Translate

Wednesday, 19 June 2013

ನಿಮ್ಮ ಮಕ್ಕಳು, ನೀವು ಮತ್ತು... ಡ್ರಗ್ಸ್!!!



                     ನಿಮ್ಮ ಮಕ್ಕಳು, ನೀವು ಮತ್ತು...     ಡ್ರಗ್ಸ್!!!

                               




ಆ ಹುಡುಗಿ ಆತ್ಮಹತ್ಯೆ ಮಾಡುಕೊಂಡು ತಿಂಗಳುಗಳೇ  ಕಳೆದಿರಬಹುದು. ಮತ್ತದೇ ವಿಷಯ ಈಗ್ಯಾಕಪ್ಪ ಎಂದು ನಿಮಗನಿಸುವುದು ಅದು ಸಹಜ. ಇಲ್ಲಿ ನಮಗೆ ಕರಾವಳಿಯ ಸ್ನೇಹಾಳ ಸಾವು ಮುಖ್ಯವಲ್ಲ, ಆದರೆ ಅದರ ಮೂಲವಾದ ಡ್ರಗ್ ಮಾಫಿಯದ ನಿರ್ಮೂಲನೆ ನಮ್ಮ ಗುರಿ. ಒಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ. ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿದ್ದ ಆ ಬಾಲಕಿ ಎಲ್ಲದರಲ್ಲೂ ಕ್ಷಣವೇಗದಲ್ಲಿ ಹಿಂದೆ ಬೀಳುತ್ತಿದ್ದರೆ ಅದು ಅವಳ ತಪ್ಪಲ್ಲ, ಬದಲಾಗಿ ಅವಳ ಆ ವಯಸ್ಸಿನ ಕೆಟ್ಟ ಸ್ನೇಹವೇ ಮತ್ತು ದುಶ್ಚಟಗಳೇ..! ಅದರೆ ನೋವು ಮಾತ್ರ ತಂದೆ ತಾಯಿಯರಿಗೆ.. ಏಕೆ ? ನಿಮ್ಮನ್ನು ಹೆತ್ತಿದ್ದೇ ತಪ್ಪಾಯಿತೇ ? ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ನೋಡಿಕೊಳ್ಳಬೇಕು ನಿಜ, ಆದರೆ ಕೊಟ್ಟ ಸ್ವಾತಂತ್ರ್ಯವನ್ನೇ ದುರುಪಯೋಗಿಸಿ ದುಶ್ಚಟಗಳಿಗೆ ಬಲಿಯಾದರೆ, ನಿಮ್ಮ ಹೆತ್ತವರು ಇನ್ಯಾರನ್ನ ತಾನೆ ನಂಬುವರು ? ಡ್ರಗ್ಸ್ ನ ಆವಾಸ ಸ್ಥಾನವೇ ಕಾಲೇಜುಗಳು, ಹೊರ ದೇಶಗಳಿಂದ ತರುವ ಕಳ್ಳಮಾಲುಗಳು ಮತ್ತು ಇನ್ನು ಹಲವಾರು ವಿಧವಾದ ಡ್ರಗ್ಸ್ ಗಳು ಮುಂಬೈ, ಮಂಗಳೂರು, ಗೋವಾ ಮತ್ತು ಇನ್ನಿತರ ಕರಾವಳಿ ತೀರಗಳಿಗೆ ಬಂದು ಸೇರುತ್ತವೆ. ಇವರ ರೆಗ್ಯುಲರ್ ಗಿರಾಕಿಗಳೆ ವಿದ್ಯಾರ್ಥಿಗಳು. ಇದು “ಬೇಲ್ ಸಿಗದ ಅಪರಾಧ”ವಾದರೂ, ಅದು ಕಾನೂನಿನ ಪುಸ್ತಕದಲ್ಲಿ ಮಾತ್ರ . ಈ ಯುವಕ ಯುವತಿಯರು ತಮ್ಮ ಮನಬಂದಂತೆ ನಡೆದುಕೊಳ್ಳುವ ಮತ್ತು ಅತಿರೇಖದ ವರ್ತನೆಗೆ Generation gap ಎಂದು ಕಾರಣವೊಡ್ಡಿ ಇಂತಹ ನರಕಕ್ಕೆ ಪ್ರವೇಶಿಸುತ್ತಾರೆ. “Education Hub ಎಂದೇ ಪ್ರಖ್ಯಾತಿಯಾಗಿದ್ದ ಈ ಕರಾವಳಿ ತೀರಗಳಲ್ಲಿ ಇಂದು ಬಹುತೇಕ ಕಾಲೇಜು ಹುಡುಗ, ಹುಡುಗಿಯರು ಡ್ರಗ್ಸ್ ಗಳಿಗೆ ಬಲಿಯಾಗುತ್ತಿರುವುದರಿಂದ ಕರಾವಳಿ ಕಲುಷಿತಗೊಂಡು ಕುಖ್ಯಾತಿಗೊಳ್ಳುತ್ತಿದೆ. ಮಧ್ಯರಾತ್ರಿ ಪಬ್ ಗಳಲ್ಲಿ ಗಂಡು ಹೈಕಳ ಜೊತೆ ಕುಡಿದು ಕುಪ್ಪಳಿಸುತ್ತಿದ್ದ ಹುಡುಗಿಯರಿಗೆ ಹಿಂದೂಪರ ಸಂಘಟನೆಗಳು ದಾಳಿ ಮಾಡಿ ಅಲ್ಲಿದ್ದ ಹೆಣ್ಣುಮಕ್ಕಳಿಗೆ ಅಣ್ಣನ ಸ್ಥಾನದಲ್ಲಿ ನಿಂತು ಒಂದೆರೆಡು ಕೆನ್ನೆಗೆ ಬಾರಿಸಿ ಮನೆಗೆ ಕಳುಹಿಸಿದರೆ, ಬೆಳಗ್ಗೆ ದೇಶದಲ್ಲಿ ಏನೋ ಹೆಣ್ಣುಮಕ್ಕಳಿಗೆ ಅಪಚಾರವಾದಂತೆ ಕೆಲ ಮಾಧ್ಯಮಗಳು ವರದಿಮಾಡಿತ್ತು. ಅಷ್ಟಕ್ಕೂ ಸ್ನೆಹಾಳ ರೀತಿ ಡ್ರಗ್ಸ್ ಗೆ ದಾಸ್ಯರಾಗಿ ಅಸುನೀಗುವುದಕ್ಕಿಂತ, ಒಂದೆರಡು ಹೊಡೆತ ಹೋಡದು ಬುದ್ದಿ ಹೇಳಿ ಕಳುಹಿಸಿದರೆ ಅವರೂ ಸಹ ತಿದ್ದುಕೊಳ್ಳಬಹುದಲ್ಲವೇ...?? ಇಂತಹ ಕೆಲಸ ಮಾಡುತ್ತಿರುವ ಹಿಂದೂಪರ ಸಂಘಟನೆಗಳಿಗೆ ಕೆಲ ಪ್ರತಿಷ್ಟಿತ ರಾಜಕಾರಣಿಗಳು ಕೊಡುವ ಹೆಸರೇ “ಹಿಂದೂ Terrorist” ಎಂದು. ನಾವು ನಮ್ಮ ಮನೆಗಳಲ್ಲಿ ಬೇಡದಿರುವ ಬೆಕ್ಕು ನಾಯಿಗಳನ್ನು ತೆಗೆದುಕೊಂಡು ಹೋಗಿ ಮನೆಯಿಂದ ಎಲ್ಲಾದರೂ ದೂರದ ಕಾಡಲ್ಲಿ ಬಿಟ್ಟು ಬರುತ್ತೇವಲ್ಲವೇ?. ಆದರೆ ದುರದೃಷ್ಟವಶಾತ್ ಇದೇ ಕರಾವಳಿ ತೀರದಲ್ಲಿ ಪೋಷಕರೊಬ್ಬರು ತಮ್ಮ ಮಗಳು ಡ್ರಗ್ಸ್ ತೆಗೆದುಕೊಳ್ಳುವದನ್ನರಿತು ಅವಳನ್ನು ಕಾಡಲ್ಲಿ ಬಿಟ್ಟು ಬಂದಿದ್ದಾರೆಂದು ಅಲ್ಲಿಯ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿತ್ತು. ಕೆಲ ದಿನಗಳ ನಂತರ ಹಿಂದೂಪರ ಸಂಘಟನೆಯೊಂದು ಅವಳನ್ನು ಕಂಡು ವಿಚಾರಿಸಿದಾಗ ದಂಗಾಗಿದ್ದರು! ಮತ್ತು ಅವಳನ್ನು ಅವಳ ಮನೆಗೆ ವಾಪಾಸ್ ತಂದು ಬಿಟ್ಟಿದ್ದರು.  ಹಾಗಿದ್ದರೆ ಡ್ರಗ್ಸ್ ತೆಗೆದುಕೊಳ್ಳುವವರು ಪ್ರಾಣಿಗಳಿಗಿಂತಲೂ ಹೀನವಾದರೇ? ಕರುಣಾಮಯಿಗಳಾದ ಹೆತ್ತವರೇ ಕಾಡಿನಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಬರುವಷ್ಟು ಮಟ್ಟಿಗೆ ಅವರ ಮನಸ್ಸು ಕಲ್ಲಾಗಿದೆಯೆಂದರೆ ಅವರಿಗಾಗಿರುವ ನೋವಾದರು ಎಂತಹದು? ಯೋಚಿಸಿ ನೋಡಿ. 

