮೇಲೆ ಬಚ್ಚಿಟ್ಟುಕೊಂಡರು ಆದರೆ ಅವರನ್ನು ಕಂಡುಹಿಡಿದ ಗುಂಪು ಅಟ್ಟಿಸಿಕೊಂಡು ಬರಲಾರಂಭಿಸಿತು. ಬಿಲ್ಡಿಂಗ್ ಮೇಲಿಂದ ಬಿಲ್ಡಿಂಗ್ ಗೆ ಹಾರಿ ಕೆಳಗೆ ಬಿದ್ದ ನಸೀಮ್ ನನ್ನು ಸುತ್ತುವರಿದ ಸುಮಾರು 15ಜನರ ಗುಂಪು ತಮ್ಮ ಮಾರಕಾಸ್ತ್ರಗಳಿಂದ ಜಜ್ಜಿ ಜಜ್ಜಿ ಕೊಂದರು.
ತಪ್ಪಸಿಕೊಂಡ ನಸೀಮ್ ನ ಸಹೋದರನ ಮಗ ಜುಲೈ
9ರ ವರೆಗೂ ಅಡಗಿದ್ದು ಹೇಗೋ ಊರಿಂದ ಹೊರ ಬಂದು ವಿಷಯ ಮುಟ್ಟಿಸಿದ್ದಾನೆ. ಜಾಗೃತಗೊಂಡ ಸಂಘಟನೆಗಳು ಅವನನ್ನು ರಕ್ಷಿಸಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದರಾದರೂ ಇನ್ನೂ ಆ ಗುಂಪನ್ನು ವಶಕ್ಕೆ ತೆಗೆದುಕೊಳ್ಳುವ ಗೋಜಿಗೆ ಹೋಗಲಿಲ್ಲ. ಅಲ್ಲಿಗೆ ಹಳೆಯ ಕಾಲದಲ್ಲಿದ್ದ ಅವಿಧ್ಯಾವಂತ, ಚಾರಿತ್ರ್ಯಹೀನ ರಾಜರ ನಡೆಯನ್ನೇ ಇನ್ನು ಪಾಲಿಸುತ್ತಿದ್ದಾರೆನ್ನಬಹುದೇ ಅಥವಾ ಜಿಹಾದಿಗಳ ತಪ್ಪು ಎನ್ನಬಹುದೇ ಇಲ್ಲವೇ ಧರ್ಮಾಂಧರ ತಪ್ಪೆನ್ನಬಹುದೇ..?? ಎನೇ ಆಗಲಿ ಇಂದು ಆ ರಾಕ್ಷಸರ ಕೃತ್ಯದಿಂದ ಎಮಿಲಿ ನಸೀಮ್ ಮನೆಯ ಕುಟುಂಬವೇ ನಾಶವಾಗಿದೆ. ಇದಕ್ಕೆ ಪ್ರತೀಕಾರವಾಗಿ ಕ್ರಿಶ್ಚಿಯನ್ನರು ಸಿಡಿದೆದ್ದಿದ್ದಾರೆ.. ಇನ್ನು ಖಚಿತವಾಗಿಯೂ Killing Continues!!! ಹೀಗೆ ಧರ್ಮಾಂಧರ ನಾಡಿನಲ್ಲಿ ಬದುಕುತ್ತಿರುವ ಸಹೃದಯಿ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರಿಗೂ ತೊಂದರೆಯುಂಟಾಗುತ್ತಿದೆ. ಇದು ಕೇವಲ ಹೊರದೇಶದ ವಿಷಯವೆಂದು ಭಾರತೀಯರು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ನಮ್ಮಲ್ಲೂ ಸಹ ಅಲ್ಪಸಂಖ್ಯಾತರೆಂದುಕೊಂಡೇ ಜನರ ಶಾಂತಿಯನ್ನು ಕದಡುತ್ತಿರುವ ಓವೈಸಿಯಂಥ ನಾಯಕರನ್ನು ಸರ್ಕಾರ ಇನ್ನಾದರೂ ಕಠಿಣವಾಗಿ ಶಿಕ್ಷಿಸಲಿ ಇಲ್ಲವೇ ಗಡಿಪಾರು ಮಾಡಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ.

------- ಚಿರಂಜೀವಿ ಭಟ್                                        mechirubhat@gmail.com

Wednesday, 19 June 2013

ನಿಮ್ಮ ಮಕ್ಕಳು, ನೀವು ಮತ್ತು... ಡ್ರಗ್ಸ್!!!



                     ನಿಮ್ಮ ಮಕ್ಕಳು, ನೀವು ಮತ್ತು...     ಡ್ರಗ್ಸ್!!!