  


ಈ ಡ್ರಗ್ಸ್ ಅನ್ನು ನಿರ್ಮೂಲನೆ ಮಾಡುವ ವಿಚಾರದ ಕುರಿತು ಸದನದಲ್ಲಿ ಚರ್ಚೆಯಾದರೆ, ನಮ್ಮ ಹಿರಿತಲೆಯ ರಾಜಕಾರಣಿಗಳು “ಅದು ಯಾವುದೋ ಒಂದು ಧರ್ಮದ ಜನರು ಕೆಟ್ಟ ಉದ್ದೇಶದಿಂದ ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದಾರೆ” ಎಂದು common sense ಇಲ್ಲದೆ ಹಾಸ್ಯಾಸ್ಪದವೆನಿಸುವ ಉತ್ತರಗಳನ್ನು ಕೊಡುತ್ತಾ ಕಿತ್ತಾಡುತ್ತಿರುತಾರೆ. ಯಾವುದೋ ಒಂದು ಧರ್ಮದವರು ಡ್ರಗ್ಸ್ ಅನ್ನು ಮಾರಾಟಮಾಡಲು ಅವರೇನು ಜಿಹಾದಿಗಳೇ ಅಥವಾ ಇನ್ಯಾವುದೋ ಮತಾಂಧರೇ? ಹಾಗಿದ್ದರೆ ಕಡೇಪಕ್ಷ ಕರ್ನಾಟಕವನ್ನಾದರು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಿ ಸುಭದ್ರ ಮಾಡಿಕೊಳ್ಳುವ ಹೊಣೆಯನ್ನು ಹೊರುವವರಾದರೂ ಯಾರು? ಭಾರತದಲ್ಲೇ ಅತೀ ಶಕ್ತಿಯುತವಾದ ಮತ್ತು ಯುವಕರೇ ತುಂಬಿರುವಂತಹ, ಯುವಕರಿಗಾಗಿಯೇ ಇರುವಂತಹ ಸಂಘವೆಂದರೆ ಅದು ABVP. ವಿದ್ಯಾರ್ಥಿಗಳ ಎಲ್ಲಾ ಸಮಸ್ಯೆಗಳನ್ನು ಚಾಕಚಕ್ಯತೆಯಿಂದ ಸರಾಗವಾಗಿ ಪರಿಹಾರ ಮಾಡಿಕೊಡುವ ABVP ಇಂದಲೂ ಸಹ ಏಕೆ ಇನ್ನು ಪ್ರಭಲವಾದ ಕೂಗು ಕೇಳಿಬರುತ್ತಿಲ್ಲ? ಇದರ ವಿರುದ್ಧ ಹೋರಾಡಲೂ ಸಹ ಯಾರೂ ಏಕೆ ಮುಂದೆ ಬರುತ್ತಿಲ್ಲಾ? ಇವರನ್ನು ತಡೆಹಿಡಿಯುತ್ತಿರುವ ಶಕ್ತಿಯಾದರೂ ಯಾವುದು? ಸ್ನೇಹಾಳ ವಿಚಾರದಲ್ಲೂ ಅವಳ ಪೋಷಕರು ಅವಳ ದುಶ್ಚಟಗಳನ್ನು ಬಿಡಿಸಲು ಹರಸಾಹಸ ಮಾಡಿದರೂ ಯಾವ ಪ್ರಯೋಜನವೂ ಆಗಲಿಲ್ಲ. ಕಟ್ಟ ಕಡೇಯ ಅಸ್ತ್ರವಾಗಿ ಅವಳಿಗೆ ಹಣವನ್ನು ಕೊಡಲು ನಿರಾಕರಿಸಿದಾಗ ಅವಳು ಆತ್ಮಹತ್ಯೆಯಂತಹ ಹೀನ ಕೃತ್ಯವೆಸಗಿದಳು. ಇವರನ್ನು ತಡೆದು ನಿಲ್ಲಿಸುವ ಬಗೆಯಾದರೂ ಹೇಗೆ? ಇಂದಿಗೂ ಬೆಂಗಳೂರಿನ ಕೆಲ ಕೆಳವರ್ಗದ ಮತ್ತು ಮೇಲ್ವರ್ಗದ ಕಾಲೇಜುಗಳಲ್ಲಿ ಡ್ರಗ್ಸ್ ಗಳು ಎಗ್ಗಿಲ್ಲದೆ ಮಾರಾಟವಾಗುತ್ತಿವೆ, ಆದರೆ ಕರಾವಳಿ ಪ್ರದೇಶಗಳಲ್ಲಿ ಇದರ ದುಪ್ಪಟ್ಟು ವಹಿವಾಟುಗಳು ನೆಡೆಯುತ್ತಿದೆಯೆನ್ನುವುದಿಕ್ಕೆ ಅಲ್ಲಿ ಮಂದಗತಿಯಲ್ಲಿ ಬೆಳಕಿಗೆ ಬರುತ್ತಿರುವ ಡ್ರಗ್ಸ್, ಹೋಮ್ ಸ್ಟೇ, ರೇವ್ ಪಾರ್ಟಿಗಳೇ ಉದಾಹರಣೆಗಳು. ಹಿಂದೆ 2001ನೇ ಇಸವಿಯಲ್ಲಿ ಮಂಗಳೂರಿನ ಮಧ್ಯಮವರ್ಗದ ಯುವಕನೋರ್ವ ವಿಧ್ಯಾಭ್ಯಾಸಗಳಲ್ಲಿ ಅವನೇ ಮೊದಲಿಗನಾಗಿದ್ದ. ದಿನಗಳು ಉರುಳುತ್ತಿದ್ದಂತೆ ಅವನ ನಡತೆಯಲ್ಲಿ ವಿಪರೀತ ಬದಳಾವಣೆಗಳಾಗುತ್ತಿತ್ತು. ಆದರೆ ಇದೆಲ್ಲಾ ಆಯಾ ವಯಸ್ಸಿನ ಲಕ್ಷಣಗಳೆಂದು ಸುಮ್ಮನಿದ್ದ ಪೋಷಕರಿಗೆ ಹೃದಯವೇ ಚೂರಾಗುವಂತಹ ಸುದ್ದಿಯೊಂದು ಕೇಳಿತು. ಸಮಯಕ್ಕೆ ಸರಿಯಾಗಿ ಮನೆಗೆ ಬರಬೇಕಿದ್ದ ಮಗ ಬರಲಿಲ್ಲ, ಹುಡುಕಿ ನೋಡಿದರೆ ಆತ ಅತಿಯಾದ ವಿಷಪೂರಿತ ಡ್ರಗ್ಸ್ ಸೇವಿಸಿದ್ದರಿಂದ ಅಸುನೀಗಿದ್ದ. ಮಕ್ಕಳು ಒಳ್ಳೆಯ ಅಂಕಗಳು ತೆಗೆಯುತ್ತಿದ್ದರೆ ಪೋಷಕರಿಗೆ ಮಕ್ಕಳ ಮೇಲಿನ ಜವಾಬ್ದಾರಿಗಳು ಕಳೆದಂತಲ್ಲ. ಕೇವಲ ಹಾಳೆಯ ಮೇಲಿರುವ ಅಂಕ ಮುಖ್ಯವಲ್ಲ, ಅಂಕಗಳನ್ನು ತೆಗೆಯುವ ಶರೀರ ಮತ್ತು ಮನಸ್ಸುಗಳೂ ಅಷ್ಟೇ ಮುಖ್ಯ ಏಕೆಂದರೆ “ಶರೀರ ಮಾಧ್ಯಮಮ್ ಖಲುಧರ್ಮ ಸಾಧನಮ್”. ಆದ್ದರಿಂದಲೇ ಅವರನ್ನು ಸದಾ ಗಮನಿಸುತ್ತಿರಬೇಕು. ಹಾಗೆಂದು ಅವರನ್ನು ಕಟ್ಟುಪಾಡಿನಲ್ಲಿಡುವುದಲ್ಲ. ನಿಮ್ಮ ಕಣ್ಣೆದುರೇ ಒಂದು ಚೌಕಟ್ಟನ್ನು ನಿರ್ಮಿಸಿ, ಚೌಕಟ್ಟಿನಲ್ಲಿ ನಿಮ್ಮ ಮಕ್ಕಳನ್ನು ಬಿಡುವುದೊಳಿತು. ಅದೊಂದೇ ಈ ಡ್ರಗ್ಸ್ ಮತ್ತು ದುಶ್ಚಟಗಳಿಂದ ನಿಮ್ಮ ಮಕ್ಕಳನ್ನು ದೂರವಿಡುವ ಏಕೈಕ ಮಾರ್ಗ. ವ್ಯವಸ್ಥೆಯು ನಮ್ಮನ್ನು ಸರಿಮಾಡುತ್ತವೆಯೆಂದು  ನಂಬಿ ಕುಳಿತರೆ, ಸ್ನೇಹಾಳಂತಹ ಇನ್ನೂ ನೂರಾರು ಪ್ರತಿಭಾನ್ವಿತ ಮಕ್ಕಳನ್ನು ಈ ದೇಶ ಕಳೆದುಕೊಳ್ಳಬೇಕಾಗುತ್ತದೆ ಎಚ್ಚರ!