                               




ಆ ಹುಡುಗಿ ಆತ್ಮಹತ್ಯೆ ಮಾಡುಕೊಂಡು ತಿಂಗಳುಗಳೇ  ಕಳೆದಿರಬಹುದು. ಮತ್ತದೇ ವಿಷಯ ಈಗ್ಯಾಕಪ್ಪ ಎಂದು ನಿಮಗನಿಸುವುದು ಅದು ಸಹಜ. ಇಲ್ಲಿ ನಮಗೆ ಕರಾವಳಿಯ ಸ್ನೇಹಾಳ ಸಾವು ಮುಖ್ಯವಲ್ಲ, ಆದರೆ ಅದರ ಮೂಲವಾದ ಡ್ರಗ್ ಮಾಫಿಯದ ನಿರ್ಮೂಲನೆ ನಮ್ಮ ಗುರಿ. ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ. ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದ ಆ ಬಾಲಕಿ ಎಲ್ಲದರಲ್ಲೂ ಕ್ಷಣವೇಗದಲ್ಲಿ ಹಿಂದೆ ಬೀಳುತ್ತಿದ್ದರೆ ಅದು ಅವಳ ತಪ್ಪಲ್ಲ, ಬದಲಾಗಿ ಅವಳ ಆ ವಯಸ್ಸಿನ ಕೆಟ್ಟ ಸ್ನೇಹವೇ ಮತ್ತು ದುಶ್ಚಟಗಳೇ..! ಅದರೆ ನೋವು ಮಾತ್ರ ತಂದೆ ತಾಯಿಯರಿಗೆ.. ಏಕೆ ? ನಿಮ್ಮನ್ನು ಹೆತ್ತಿದ್ದೇ ತಪ್ಪಾಯಿತೇ ? ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು ನಿಜ, ಆದರೆ ಕೊಟ್ಟ ಸ್ವಾತಂತ್ರ್ಯವನ್ನೇ ದುರುಪಯೋಗಿಸಿ ದುಶ್ಚಟಗಳಿಗೆ ಬಲಿಯಾದರೆ, ನಿಮ್ಮ ಹೆತ್ತವರು ಇನ್ಯಾರನ್ನ ತಾನೆ ನಂಬುವರು ? ಡ್ರಗ್ಸ್ ನ ಆವಾಸ ಸ್ಥಾನವೇ ಕಾಲೇಜುಗಳು, ಹೊರ ದೇಶಗಳಿಂದ ತರುವ ಕಳ್ಳಮಾಲುಗಳು ಮತ್ತು ಇನ್ನು ಹಲವಾರು ವಿಧವಾದ ಡ್ರಗ್ಸ್ ಗಳು ಮುಂಬೈ, ಮಂಗಳೂರು, ಗೋವಾ ಮತ್ತು ಇನ್ನಿತರ ಕರಾವಳಿ ತೀರಗಳಿಗೆ ಬಂದು ಸೇರುತ್ತವೆ. ಇವರ ರೆಗ್ಯುಲರ್ ಗಿರಾಕಿಗಳೆ ವಿದ್ಯಾರ್ಥಿಗಳು. ಇದು “ಬೇಲ್ ಸಿಗದ ಅಪರಾಧ”ವಾದರೂ, ಅದು ಕಾನೂನಿನ ಪುಸ್ತಕದಲ್ಲಿ ಮಾತ್ರ . ಈ ಯುವಕ ಯುವತಿಯರು ತಮ್ಮ ಮನಬಂದಂತೆ ನಡೆದುಕೊಳ್ಳುವ ಮತ್ತು ಅತಿರೇಖದ ವರ್ತನೆಗೆ Generation gap ಎಂದು ಕಾರಣವೊಡ್ಡಿ ಇಂತಹ ನರಕಕ್ಕೆ ಪ್ರವೇಶಿಸುತ್ತಾರೆ. “Education Hub ಎಂದೇ ಪ್ರಖ್ಯಾತಿಯಾಗಿದ್ದ ಈ ಕರಾವಳಿ ತೀರಗಳಲ್ಲಿ ಇಂದು ಬಹುತೇಕ ಕಾಲೇಜು ಹುಡುಗ, ಹುಡುಗಿಯರು ಡ್ರಗ್ಸ್ ಗಳಿಗೆ ಬಲಿಯಾಗುತ್ತಿರುವುದರಿಂದ ಕರಾವಳಿ ಕಲುಷಿತಗೊಂಡು ಕುಖ್ಯಾತಿಗೊಳ್ಳುತ್ತಿದೆ. ಮಧ್ಯರಾತ್ರಿ ಪಬ್ ಗಳಲ್ಲಿ ಗಂಡು ಹೈಕಳ ಜೊತೆ ಕುಡಿದು ಕುಪ್ಪಳಿಸುತ್ತಿದ್ದ ಹುಡುಗಿಯರಿಗೆ ಹಿಂದೂಪರ ಸಂಘಟನೆಗಳು ದಾಳಿ ಮಾಡಿ ಅಲ್ಲಿದ್ದ ಹೆಣ್ಣುಮಕ್ಕಳಿಗೆ ಅಣ್ಣನ ಸ್ಥಾನದಲ್ಲಿ ನಿಂತು ಒಂದೆರೆಡು ಕೆನ್ನೆಗೆ ಬಾರಿಸಿ ಮನೆಗೆ ಕಳುಹಿಸಿದರೆ, ಬೆಳಗ್ಗೆ ದೇಶದಲ್ಲಿ ಏನೋ ಹೆಣ್ಣುಮಕ್ಕಳಿಗೆ ಅಪಚಾರವಾದಂತೆ ಕೆಲ ಮಾಧ್ಯಮಗಳು ವರದಿಮಾಡಿತ್ತು. ಅಷ್ಟಕ್ಕೂ ಸ್ನೆಹಾಳ ರೀತಿ ಡ್ರಗ್ಸ್ ಗೆ ದಾಸ್ಯರಾಗಿ ಅಸುನೀಗುವುದಕ್ಕಿಂತ, ಒಂದೆರಡು ಹೊಡೆತ ಹೋಡದು ಬುದ್ದಿ ಹೇಳಿ ಕಳುಹಿಸಿದರೆ ಅವರೂ ಸಹ ತಿದ್ದುಕೊಳ್ಳಬಹುದಲ್ಲವೇ...?? ಇಂತಹ ಕೆಲಸ ಮಾಡುತ್ತಿರುವ ಹಿಂದೂಪರ ಸಂಘಟನೆಗಳಿಗೆ ಕೆಲ ಪ್ರತಿಷ್ಟಿತ ರಾಜಕಾರಣಿಗಳು ಕೊಡುವ ಹೆಸರೇ “ಹಿಂದೂ Terrorist” ಎಂದು. ನಾವು ನಮ್ಮ ಮನೆಗಳಲ್ಲಿ ಬೇಡದಿರುವ ಬೆಕ್ಕು ನಾಯಿಗಳನ್ನು ತೆಗೆದುಕೊಂಡು ಹೋಗಿ ಮನೆಯಿಂದ ಎಲ್ಲಾದರೂ ದೂರದ ಕಾಡಲ್ಲಿ ಬಿಟ್ಟು ಬರುತ್ತೇವಲ್ಲವೇ?. ಆದರೆ ದುರದೃಷ್ಟವಶಾತ್ ಇದೇ ಕರಾವಳಿ ತೀರದಲ್ಲಿ ಪೋಷಕರೊಬ್ಬರು ತಮ್ಮ ಮಗಳು ಡ್ರಗ್ಸ್ ತೆಗೆದುಕೊಳ್ಳುವದನ್ನರಿತು ಅವಳನ್ನು ಕಾಡಲ್ಲಿ ಬಿಟ್ಟು ಬಂದಿದ್ದಾರೆಂದು ಅಲ್ಲಿಯ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ಕೆಲ ದಿನಗಳ ನಂತರ ಹಿಂದೂಪರ ಸಂಘಟನೆಯೊಂದು ಅವಳನ್ನು ಕಂಡು ವಿಚಾರಿಸಿದಾಗ ದಂಗಾಗಿದ್ದರು! ಮತ್ತು ಅವಳನ್ನು ಅವಳ ಮನೆಗೆ ವಾಪಾಸ್ ತಂದು ಬಿಟ್ಟಿದ್ದರು.  ಹಾಗಿದ್ದರೆ ಡ್ರಗ್ಸ್ ತೆಗೆದುಕೊಳ್ಳುವವರು ಪ್ರಾಣಿಗಳಿಗಿಂತಲೂ ಹೀನವಾದರೇ? ಕರುಣಾಮಯಿಗಳಾದ ಹೆತ್ತವರೇ ಕಾಡಿನಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಬರುವಷ್ಟು ಮಟ್ಟಿಗೆ ಅವರ ಮನಸ್ಸು ಕಲ್ಲಾಗಿದೆಯೆಂದರೆ ಅವರಿಗಾಗಿರುವ ನೋವಾದರು ಎಂತಹದು? ಯೋಚಿಸಿ ನೋಡಿ. 