--ಚಿರಂಜೀವಿ ಭಟ್                                                      email: chirubhat007@gmail.com                  

Thursday, 13 June 2013

ಮಕ್ಕಳಿಗೆ ಇಂಥಹ ದಗಲ್ಬಾಜಿ ರಾಜರ ಪಾಠಗಳನ್ನು ಹೇಳುವ ಬದಲು ಅವಿಧ್ಯಾವಂತರನ್ನಾಗಿಸುವುದೇ ಉತ್ತಮ!!



ಮಕ್ಕಳಿಗೆ ಇಂಥಹ ದಗಲ್ಬಾಜಿ ರಾಜರ ಪಾಠಗಳನ್ನು ಹೇಳುವ ಬದಲು ಅವಿಧ್ಯಾವಂತರನ್ನಾಗಿಸುವುದೇ ಉತ್ತಮ!!



                        
ಅಕ್ಬರ್ ಒಬ್ಬ ಮಹಾ ಪರಾಕ್ರಮಿ ಮತ್ತು ಭಾರತೀಯರ ಬಗ್ಗೆ ಅವನಿಗೆ ಬಹಳಷ್ಟು ಕಾಳಜಿಯಿತ್ತು. ಅವನ ಪರಾಕ್ರಮವನ್ನು ಎಲ್ಲರೂ ಮನಸಾರೆ ಹೊಗಳುತ್ತಿದ್ದರು. ಶಹಜಹಾನ್, ಮುಮ್ ತಾಜ್ ಮೇಲಿನ ಪ್ರೇಮಕ್ಕೆ ಸೋತುಹೋಗಿ ಅವಳ ನೆನಪಿಗಾಗಿ ತಾಜ್ ಮಹಲ್ ಅನ್ನು ಕಟ್ಟಿದ. ಅಲ್ಲಾವುದ್ಧೀನ್ ಖಿಲ್ ಜಿ, ಕುತುಬುದ್ಧೀನ್ ಐಬಕ್, ಹೀಗೆ ಹಲವಾರು ರಾಜರುಗಳಿಗೆ ನಮ್ಮ ದೇಶದಲ್ಲಿ ಸ್ಥಾನ ಕೊಟ್ಟಿದ್ದಲ್ಲದೆ ಅವರನ್ನು ಪರಾಕ್ರಮಿಯೆಂದು ಬಹುಪರಾಕ್ ಹಾಕುತ್ತಾ ಬಂದಿದ್ದೇವೆ.. ! ಆದರೆ ನಿಜವಾಗಿಯೂ ಅವರು ಪರಾಕ್ರಮಿಗಳೇ? ರಾಕ್ಷಸಗುಣಕ್ಕೂ ಪರಾಕ್ರಮಕ್ಕೂ ವ್ಯತ್ಯಾಸವೇ ಗೊತ್ತಿಲ್ಲವೇ? ಹಾಗಿದ್ದರೆ ರಾಕ್ಷಸರನ್ನೂ ನಾವು ಮಹಾಪರಾಕ್ರಮಿಗಳು ಎಂದೆನ್ನಬಹುದಲ್ಲವೇ? ದುರದೃಷ್ಟವೆಂದರೆ ಇಂತಹ ಆಘಾತಕಾರಿ ವಿಷಯಗಳನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ. ಒಬ್ಬ ಲೇಖಕ ತಪ್ಪಾಗಿ ಬರೆದರೆ ಮಾಡಿದರೆ ಇಡೀ ಪೀಳಿಗೆಯನ್ನೇ ಸುಡಬೇಕೆನ್ನುತ್ತಾರೆ. ಆದರೆ ಬರೀ ಅಸತ್ಯಗಳೇ ತುಂಬಿರುವಂತಹ ಇತಿಹಾಸ ಪುಸ್ತಕಗಳನ್ನು ಮಕ್ಕಳಿಗೆ ಪಾಠವಾಗಿ ಕೊಟ್ಟರೆ ಇಡೀ ಸಮಾಜವನ್ನೇ ಸುಡಬೇಕಾದೀತು! ಹೌದು, ಇಂದು ನಮ್ಮ ಮಕ್ಕಳಿಗೆ ಬಹುತೇಕ ಮುಸಲ್ಮಾನ ರಾಜರುಗಳ ರಾಕ್ಷಸ ಕೃತ್ಯಗಳನ್ನು ಪರಾಕ್ರಮವೆಂದು ಹೇಳಿಕೊಡಲಾಗುತ್ತಿವೆ. ಶಹಜಹಾನ್ ತನ್ನ ಪ್ರೇಮಕ್ಕಾಗಿ ತಾಜ್ ಮಹಲ್ ಅನ್ನು ಕಟ್ಟಿರಬಹುದು ಆದರೆ ಅವನು 1635ರಲ್ಲಿ ಬಂಡೇಲಾದ ರಾಜಧಾನಿ ಒರ್ಚ್ಚಾದಲ್ಲಿ  ಸಹಸ್ರಾರು ಸೃಜನಶೀಲ ಹಿಂದುಗಳನ್ನು ಮಾರಣ ಹೋಮವನ್ನೇ ಮಾಡಿ ಅಲ್ಲಿದ್ದ ಬಿರ್ ಸಿಂಗ್ ದೇವ್ ದೇವಸ್ಥಾನವನ್ನು ಉರುಳಿಸಿ ಅಲ್ಲೇ ಒಂದು ಮಸೀದಿಯನ್ನೂ ಕಟ್ಟಿದ್ದಾನೆ, ಇನ್ನು ಅನೇಕ ಹಿಂದೂಗಳ ಮಾರಣ ಹೋಮ.. ಅದೂ ಕೇವಲ ಮುಸಲ್ಮಾನ ಧರ್ಮಕ್ಕೆ ಮತಾಂತರವಾಗಲು ತಿರಸ್ಕರಿಸಿದ್ದಕ್ಕೆ ಎಂಬ ವಿಚಾರವನ್ನು ಮಕ್ಕಳ ಪುಸ್ತಕದಲ್ಲಿ ಎಲ್ಲಾದರೂ ಪ್ರಕಟಿಸಿದ್ದಾರೆಯೇ?  ಇಂದು ತಾಜ್ ಮಹಲ್ ನೋಡಿ ವಾಹ್ ತಾಜ್! ಎನ್ನುವ ನಾವು ಹಿಂದೆ ಅಲ್ಲಿ ದೇವಸ್ಥಾನವಿತ್ತೆಂಬುದನ್ನು ಮರೆತಂತಿದೆ. ಪ್ರೀತಿ ಪ್ರೇಮದ ವಿಷಯ ಬಂದರೆ ನಮ್ಮ ನಳ ದಮಯಂತಿಯ ಪಾಠಗಳನ್ನಿಡುವ ಬದಲು ಇನ್ಯಾವುದೋ ದೇಶದಿಂದ ಬಂದ ಮೊಘಲ್ ರಾಜ ನಮಗೇಕೆ ಬೇಕು? ಅವನ ತತ್ವಗಳು ನಮಗೆ ಆದರ್ಶವಾಗುವುದಾದರೂ ಹೇಗೆ? 