  


ಈ ಡ್ರಗ್ಸ್ ಅನ್ನು ನಿರ್ಮೂಲನೆ ಮಾಡುವ ವಿಚಾರದ ಕುರಿತು ಸದನದಲ್ಲಿ ಚರ್ಚೆಯಾದರೆ, ನಮ್ಮ ಹಿರಿತಲೆಯ ರಾಜಕಾರಣಿಗಳು “ಅದು ಯಾವುದೋ ಒಂದು ಧರ್ಮದ ಜನರು ಕೆಟ್ಟ ಉದ್ದೇಶದಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾರೆ” ಎಂದು common sense ಇಲ್ಲದೆ ಹಾಸ್ಯಾಸ್ಪದವೆನಿಸುವ ಉತ್ತರಗಳನ್ನು ಕೊಡುತ್ತಾ ಕಿತ್ತಾಡುತ್ತಿರುತಾರೆ. ಯಾವುದೋ ಒಂದು ಧರ್ಮದವರು ಡ್ರಗ್ಸ್ ಅನ್ನು ಮಾರಾಟಮಾಡಲು ಅವರೇನು ಜಿಹಾದಿಗಳೇ ಅಥವಾ ಇನ್ಯಾವುದೋ ಮತಾಂಧರೇ? ಹಾಗಿದ್ದರೆ ಕಡೇಪಕ್ಷ ಕರ್ನಾಟಕವನ್ನಾದರು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಿ ಸುಭದ್ರ ಮಾಡಿಕೊಳ್ಳುವ ಹೊಣೆಯನ್ನು ಹೊರುವವರಾದರೂ ಯಾರು? ಭಾರತದಲ್ಲೇ ಅತೀ ಶಕ್ತಿಯುತವಾದ ಮತ್ತು ಯುವಕರೇ ತುಂಬಿರುವಂತಹ, ಯುವಕರಿಗಾಗಿಯೇ ಇರುವಂತಹ ಸಂಘವೆಂದರೆ ಅದು ABVP. ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳನ್ನು ಚಾಕಚಕ್ಯತೆಯಿಂದ ಸರಾಗವಾಗಿ ಪರಿಹಾರ ಮಾಡಿಕೊಡುವ ABVP ಇಂದಲೂ ಸಹ ಏಕೆ ಇನ್ನು ಪ್ರಭಲವಾದ ಕೂಗು ಕೇಳಿಬರುತ್ತಿಲ್ಲ? ಇದರ ವಿರುದ್ಧ ಹೋರಾಡಲೂ ಸಹ ಯಾರೂ ಏಕೆ ಮುಂದೆ ಬರುತ್ತಿಲ್ಲಾ? ಇವರನ್ನು ತಡೆಹಿಡಿಯುತ್ತಿರುವ ಶಕ್ತಿಯಾದರೂ ಯಾವುದು? ಸ್ನೇಹಾಳ ವಿಚಾರದಲ್ಲೂ ಅವಳ ಪೋಷಕರು ಅವಳ ದುಶ್ಚಟಗಳನ್ನು ಬಿಡಿಸಲು ಹರಸಾಹಸ ಮಾಡಿದರೂ ಯಾವ ಪ್ರಯೋಜನವೂ ಆಗಲಿಲ್ಲ. ಕಟ್ಟ ಕಡೇಯ ಅಸ್ತ್ರವಾಗಿ ಅವಳಿಗೆ ಹಣವನ್ನು ಕೊಡಲು ನಿರಾಕರಿಸಿದಾಗ ಅವಳು ಆತ್ಮಹತ್ಯೆಯಂತಹ ಹೀನ ಕೃತ್ಯವೆಸಗಿದಳು. ಇವರನ್ನು ತಡೆದು ನಿಲ್ಲಿಸುವ ಬಗೆಯಾದರೂ ಹೇಗೆ? ಇಂದಿಗೂ ಬೆಂಗಳೂರಿನ ಕೆಲ ಕೆಳವರ್ಗದ ಮತ್ತು ಮೇಲ್ವರ್ಗದ ಕಾಲೇಜುಗಳಲ್ಲಿ ಡ್ರಗ್ಸ್ ಗಳು ಎಗ್ಗಿಲ್ಲದೆ ಮಾರಾಟವಾಗುತ್ತಿವೆ, ಆದರೆ ಕರಾವಳಿ ಪ್ರದೇಶಗಳಲ್ಲಿ ಇದರ ದುಪ್ಪಟ್ಟು ವಹಿವಾಟುಗಳು ನೆಡೆಯುತ್ತಿದೆಯೆನ್ನುವುದಿಕ್ಕೆ ಅಲ್ಲಿ ಮಂದಗತಿಯಲ್ಲಿ ಬೆಳಕಿಗೆ ಬರುತ್ತಿರುವ ಡ್ರಗ್ಸ್, ಹೋಮ್ ಸ್ಟೇ, ರೇವ್ ಪಾರ್ಟಿಗಳೇ ಉದಾಹರಣೆಗಳು. ಹಿಂದೆ 2001ನೇ ಇಸವಿಯಲ್ಲಿ ಮಂಗಳೂರಿನ ಮಧ್ಯಮವರ್ಗದ ಯುವಕನೋರ್ವ ವಿಧ್ಯಾಭ್ಯಾಸಗಳಲ್ಲಿ ಅವನೇ ಮೊದಲಿಗನಾಗಿದ್ದ. ದಿನಗಳು ಉರುಳುತ್ತಿದ್ದಂತೆ ಅವನ ನಡತೆಯಲ್ಲಿ ವಿಪರೀತ ಬದಳಾವಣೆಗಳಾಗುತ್ತಿತ್ತು. ಆದರೆ ಇದೆಲ್ಲಾ ಆಯಾ ವಯಸ್ಸಿನ ಲಕ್ಷಣಗಳೆಂದು ಸುಮ್ಮನಿದ್ದ ಪೋಷಕರಿಗೆ ಹೃದಯವೇ ಚೂರಾಗುವಂತಹ ಸುದ್ದಿಯೊಂದು ಕೇಳಿತು. ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕಿದ್ದ ಮಗ ಬರಲಿಲ್ಲ, ಹುಡುಕಿ ನೋಡಿದರೆ ಆತ ಅತಿಯಾದ ವಿಷಪೂರಿತ ಡ್ರಗ್ಸ್ ಸೇವಿಸಿದ್ದರಿಂದ ಅಸುನೀಗಿದ್ದ. ಮಕ್ಕಳು ಒಳ್ಳೆಯ ಅಂಕಗಳು ತೆಗೆಯುತ್ತಿದ್ದರೆ ಪೋಷಕರಿಗೆ ಮಕ್ಕಳ ಮೇಲಿನ ಜವಾಬ್ದಾರಿಗಳು ಕಳೆದಂತಲ್ಲ. ಕೇವಲ ಹಾಳೆಯ ಮೇಲಿರುವ ಅಂಕ ಮುಖ್ಯವಲ್ಲ, ಅಂಕಗಳನ್ನು ತೆಗೆಯುವ ಶರೀರ ಮತ್ತು ಮನಸ್ಸುಗಳೂ ಅಷ್ಟೇ ಮುಖ್ಯ ಏಕೆಂದರೆ “ಶರೀರ ಮಾಧ್ಯಮಮ್ ಖಲುಧರ್ಮ ಸಾಧನಮ್”. ಆದ್ದರಿಂದಲೇ ಅವರನ್ನು ಸದಾ ಗಮನಿಸುತ್ತಿರಬೇಕು. ಹಾಗೆಂದು ಅವರನ್ನು ಕಟ್ಟುಪಾಡಿನಲ್ಲಿಡುವುದಲ್ಲ. ನಿಮ್ಮ ಕಣ್ಣೆದುರೇ ಒಂದು ಚೌಕಟ್ಟನ್ನು ನಿರ್ಮಿಸಿ, ಚೌಕಟ್ಟಿನಲ್ಲಿ ನಿಮ್ಮ ಮಕ್ಕಳನ್ನು ಬಿಡುವುದೊಳಿತು. ಅದೊಂದೇ ಈ ಡ್ರಗ್ಸ್ ಮತ್ತು ದುಶ್ಚಟಗಳಿಂದ ನಿಮ್ಮ ಮಕ್ಕಳನ್ನು ದೂರವಿಡುವ ಏಕೈಕ ಮಾರ್ಗ. ವ್ಯವಸ್ಥೆಯು ನಮ್ಮನ್ನು ಸರಿಮಾಡುತ್ತವೆಯೆಂದು  ನಂಬಿ ಕುಳಿತರೆ, ಸ್ನೇಹಾಳಂತಹ ಇನ್ನೂ ನೂರಾರು ಪ್ರತಿಭಾನ್ವಿತ ಮಕ್ಕಳನ್ನು ಈ ದೇಶ ಕಳೆದುಕೊಳ್ಳಬೇಕಾಗುತ್ತದೆ ಎಚ್ಚರ!