ಇನ್ನು ಅಕ್ಬರ್ ದಿ ಗ್ರೇಟ್ ಎಂದು ಹೆಮ್ಮೆಯಿಂದ ಬೀಗುವ 4ರಿಂದ 6ನೇಯ ತರಗತಿಯ ಪುಸ್ತಕಗಳ ಲೇಖಕರಿಗೆ ಇನ್ನೂ ಅಕ್ಬರ್ ನ ಇನ್ನೊಂದು ಮುಖದ ಪರಿಚೆಯವಿಲ್ಲವೆಂದೆನಿಸುತ್ತದೆ ಏಕೆಂದರೆ ಅಕ್ಬರ್ ತಾನೂ ಸಹ ಇಸ್ಲಾಮ್ ಧರ್ಮಕ್ಕೆ ಸೇವೆಯನ್ನೆಸಗಿದ್ದೇನೆ ಎನ್ನುವ ಸಲುವಾಗಿ ಪಾಣಿಪಟ್ ನ ಎರಡನೇ ಯುದ್ಧದಲ್ಲಿ ಪಾಲ್ಗೊಂಡ ಸೈನಿಕರನ್ನು ಬಲಿ ತೆಗೆದುಕೊಂಡಿದ್ದಲ್ಲದೆ, ಯುದ್ಧದಲ್ಲಿ ಭಾಗವಹಿಸದೆ ಇದ್ದ ಅಮಾಯಕರಾದ ಎಂಟು ಸಾವಿರ ರಜಪುತ್ಸ್ ಮತ್ತು ಇಪ್ಪತ್ತು ಸಾವಿರ ರೈತರನ್ನು ಬಲಿ ತೆಗೆದುಕೊಂಡಿದ್ದಾನೆಂಬುದು “ಅಕ್ಬರ್-ನಾಮಾ”ದಲ್ಲಿ ಉಲ್ಲೇಖವಿದೆ. ಹಾಗಿದ್ದರೆ ಯಾವ ಕೋನದಿಂದ ಅಕ್ಬರ್, ನಮಗೆ ಮತ್ತು ಅವನ so called ಪರಾಕ್ರಮ ಓದುತ್ತಿರುವ ಮಕ್ಕಳಿಗೆ ಆದರ್ಶವಾಗಿಯಾನು?
ಇನ್ನು ಮೊಹಮ್ಮದ್ ಘೋರಿಯ ಸೇನಾಧಿಕಾರಿಯಾದ ಕುತುಬ್ ಉದ್ಧೀನ್ ಐಬಕ್ 1193ರ ಅಲಿಘಾರ್ ನಲ್ಲಿ ಸಾವಿರಾರು ಹಿಂದೂಗಳ ತಲೆಯನ್ನು ಛೇದಿಸಿ ಅವನ ಕೋಟೆಗೆ ಅಲಂಕಾರಕ್ಕಾಗಿ ಇಟ್ಟಿದ್ದಲ್ಲದೇ 1194ರಲ್ಲಿ ದೆಹಲಿಯಲ್ಲಿನ 27 ಜೈನ್ ದೇವಾಲಯಗಳನ್ನು ಧ್ವಂಸಮಾಡಿ ಅದೇ ಅವಷೇಶಗಳಿಂದ ಖುವ್ವತ್-ಉಲ್-ಇಸ್ಲಾಮ್ ಮಸೀದಿಗಳನ್ನು ಒಬ್ಬ ಸೇನಾಧಿಕಾರಿಯೆ ಕಟ್ಟಿದನೆಂದರೆ ಇನ್ನು ಅವನ ರಾಜ ಘೋರಿಯ ಘೋರತೆಯನ್ನು ನೀವೇ ಊಹಿಸಿಕೊಳ್ಳಿ.
ಔರಂಗ್ ಜೇಬ್ ನು ಛತ್ರಪತಿ ಶಿವಾಜಿಯ ಮಗನಾದ ವೀರ್ ಸಾಂಭಾಜಿಯನ್ನು ಪುಣೆಯಲ್ಲಿ ಮಾರ್ಚ್
11, 1689ರಂದು ಅವನ ಕಣ್ಣುಗಳನ್ನು ಕಿತ್ತು, ನಾಲಿಗೆ ಮತ್ತು ಕೈಗಳನ್ನು ಕತ್ತರಿಸಿರಿ ಹಿಂಸಾತ್ಮಕವಾಗಿ ಕೊಂದಿದ್ದಲ್ಲದೇ ಅವನ ಮಾಂಸಗಳನ್ನು ಕತ್ತರಿಸಿ ನಾಯಿಗಳಿಗೆ ಆಹಾರವಿತ್ತ ಉದಾಹರಣೆಯೂ ಇದೆ. ನಿಜವಾದ ಇತಿಹಾಸ ಪುಸ್ತಕದ ಪುಟಗಳನ್ನು ತಿರುವಿಹಾಕುತ್ತಿದ್ದರೆ ಇನ್ನು ಅನೇಕ ಆಘಾತಕಾರಿ ವಿಷಯಗಳು ನಮಗೆ With Proof ಸಿಗುತ್ತವೆ. ಇನ್ನು ಇವರ ದುಷ್ಕೃತ್ಯಗಳನ್ನು ಪರಾಕ್ರಮವೆಂದು ಹೊಗಳುತ್ತಾ ಪುಟ್ಟ ಮಕ್ಕಳನ್ನು ನಂಬಿಸುತ್ತಿರುವ ಪುಸ್ತಕಗಳನ್ನು ಯಾವುದರಲ್ಲಿ ಹಾಕಿ ಸುಡಬೇಕು? ಇನ್ನು ಅದನ್ನು ಓದುತ್ತಾ ಬೆಳದಿರುವ ಪೀಳಿಗೆಯನ್ನು ಹೇಗೆ ಸುಡಬೇಕು??

                             



 ಅಷ್ಟಕ್ಕೂ ಮಕ್ಕಳಿಗೆ ಹಿರಿಯರ ಪರಾಕ್ರಮದ ಮೂಲಕ ದೇಶಾಭಿಮಾನ ಮೂಡಿಸುವ ಉದ್ದೇಶವೇ ಇದ್ದಲ್ಲಿ ಅವರಿಗೆ ಮದನ್ ಲಾಲ್ ಧಿಂಗ್ರ, ವೀರ ಸಾವರ್ಕರ್ ಅಂಥವರ ಪಾಠಗಳನ್ನೇಕಿಡುವುದಿಲ್ಲ?? ನಾಳೆಯೋ ನಾಡಿದ್ದೋ ಅಸುನೀಗುವ ವಯಸ್ಕರೂ ಸಹ ಇನ್ನು ಕೆಲ ದೇಶಕ್ಕಾಗಿ ಹೋರಾಡಿ ಪ್ರಾಣ ಬಿಟ್ಟ ನಿಜವಾದ ಪರಾಕ್ರಮಿಗಳ ಹೆಸರೇ ಕೇಳಿರುವುದಿಲ್ಲ, ಇನ್ನು ಅವರ ಕಥೆಗಳನ್ನು ಕೇಳುತ್ತಾ ಬೆಳೆದಿರುವ ಮಕ್ಕಳಾದರೂ ಹೇಗೆ ಕೇಳಲು ಸಾಧ್ಯ?? ಮದನ್ ಲಾಲ್ ಧಿಂಗ್ರನೆಂಬುವ 21ವರ್ಷದ ಯುವಕ ವೀರ ಸಾವರ್ಕರ್ರ ದೇಶಾಭಿಮಾನದ ಮಾತುಗಳನ್ನ್ ಕೇಳಿ ಆಕರ್ಷಿತನಾಗಿ ಬಂದು ಸಾವರ್ಕರ್ರಲ್ಲಿ ತನಗೊಂದು ಗುರಿಯನ್ನು ನಿರ್ಮಿಸಿಕೊಡಿಯೆಂದು ಕೇಳಿ ಪಡೆದು ಭಾರತದ ಸ್ವಾತಂತ್ರ್ಯದ ಹೋರಾಟಗಾರರಿಗೆ ಹಿಂಸಿಸುತ್ತಿದ್ದ ಕರ್ಜನ್ ವಾಯ್ಲಿಯೆಂಬ ಬ್ರಿಟೀಷ್ ಅಧಿಕಾರಿ ಕೊಲ್ಲು ಎಂದು ಆದೇಶ ನೀಡಿದ ಒಂದೇ ತಿಂಗಳಿನಲ್ಲಿ  ಕರ್ಜನ್ ವಾಯ್ಲಿಯನ್ನು ಹೊಂಚು ಹಾಕಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗುಂಡಿಟ್ಟು ಕೊಂದು ಜೈಲು ಸೇರಿ ಕೊನೆಗೆ ಮರಣ ದಂಡನೆಯನ್ನು ನಗುಮೊಗದಿಂದಲೇ ಸ್ವೀಕರಿಸಿದ ಮದನ್ ಲಾಲ್ ಧಿಂಗ್ರನ ಬಗ್ಗೆ ಬಹುತೇಕ ಯಾವ ಜನರಿಗೂ ಗೊತ್ತಿಲ್ಲ, Google ಹೊರತಾಗಿ!! ಇಂಥವರ ಪಾಠಗಳನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ಬೋಧಿಸುವ ಬದಲು ಒಂದೇ ಒಂದು ಜಾತಿಯ ಸಲುವಾಗಿ ಲಕ್ಷಾಂತರ ಹಿಂದೂಗಳ ಮಕ್ಕಳನ್ನು ತಬ್ಬಲಿ ಮಾಡಿದ, ಹೆಂಗಸರನ್ನು ವಿಧವೆಯನ್ನಾಗಿಸಿದ ಆ ಮುಸಲ್ಮಾನ ರಾಜರುಗಳಿಂದ ನಾವಿ ಕಲಿಯುವ ನೀತಿಯಾದರೂ ಏನು? ಖಾಸಗಿ ಶಾಲೆಗಳ ಶಿಕ್ಷಕರ ನೇಮಕಾತಿ ಮತ್ತು ಇನ್ನಿತರ ಬಹುತೇಕ ವಿಚಾರಗಳಲ್ಲಿ ತನ್ನ ಮೂಗು ತೋರಿಸುವ ನಮ್ಮ ಘನ ಸರ್ಕಾರ ಏಕೆ ಇಂತಹ ನಿಜವಾದ ಪರಾಕ್ರಮಿಗಳ ಪಾಠಗಳನ್ನು ಕಡ್ಡಾಯಗೊಳಿಸುತ್ತಿಲ್ಲ?? ಇನ್ನು ಸರಕಾರಿ ಶಾಲೆಗಳಲ್ಲಿ ಅದೇ ಹಾವು ಮುಂಗೂಸಿ ಕಥೆ, ಆಮೆ ಮೊಲದ ಓಟದ ಸ್ಪರ್ಧೆಯ ಕಥೆಗಳನ್ನು ಸುಮಾರು ಹತ್ತು ಹದಿನೈದು ವರುಷಗಳಿಂದಲೂ ಬದಲಾಯಿಸದೇ ಇರುವ ಬದಲು ಇಂತಹ ನಿಜವಾದ ಪರಾಕ್ರಮಿಗಳ ಮತ್ತು ಇನ್ನಿತರ ಕ್ಷೇತ್ರದಲ್ಲಿ ಸಧನೆ ಮಾಡಿ ದೇಶಕ್ಕೆ ಹೆಸರು ತಂದುಕೊಟ್ಟಂಥವರ ಪಾಠಗಳನ್ನು ಸೇರಿಸಿದರೆ ಪಾಠ ಮಾಡುವ ಶಿಕ್ಷಕರಿಗೂ ರಿಟೈರ್ ಆಗುವ ಸಮಯದಲ್ಲಿ ಬುದ್ಧಿ ಬರುತ್ತದೆ ಮತ್ತು ಹೊಸ ಮಕ್ಕಳೂ ಸಹ ನಮ್ಮ ಹಿರಿಯರ ಪರಾಕ್ರಮಗಳು ಮತ್ತೆ ಸಾಧನೆಯಿಂದ ಪ್ರೇರೇಪಿತಗೊಂಡು ತಮ್ಮ ಜೇವನದ ಹಾದಿಯನ್ನು ನಿರ್ಮಿಸಿಕೊಳ್ಳುವಲ್ಲಿ ಯಶಸ್ವಿಯಾಗಬಹುದಲ್ಲವೇ?? ಈ ಹೊಸ ಐಡಿಯವನ್ನು ಓಮ್ಮೆ ಟ್ರಯ್ ಮಾಡಿ ನೋಡಬಹುದಲ್ಲವೇ ವಿಧ್ಯಾಮಂತ್ರಿಗಳೇ..???  