--ಚಿರಂಜೀವಿ ಭಟ್                                                      email: chirubhat007@gmail.com                  

Thursday, 13 June 2013

ಮಕ್ಕಳಿಗೆ ಇಂಥಹ ದಗಲ್ಬಾಜಿ ರಾಜರ ಪಾಠಗಳನ್ನು ಹೇಳುವ ಬದಲು ಅವಿಧ್ಯಾವಂತರನ್ನಾಗಿಸುವುದೇ ಉತ್ತಮ!!



ಮಕ್ಕಳಿಗೆ ಇಂಥಹ ದಗಲ್ಬಾಜಿ ರಾಜರ ಪಾಠಗಳನ್ನು ಹೇಳುವ ಬದಲು ಅವಿಧ್ಯಾವಂತರನ್ನಾಗಿಸುವುದೇ ಉತ್ತಮ!!



                        
ಅಕ್ಬರ್ ಒಬ್ಬ ಮಹಾ ಪರಾಕ್ರಮಿ ಮತ್ತು ಭಾರತೀಯರ ಬಗ್ಗೆ ಅವನಿಗೆ ಬಹಳಷ್ಟು ಕಾಳಜಿಯಿತ್ತು. ಅವನ ಪರಾಕ್ರಮವನ್ನು ಎಲ್ಲರೂ ಮನಸಾರೆ ಹೊಗಳುತ್ತಿದ್ದರು. ಶಹಜಹಾನ್, ಮುಮ್ ತಾಜ್ ಮೇಲಿನ ಪ್ರೇಮಕ್ಕೆ ಸೋತುಹೋಗಿ ಅವಳ ನೆನಪಿಗಾಗಿ ತಾಜ್ ಮಹಲ್ ಅನ್ನು ಕಟ್ಟಿದ. ಅಲ್ಲಾವುದ್ಧೀನ್ ಖಿಲ್ ಜಿ, ಕುತುಬುದ್ಧೀನ್ ಐಬಕ್, ಹೀಗೆ ಹಲವಾರು ರಾಜರುಗಳಿಗೆ ನಮ್ಮ ದೇಶದಲ್ಲಿ ಸ್ಥಾನ ಕೊಟ್ಟಿದ್ದಲ್ಲದೆ ಅವರನ್ನು ಪರಾಕ್ರಮಿಯೆಂದು ಬಹುಪರಾಕ್ ಹಾಕುತ್ತಾ ಬಂದಿದ್ದೇವೆ.. ! ಆದರೆ ನಿಜವಾಗಿಯೂ ಅವರು ಪರಾಕ್ರಮಿಗಳೇ? ರಾಕ್ಷಸಗುಣಕ್ಕೂ ಪರಾಕ್ರಮಕ್ಕೂ ವ್ಯತ್ಯಾಸವೇ ಗೊತ್ತಿಲ್ಲವೇ? ಹಾಗಿದ್ದರೆ ರಾಕ್ಷಸರನ್ನೂ ನಾವು ಮಹಾಪರಾಕ್ರಮಿಗಳು ಎಂದೆನ್ನಬಹುದಲ್ಲವೇ? ದುರದೃಷ್ಟವೆಂದರೆ ಇಂತಹ ಆಘಾತಕಾರಿ ವಿಷಯಗಳನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ. ಒಬ್ಬ ಲೇಖಕ ತಪ್ಪಾಗಿ ಬರೆದರೆ ಮಾಡಿದರೆ ಇಡೀ ಪೀಳಿಗೆಯನ್ನೇ ಸುಡಬೇಕೆನ್ನುತ್ತಾರೆ. ಆದರೆ ಬರೀ ಅಸತ್ಯಗಳೇ ತುಂಬಿರುವಂತಹ ಇತಿಹಾಸ ಪುಸ್ತಕಗಳನ್ನು ಮಕ್ಕಳಿಗೆ ಪಾಠವಾಗಿ ಕೊಟ್ಟರೆ ಇಡೀ ಸಮಾಜವನ್ನೇ ಸುಡಬೇಕಾದೀತು! ಹೌದು, ಇಂದು ನಮ್ಮ ಮಕ್ಕಳಿಗೆ ಬಹುತೇಕ ಮುಸಲ್ಮಾನ ರಾಜರುಗಳ ರಾಕ್ಷಸ ಕೃತ್ಯಗಳನ್ನು ಪರಾಕ್ರಮವೆಂದು ಹೇಳಿಕೊಡಲಾಗುತ್ತಿವೆ. ಶಹಜಹಾನ್ ತನ್ನ ಪ್ರೇಮಕ್ಕಾಗಿ ತಾಜ್ ಮಹಲ್ ಅನ್ನು ಕಟ್ಟಿರಬಹುದು ಆದರೆ ಅವನು 1635ರಲ್ಲಿ ಬಂಡೇಲಾದ ರಾಜಧಾನಿ ಒರ್ಚ್ಚಾದಲ್ಲಿ  ಸಹಸ್ರಾರು ಸೃಜನಶೀಲ ಹಿಂದುಗಳನ್ನು ಮಾರಣ ಹೋಮವನ್ನೇ ಮಾಡಿ ಅಲ್ಲಿದ್ದ ಬಿರ್ ಸಿಂಗ್ ದೇವ್ ದೇವಸ್ಥಾನವನ್ನು ಉರುಳಿಸಿ ಅಲ್ಲೇ ಒಂದು ಮಸೀದಿಯನ್ನೂ ಕಟ್ಟಿದ್ದಾನೆ, ಇನ್ನು ಅನೇಕ ಹಿಂದೂಗಳ ಮಾರಣ ಹೋಮ.. ಅದೂ ಕೇವಲ ಮುಸಲ್ಮಾನ ಧರ್ಮಕ್ಕೆ ಮತಾಂತರವಾಗಲು ತಿರಸ್ಕರಿಸಿದ್ದಕ್ಕೆ ಎಂಬ ವಿಚಾರವನ್ನು ಮಕ್ಕಳ ಪುಸ್ತಕದಲ್ಲಿ ಎಲ್ಲಾದರೂ ಪ್ರಕಟಿಸಿದ್ದಾರೆಯೇ?  ಇಂದು ತಾಜ್ ಮಹಲ್ ನೋಡಿ ವಾಹ್ ತಾಜ್! ಎನ್ನುವ ನಾವು ಹಿಂದೆ ಅಲ್ಲಿ ದೇವಸ್ಥಾನವಿತ್ತೆಂಬುದನ್ನು ಮರೆತಂತಿದೆ. ಪ್ರೀತಿ ಪ್ರೇಮದ ವಿಷಯ ಬಂದರೆ ನಮ್ಮ ನಳ ದಮಯಂತಿಯ ಪಾಠಗಳನ್ನಿಡುವ ಬದಲು ಇನ್ಯಾವುದೋ ದೇಶದಿಂದ ಬಂದ ಮೊಘಲ್ ರಾಜ ನಮಗೇಕೆ ಬೇಕು? ಅವನ ತತ್ವಗಳು ನಮಗೆ ಆದರ್ಶವಾಗುವುದಾದರೂ ಹೇಗೆ? 