 
---ಚಿರಂಜೀವಿ ಭಟ್,                            
email- chirubhat007@gmail.com

Wednesday, 12 June 2013

ಅವರು ನಿಜವಾಗಿಯೂ ಮಹಾತ್ಮರೇ??



                    ಅವರು ನಿಜವಾಗಿಯೂ ಮಹಾತ್ಮರೇ??
                            

ಗಾಂಧಿವಾದಿಗಳು ಕೋಪಿಸಿಕೊಳ್ಳುವ ಅಗತ್ಯವಿಲ್ಲ. ಗಾಂಧಿ ವಿರೋಧಿಗಳು ಖುಷಿ ಪಡುವ ಸಂಗತಿಯೂ ಇಲ್ಲ. ನಾವು ಸ್ವಾತಂತ್ರ್ಯ ಸಂಗ್ರಾಮದ ವೀಡಿಯೋ ತುಣುಕುಗಳನ್ನು ನೋಡುತ್ತಿದ್ದಾಗ ಕ್ಯಾಮೆರಾ ಮುಂದೆ ಪಟಪಟನೆ ನೆಡೆದು ಬರುತ್ತಿದ್ದರಿಂದಲೋ ಏನೋ ಇನ್ನಿತರ ಸ್ವಾತಂತ್ರ್ಯ ಹೋರಟಗಾರರಾದ ಸುಭಾಷ್, ವೀರ ಸಾವರ್ಕರ್, ಚಂದ್ರಶೇಖರ್ ಆಜ಼ಾದ್, ಮದನ್ ಲಾಲ್ ಧಿಂಗ್ರರಂಥವರು ಕೇವಲ “”ಇನ್ನಿತರ””ರಾಗೆ ಉಳಿದಿದ್ದಾರೆ. ಸರಿ, ನಮ್ಮ ಪುಣ್ಯಕ್ಕೆ ನಮ್ಮ ದೇಶದವರೇ ಆದ ಗಾಂಧಿಜಿಯನ್ನು ಮಹಾತ್ಮಎಂದಿರಿ. ಆದರೆ ಅವರನ್ನು ಯಾವ ಆಧಾರದ ಮೇಲೆ ಮಹಾತ್ಮ ಎಂದು ಒಪ್ಪಿಕೊಳ್ಳುವುದು?? ಮತ್ತೊಂದೆಡೆ ಒಬ್ಬ ಮನುಷ್ಯ ತನ್ನ ಜೀವಾವಧಿಯಲ್ಲಿ ಅಷ್ಟು ತಪ್ಪು ಮಾಡಿದರೂ ಮಹಾತ್ಮನೆಂದು ಹೇಗೆ ಅನ್ನಿಸಿಕೊಳ್ಳುತ್ತಾನೆ?? ಇವೆಲ್ಲಾ ಪ್ರಶ್ನೆಗಳು ನಮಗೆ ಕಾಡುವುದು ಗಾಂಧಿಜಿಯವರು ಸ್ವತಃ ಬರೆದಿರುವ ಅವರ ಆತ್ಮಚರಿತ್ರೆ The Story of My Experiments with Truth ಓದಿದಾಗ. ಕೊಂಚ ಸೂಕ್ಷ್ಮವಾಗಿ ಅರ್ಥೈಸಿಕೊಂಡಾಗ ಗಾಂಧೀಜಿಯವರು ಮಹಾತ್ಮರಾಗಲು ಏನೇನು ಮಾಡಿದ್ದಾರೆಂಬುದು ನಮಗೆ ಸ್ಪಷ್ಟವಾಗಿ ತಿಳಿದುಬಿಡುತ್ತದೆ. ಅವರು ಮಹಾತ್ಮರಾಗಲು ಮಾಡಿದ ಪ್ರಯತ್ನಗಳನ್ನು ನಿಮಗೆ ಅವರ ಮಾತುಗಳನ್ನೇ quote ಮಾಡುತ್ತೇನೆ ಕೇಳಿ.
ಗಾಂಧೀಜಿಯವರೇ ಹೇಳುವಂತೆ ಅವರಿಗೆ ಲೈಂಗಿಕ ಕ್ರಿಯೆಯಲ್ಲಿ ಸಾಮಾನ್ಯರಿಗಿಂತ ಅತೀವ ಆಸಕ್ತಿಯುಳ್ಳವರಾಗಿದ್ದರು
. ನನಗೆ ನನ್ನ ತಂದೆ ಅವರ ಕಾಲುಗಳನ್ನು ಮಸಾಜ್ ಮಾಡಲು ಹೇಳುತ್ತಿದ್ದರು, ನಾನು ಅವರ ಕಾಲುಗಳನ್ನು ಮಸಾಜ್ ಮಾಡುತ್ತಿದ್ದರೂ ನನ್ನ ಮನಸ್ಸು ಬೆಡ್‌ರೂಮ್‍ನಲ್ಲಿ ಇರುತ್ತಿತ್ತುಎಂದಿದ್ದಾರೆ.  ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ಗಾಂಧೀಜಿಯವರು ತಮ್ಮ ತಂದೆಯ ಸಾವಿನ ಸಂದರ್ಭದಲ್ಲಿ ಅವರು ಆಸ್ಪತ್ರಯಲ್ಲಿ ತಂದೆಯನ್ನು ನೋಡಿಕೊಳ್ಳುತ್ತಿದ್ದರು. ಗಾಂದೀಜೀಯನ್ನು ಸ್ವಲ್ಪ ಸಮಯಗಳ ಕಾಲ ರಿಲೀವ್ ಮಾಡಲು ಅವರ ಅಂಕಲ್ ಬಂದ ಮೇಲೆ ಗಾಂಧೀಜಿಯವರು ಮನೆಗೆ ಹೋಗಿ ಮಲಗಿದ್ದ ತನ್ನ ಪತ್ನಿಯನ್ನು ಎಬ್ಬಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರು ಎಂದೂ ಸಹ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಆ ಸಮಯದಲ್ಲಿ ತಮ್ಮ ತಂದೆಯ ಸಾವಿನ ವಿಷಯವನ್ನು ಕೇಳಿದಾಗ ಅಲ್ಲಿಂದ ತನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗಿ Guilt Feel ಆಗಲು ಶುರುವಾಯಿತು ಎಂದಿದ್ದಾರೆ. ಗಾಂಧೀಜಿಯವರು ಹೇಳಿದ ಈ ಮಾತನ್ನು ಕೇಳಿ ಅವರು ತಮ್ಮ ತಪ್ಪಿಗೆ ಪಶ್ಚಾತಾಪ ಪಟ್ಟಿದ್ದಾರೆಂದು ಇವರನ್ನು ಒಂದೇ ಸಮನೆ ಮಹಾತ್ಮನೆಂದು ಒಪ್ಪಲು ಸಾಧ್ಯವೇ?? ಹಾಗಾಗಿ ಗಾಂಧೀಜಿಯವರು 1901 ಒಂದೇ ಸಮನೆ ನಾಲ್ಕು ಮಕ್ಕಳಿಗೆ ತಂದೆಯಾದ ಬಳಿಕ ಬ್ರಹ್ಮಚರ್ಯವನ್ನು ತೆಗೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರು. 1906 ರಲ್ಲಿ ತನ್ನ ಹೆಂಡತಿಗೆ ಬ್ರಹ್ಮಚರ್ಯ ವೃತವನ್ನು ಅನುಸರಿಸುವುದಾಗಿ ಹೇಳಿ ಬ್ರಹ್ಮಚರ್ಯ ವೃತವನ್ನು ಶುರು ಮಾಡಿಕೊಂಡರು. ನಂತರ ಗಾಂಧೀಜಿ ನನ್ನ ಹೆಂಡತಿಗೆ ಒಪ್ಪಿಗೆ ಇದ್ದೋ ಇಲ್ಲದೆಯೋ ನನಗಾಗಿ ತ್ಯಾಗ ಮಾಡಿದಳುಎಂದರು. ಅಂದರೆ ತನ್ನ ಹೆಂಡತಿಗೆ ತಾವು ಬ್ರಹ್ಮಚಾರಿಯಾಗುವುದು ಇಷ್ಟವಿರಲಿಲ್ಲವೆಂದಾಯಿತಲ್ಲವೇ?? ಇವರಿಗೆ ಇಷ್ಟ ಬಂದಂತೆ ಗೃಹಸ್ತನಾಗುವುದು ಮತ್ತು ಬ್ರಹ್ಮಚಾರಿಯಾಗುವುದಾದರೆ ಹೆಂಡತಿಯೂ ಮನುಷ್ಯಳಲ್ಲವೇ?? ಅವಳಿಗೂ ಒಂದು ಮನಸ್ಸಿಲ್ಲವೇ ?? ಭಾವನೆಗಳಿಲ್ಲವೇ?? ಇಲ್ಲಿ ಗಾಂಧೀಜಿಯವರು ಮಹಾತ್ಮನಾಗಲು ಪ್ರಯತ್ನಿಸಿತ್ತಿದ್ದಾರೆಂದು ಮತ್ತೊಂಮ್ಮೆ ಅವರೇ ಸಾಬೀತು ಮಾಡಿಕೊಂಡರಲ್ಲದೇ ಮತ್ತಿನ್ನೇನು??
                        


ಇನ್ನು ಗಾಂಧೀಜಿಯವರಿಗೆ ಮನುಬೆನ್ ತಮ್ಮನ್ನು ಸೇವೆ ಮಾಡುವಿದರ ಸಲುವಾಗಿ ಅವರ ಜೊತೆಗಿದ್ದಳು. ಇನ್ನೊಂದು ಸಂಗತಿಯೆಂದರೆ ಮನುಬೆನ್ ಬಂದ ಮೇಲೆ ಗಾಂಧೀಜಿಯವರು ಅವರ ಊರುಗೋಲನ್ನು ಬಳಸುತ್ತಿರಲಿಲ್ಲ. ಅವಳ ಭುಜವೇ ಅವ್ರಿಗೆ ಊರುಗೋಲು. ಇದರಲ್ಲಿ ನಮ್ಮ ಆಕ್ಷೇಪವಿಲ್ಲ.. ನೀನು ಸದಾ ನನ್ನ ಸೇವೆಯನ್ನು ಯಾವುದೇ ಬೇಸರವಿಲ್ಲದೆ ಮಾಡುತ್ತೀಯೆ, ನಾನು ನಿನ್ನನ್ನು, ನನ್ನ ತಾಯಿಯನ್ನಾಗಿ ಕಾಣುತ್ತಿದ್ದೇನೆ ಎಂದು ಗಾಂಧೀಜಿ ಹೇಳುತ್ತಿದ್ದರು ಎಂದು ಮನುಬೆನ್ ತನ್ನ ಪರ್ಸನಲ್ ಡೈರಿ ಬರೆದುಕೊಂಡಿದ್ದಳು. ಆ ಡೈರಿಯು ಇತ್ತೀಚೆಗಷ್ಟೇ ದೊರೆತಿದ್ದು ಗಾಂಧೀಜಿಯ ಬಗ್ಗೆ ಹಲವಾರು ಆಶ್ಚರ್ಯಕರ ವಿಷಯಗಳನ್ನು ಹೊರ ಹಾಕಿವೆ. ಹಾಗಿದ್ದಲ್ಲಿ ಅವಳ ಡೈರಿಯಲ್ಲಿ ಏನಿದೆಯೆಂಬುದನ್ನು ನೀವೆ ತಿಳಿಯಿರಿ.
1946 ಡಿಸೆಂಬರ್ 21ರಂದು ಮನುಬೆನ್ ಹೀಗೆಂದು ತನ್ನ ಡೈರಿಯಲ್ಲಿ ಬರೆದಿದ್ದಾಳೆಂದು ಇಂಗ್ಲಿಷ್ ಮಾಧ್ಯಮ ಮತ್ತು ನಮ್ಮ ಕನ್ನಡ ಮಾಧ್ಯಮಗಳೂ ಪ್ರಕಟ ಮಾಡಿತ್ತು.
ಅಂದು 1946 ಡಿಸೆಂಬರ್ 21, ಎಂದಿನಂತೆ ನಾನು ಮತ್ತು ಬಾಪು ಮಲಗುವಾಗ ಬಾಪು ಸಂಪೂರ್ಣವಾಗಿ ಬೆತ್ತಲಾಗಿ ಮಲಗಿದ್ದರು, ನನ್ನನ್ನೂ ಸಹ ಬೆತ್ತಲಾಗಿ ಮಲಗುವುದಕ್ಕೆ ಹೇಳಿದರು. ಮೊದಲಿಗೆ ಕೊಂಚ ಸಂಕೋಚವಾದರೂ ನಾನು ಹಾಗೆಯೇ ಮಾಡಿದೆ. ಅಂದು ರಾತ್ರಿ ನಾನು ಬಾಪು ಒಂದೇ ಮಂಚದಲ್ಲಿ ಬೆತ್ತಲಾಗಿ ಮಲಗಿದ್ದೆವು. ಹಾಗೆ ಮಲಗುವುದಕ್ಕೆ ಬಲವಾದ ಕಾರಣವೂ ಇತ್ತು ಅವರು ತಮ್ಮ ಬ್ರಹ್ಮಚರ್ಯವನ್ನು ಪರೀಕ್ಷಿಸಿಕೊಳ್ಳುವುದಕ್ಕೆ ಹಾಗೆ ಮಾಡಿದರು. ಅವರು ಅದರಲ್ಲಿ ಗೆದ್ದಿದ್ದರು.” ತಮ್ಮ ಬ್ರಹ್ಮಚರ್ಯವನ್ನು ಪರೀಕ್ಷಿಸಿಕೊಳ್ಳಲು ಇನ್ನೊಬ್ಬ ಅಮಾಯಕ ಹುಡುಗಿಯನ್ನು ತನ್ನ ಬಳಿ ಬೆತ್ತಲಾಗಿ ಮಲಗಿಸಿಕೊಂಡವರನ್ನು ಹೇಗೆ ಮಹಾತ್ಮನೆಂದು ಒಪ್ಪೋಣ?? ಮನುಬೆನ್ ರನ್ನು ತನ್ನ ತಾಯಿಯೆಂದು ಗಾಂಧೀಜಿ ಹೇಳಿದ್ದರು  ಹಾಗಿದ್ದರೆ ಅದ್ಯಾವ ಮಗ ತಾನೆ ತನ್ನ ತಾಯಿಯನ್ನು ಬೆತ್ತಲಾಗಿ ನೋಡಲು ಇಚ್ಚಿಸತ್ತಾನೆ?? ಅಲ್ಲಿಗೆ ಮನುಬೆನ್ ತನ್ನ ತಾಯಿಯಂತೆ ಎಂಬ ವಾಕ್ಯ ಸುಳ್ಳಾದಂತಾಯಿತಲ್ಲವೇ?? ಅದಿಲ್ಲವಾದರೆ ಸತ್ಯ ಯಾವುದು??