ಇನ್ನು ಅಕ್ಬರ್ ದಿ ಗ್ರೇಟ್ ಎಂದು ಹೆಮ್ಮೆಯಿಂದ ಬೀಗುವ 4ರಿಂದ 6ನೇಯ ತರಗತಿಯ ಪುಸ್ತಕಗಳ ಲೇಖಕರಿಗೆ ಇನ್ನೂ ಅಕ್ಬರ್ ನ ಇನ್ನೊಂದು ಮುಖದ ಪರಿಚೆಯವಿಲ್ಲವೆಂದೆನಿಸುತ್ತದೆ ಏಕೆಂದರೆ ಅಕ್ಬರ್ ತಾನೂ ಸಹ ಇಸ್ಲಾಮ್ ಧರ್ಮಕ್ಕೆ ಸೇವೆಯನ್ನೆಸಗಿದ್ದೇನೆ ಎನ್ನುವ ಸಲುವಾಗಿ ಪಾಣಿಪಟ್ ನ ಎರಡನೇ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಯುದ್ಧದಲ್ಲಿ ಭಾಗವಹಿಸದೆ ಇದ್ದ ಅಮಾಯಕರಾದ ಎಂಟು ಸಾವಿರ ರಜಪುತ್ಸ್ ಮತ್ತು ಇಪ್ಪತ್ತು ಸಾವಿರ ರೈತರನ್ನು ಬಲಿ ತೆಗೆದುಕೊಂಡಿದ್ದಾನೆಂಬುದು “ಅಕ್ಬರ್-ನಾಮಾ”ದಲ್ಲಿ ಉಲ್ಲೇಖವಿದೆ. ಹಾಗಿದ್ದರೆ ಯಾವ ಕೋನದಿಂದ ಅಕ್ಬರ್, ನಮಗೆ ಮತ್ತು ಅವನ so called ಪರಾಕ್ರಮ ಓದುತ್ತಿರುವ ಮಕ್ಕಳಿಗೆ ಆದರ್ಶವಾಗಿಯಾನು?
ಇನ್ನು ಮೊಹಮ್ಮದ್ ಘೋರಿಯ ಸೇನಾಧಿಕಾರಿಯಾದ ಕುತುಬ್ ಉದ್ಧೀನ್ ಐಬಕ್ 1193ರ ಅಲಿಘಾರ್ ನಲ್ಲಿ ಸಾವಿರಾರು ಹಿಂದೂಗಳ ತಲೆಯನ್ನು ಛೇದಿಸಿ ಅವನ ಕೋಟೆಗೆ ಅಲಂಕಾರಕ್ಕಾಗಿ ಇಟ್ಟಿದ್ದಲ್ಲದೇ 1194ರಲ್ಲಿ ದೆಹಲಿಯಲ್ಲಿನ 27 ಜೈನ್ ದೇವಾಲಯಗಳನ್ನು ಧ್ವಂಸಮಾಡಿ ಅದೇ ಅವಷೇಶಗಳಿಂದ ಖುವ್ವತ್-ಉಲ್-ಇಸ್ಲಾಮ್ ಮಸೀದಿಗಳನ್ನು ಒಬ್ಬ ಸೇನಾಧಿಕಾರಿಯೆ ಕಟ್ಟಿದನೆಂದರೆ ಇನ್ನು ಅವನ ರಾಜ ಘೋರಿಯ ಘೋರತೆಯನ್ನು ನೀವೇ ಊಹಿಸಿಕೊಳ್ಳಿ.
ಔರಂಗ್ ಜೇಬ್ ನು ಛತ್ರಪತಿ ಶಿವಾಜಿಯ ಮಗನಾದ ವೀರ್ ಸಾಂಭಾಜಿಯನ್ನು ಪುಣೆಯಲ್ಲಿ ಮಾರ್ಚ್
11, 1689ರಂದು ಅವನ ಕಣ್ಣುಗಳನ್ನು ಕಿತ್ತು, ನಾಲಿಗೆ ಮತ್ತು ಕೈಗಳನ್ನು ಕತ್ತರಿಸಿರಿ ಹಿಂಸಾತ್ಮಕವಾಗಿ ಕೊಂದಿದ್ದಲ್ಲದೇ ಅವನ ಮಾಂಸಗಳನ್ನು ಕತ್ತರಿಸಿ ನಾಯಿಗಳಿಗೆ ಆಹಾರವಿತ್ತ ಉದಾಹರಣೆಯೂ ಇದೆ. ನಿಜವಾದ ಇತಿಹಾಸ ಪುಸ್ತಕದ ಪುಟಗಳನ್ನು ತಿರುವಿಹಾಕುತ್ತಿದ್ದರೆ ಇನ್ನು ಅನೇಕ ಆಘಾತಕಾರಿ ವಿಷಯಗಳು ನಮಗೆ With Proof ಸಿಗುತ್ತವೆ. ಇನ್ನು ಇವರ ದುಷ್ಕೃತ್ಯಗಳನ್ನು ಪರಾಕ್ರಮವೆಂದು ಹೊಗಳುತ್ತಾ ಪುಟ್ಟ ಮಕ್ಕಳನ್ನು ನಂಬಿಸುತ್ತಿರುವ ಪುಸ್ತಕಗಳನ್ನು ಯಾವುದರಲ್ಲಿ ಹಾಕಿ ಸುಡಬೇಕು? ಇನ್ನು ಅದನ್ನು ಓದುತ್ತಾ ಬೆಳದಿರುವ ಪೀಳಿಗೆಯನ್ನು ಹೇಗೆ ಸುಡಬೇಕು??

                             



 ಅಷ್ಟಕ್ಕೂ ಮಕ್ಕಳಿಗೆ ಹಿರಿಯರ ಪರಾಕ್ರಮದ ಮೂಲಕ ದೇಶಾಭಿಮಾನ ಮೂಡಿಸುವ ಉದ್ದೇಶವೇ ಇದ್ದಲ್ಲಿ ಅವರಿಗೆ ಮದನ್ ಲಾಲ್ ಧಿಂಗ್ರ, ವೀರ ಸಾವರ್ಕರ್ ಅಂಥವರ ಪಾಠಗಳನ್ನೇಕಿಡುವುದಿಲ್ಲ?? ನಾಳೆಯೋ ನಾಡಿದ್ದೋ ಅಸುನೀಗುವ ವಯಸ್ಕರೂ ಸಹ ಇನ್ನು ಕೆಲ ದೇಶಕ್ಕಾಗಿ ಹೋರಾಡಿ ಪ್ರಾಣ ಬಿಟ್ಟ ನಿಜವಾದ ಪರಾಕ್ರಮಿಗಳ ಹೆಸರೇ ಕೇಳಿರುವುದಿಲ್ಲ, ಇನ್ನು ಅವರ ಕಥೆಗಳನ್ನು ಕೇಳುತ್ತಾ ಬೆಳೆದಿರುವ ಮಕ್ಕಳಾದರೂ ಹೇಗೆ ಕೇಳಲು ಸಾಧ್ಯ?? ಮದನ್ ಲಾಲ್ ಧಿಂಗ್ರನೆಂಬುವ 21ವರ್ಷದ ಯುವಕ ವೀರ ಸಾವರ್ಕರ್ರ ದೇಶಾಭಿಮಾನದ ಮಾತುಗಳನ್ನ್ ಕೇಳಿ ಆಕರ್ಷಿತನಾಗಿ ಬಂದು ಸಾವರ್ಕರ್ರಲ್ಲಿ ತನಗೊಂದು ಗುರಿಯನ್ನು ನಿರ್ಮಿಸಿಕೊಡಿಯೆಂದು ಕೇಳಿ ಪಡೆದು ಭಾರತದ ಸ್ವಾತಂತ್ರ್ಯದ ಹೋರಾಟಗಾರರಿಗೆ ಹಿಂಸಿಸುತ್ತಿದ್ದ ಕರ್ಜನ್ ವಾಯ್ಲಿಯೆಂಬ ಬ್ರಿಟೀಷ್ ಅಧಿಕಾರಿ ಕೊಲ್ಲು ಎಂದು ಆದೇಶ ನೀಡಿದ ಒಂದೇ ತಿಂಗಳಿನಲ್ಲಿ  ಕರ್ಜನ್ ವಾಯ್ಲಿಯನ್ನು ಹೊಂಚು ಹಾಕಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗುಂಡಿಟ್ಟು ಕೊಂದು ಜೈಲು ಸೇರಿ ಕೊನೆಗೆ ಮರಣ ದಂಡನೆಯನ್ನು ನಗುಮೊಗದಿಂದಲೇ ಸ್ವೀಕರಿಸಿದ ಮದನ್ ಲಾಲ್ ಧಿಂಗ್ರನ ಬಗ್ಗೆ ಬಹುತೇಕ ಯಾವ ಜನರಿಗೂ ಗೊತ್ತಿಲ್ಲ, Google ಹೊರತಾಗಿ!! ಇಂಥವರ ಪಾಠಗಳನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸುವ ಬದಲು ಒಂದೇ ಒಂದು ಜಾತಿಯ ಸಲುವಾಗಿ ಲಕ್ಷಾಂತರ ಹಿಂದೂಗಳ ಮಕ್ಕಳನ್ನು ತಬ್ಬಲಿ ಮಾಡಿದ, ಹೆಂಗಸರನ್ನು ವಿಧವೆಯನ್ನಾಗಿಸಿದ ಆ ಮುಸಲ್ಮಾನ ರಾಜರುಗಳಿಂದ ನಾವಿ ಕಲಿಯುವ ನೀತಿಯಾದರೂ ಏನು? ಖಾಸಗಿ ಶಾಲೆಗಳ ಶಿಕ್ಷಕರ ನೇಮಕಾತಿ ಮತ್ತು ಇನ್ನಿತರ ಬಹುತೇಕ ವಿಚಾರಗಳಲ್ಲಿ ತನ್ನ ಮೂಗು ತೋರಿಸುವ ನಮ್ಮ ಘನ ಸರ್ಕಾರ ಏಕೆ ಇಂತಹ ನಿಜವಾದ ಪರಾಕ್ರಮಿಗಳ ಪಾಠಗಳನ್ನು ಕಡ್ಡಾಯಗೊಳಿಸುತ್ತಿಲ್ಲ?? ಇನ್ನು ಸರಕಾರಿ ಶಾಲೆಗಳಲ್ಲಿ ಅದೇ ಹಾವು ಮುಂಗೂಸಿ ಕಥೆ, ಆಮೆ ಮೊಲದ ಓಟದ ಸ್ಪರ್ಧೆಯ ಕಥೆಗಳನ್ನು ಸುಮಾರು ಹತ್ತು ಹದಿನೈದು ವರುಷಗಳಿಂದಲೂ ಬದಲಾಯಿಸದೇ ಇರುವ ಬದಲು ಇಂತಹ ನಿಜವಾದ ಪರಾಕ್ರಮಿಗಳ ಮತ್ತು ಇನ್ನಿತರ ಕ್ಷೇತ್ರದಲ್ಲಿ ಸಧನೆ ಮಾಡಿ ದೇಶಕ್ಕೆ ಹೆಸರು ತಂದುಕೊಟ್ಟಂಥವರ ಪಾಠಗಳನ್ನು ಸೇರಿಸಿದರೆ ಪಾಠ ಮಾಡುವ ಶಿಕ್ಷಕರಿಗೂ ರಿಟೈರ್ ಆಗುವ ಸಮಯದಲ್ಲಿ ಬುದ್ಧಿ ಬರುತ್ತದೆ ಮತ್ತು ಹೊಸ ಮಕ್ಕಳೂ ಸಹ ನಮ್ಮ ಹಿರಿಯರ ಪರಾಕ್ರಮಗಳು ಮತ್ತೆ ಸಾಧನೆಯಿಂದ ಪ್ರೇರೇಪಿತಗೊಂಡು ತಮ್ಮ ಜೇವನದ ಹಾದಿಯನ್ನು ನಿರ್ಮಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದಲ್ಲವೇ?? ಈ ಹೊಸ ಐಡಿಯವನ್ನು ಓಮ್ಮೆ ಟ್ರಯ್ ಮಾಡಿ ನೋಡಬಹುದಲ್ಲವೇ ವಿಧ್ಯಾಮಂತ್ರಿಗಳೇ..???  




 
---ಚಿರಂಜೀವಿ ಭಟ್,                            
email- chirubhat007@gmail.com