“1947 ಜನವರಿ 1ರಂದು ನಾನು ಸುಶೀಲಾ ಬೆನ್ ರನ್ನು ನೀನು ಸಹ ಗಾಂಧೀಜಿಯವರ ಬ್ರಹ್ಮಚರ್ಯ ಪರೀಕ್ಷೆಗೆ ಅನುಮತಿ ನೀಡಿ ನನ್ನ ಜೊತೆ ಬರಬಹುದಲ್ಲ ಎಂದೆ ಆದರೆ ಅವರು ಅದಕ್ಕೆ ಒಪ್ಪಲೇ ಇಲ್ಲ. ಆದರೆ ಬಾಪು ಹೇಳಿದ ಪ್ರಕಾರ ಅದಾಗಲೇ ಸುಶೀಲಾ ಬೆನ್ ತನ್ನ ಜೊತೆ ಬೆತ್ತಲಾಗಿ ಮಲಗಿದ್ದಾಳೆ ಎಂದಿದ್ದಾರೆ. ಸುಶೀಲಾ ಬೆನ್ ಕೊಂಚ ನಾಚಿಕೆಯ ಸ್ವಭಾವದವಳಾಗಿದ್ದರಿಂದ ಅವಳು ನನ್ನ ಬಳಿ ಏನೂ ಹೆಳದಿರಬಹುದು. ಸುಶೀಲಾ ಬೆನ್ ನನಗೆ ಅವಳ ಸಂಬಂಧಿಕನೊಬ್ಬನನ್ನು ಮದುವೆಯಾಗಲು ಮನವಿಯಿಟ್ಟಳು ಆದರೆ ನನಗೆ ಇಷ್ಟವಿರಲಿಲ್ಲ. ನಾನು ಈ ವಿಷಯವನ್ನು ಬಾಪುವಿಗೂ ತಿಳಿಸಿದೆ ಆಗ ಸುಶೀಲ ಒಬ್ಬಳು ಹುಚ್ಚಿ ಎಂದಷ್ಟೇ ಹೇಳಿದ್ದರು.
ಇಲ್ಲೆ ಮನು ಬೆನ್ ರು ಹೇಳುವಂತೆ ಸಿಶೀಲಾ ಸಹ ಗಾಂಧೀಜಿಯವರೊಡನೆ ಬ್ರಹ್ಮಚರ್ಯಾ ಪರಕ್ಷೆಯಲ್ಲಿ ಪಾಲ್ಗೊಂಡಿದ್ದರೆಂದಾಯಿತು. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಮನು ಬೆನ್ ಗೆ ಮದುವೆಯಾಗಲು ಆಫರ್ ಬಂದಾಗ
, ಆಫರ್ ನೀಡಿದ ಸುಶೀಲಾ ಬನ್ ರನ್ನು ಅವಳೊಬ್ಬಳು ಹುಚ್ಚಿ ಎಂದು ಏಕೆ ಉಲ್ಟಾ ಹೊಡದರು?? ಇದರ ಹಿಂದಿನ ಆಲೋಚನೆಗಳೇನು??
ಗಾಂಧೀಜಿಯವರು ಒಬ್ಬ ದೇಶಭಕ್ತ ಮತ್ತು ಹೋರಾಟಗಾರ ಅದನ್ನು ನಾವು ಒಪ್ಪಲೇಬೇಕಾದ್ದು. ಅವರಿಗೆ ನಮ್ಮಲ್ಲಿ ಅಪಾರ ಗೌರವವಿದೆ ಆದರೆ ಅವರು ಮಹಾತ್ಮರಾಗಲು ಅರ್ಹರಿಲ್ಲ. ಏಕೆಂದರೆ
ಮಹಾತ್ಮಎಂದರೆ GREAT SOUL ಎಂದು ಪದದ ಅರ್ಥವಾದರೆ ಒನ್ನೊಂದು ಅರ್ಥ ಯಾರು ತಮ್ಮ ಜೀವನದಲ್ಲಿ ತಪ್ಪೇ ಮಾಡಿಲ್ಲವೋ ಆತ ಮಹಾ ಆತ್ಮ ಎಂದು. ಗಾಂಧಿಜಿಯವರು ಮಹಾತ್ಮ ಎಂದು ಕರೆಯುವುದಾದರೆ, ಸ್ವಾತಂತ್ರ್ಯ ಚಳುವಳಿ ಆರಂಭವಾಗಲು ಕಾರಣರಾದ ಸಿಪಾಯಿ ಧಂಗೆಯೆ ರೂವಾರಿ ಮಂಗಲ್ ಪಾಂಡೆ, ಇದ್ದ ಅಲ್ಪ ಜನಬಲದಲ್ಲೇ ಅವರಿಗೆ ಟ್ರೈನಿಂಗ್  ಕೊಟ್ಟು ಸೈನಿಕರನ್ನಾಗಿ ಮಾಡಿ ಮೊಟ್ಟ ಮೊದಲ ಬಾರಿಗೆ ಜೈ ಹಿಂದ್ಎಂಬ ವಾಕ್ಯವನ್ನು ಸೃಷ್ಟಿ ಮಾಡಿದ ಸುಭಾಷ್ ಚಂದ್ರ ಬೋಸ್, ಮತ್ತಿನಿತರ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ್ ಆಜಾದ್, ಮದನ್ ಲಾಲ್ ಧಿಂಗ್ರ ಇವರುಗಳನ್ನೂ ಮಹಾತ್ಮ ಎಂದು ಏಕೆ ಕರೆಯುತ್ತಿಲ್ಲ.
ಇಂದು ಗಾಂದೀಜಿಯ ಹೆಸರನ್ನು ಹೇಳಿಕೊಂಡು ಇಟಲಿಯ ಮಹಿಳೆಯೊಬ್ಬಳು ದೇಶವನ್ನು ಆಳುತ್ತಿದ್ದಾಳೆ ಜೊತೆಗೆ ಅವಳ ಮಗನೂ ಸಹ. ಬೇಸಿಕ್ ಇಂಗ್ಲಿಷ್ ಬರದ ಆತ ಇಂದು ರಾಜಕಾರಣಿಯಾಗಿದ್ದಾನೆ. ಆದರೆ ಗಾಂಧೀಜಿಯವರ ಎಲ್ಲಾ ಕೆಟ್ಟ ವಿಷಯಗಳನ್ನು ಅರಿತು ಗಾಂಧೀಜಿಯವರು ಭಾಷಣ ಕೊಡುವಾಗಲೇ ಜನರಿಗೆ ಕೂಗಿ ಕೂಗಿ ಹೇಳುತ್ತಿದ್ದ ಅವರ ಸ್ವಂತ ಮಗನಾದ ಹರಿಲಾಲ ಗಾಂಧಿಯನ್ನು ಏಕೆ ಕೆಡೆಗಾನಿಸಲಾಯಿತು?? ಆತ ಮೃತಪಟ್ಟಾಗ ಏಕೆ ಒಂದು ಸಣ್ಣ ಸಂತಾಪವನ್ನೂ ಸೂಚಿಸಲಿಲ್ಲ?? ಕಾಂಗ್ರೇಸಿಗರಿಗೆ ಅವರ ಸತ್ಯ ಬಲಯಾಗುವುದೆಂಬ ಭಯವೇ??  ಎಷ್ಟು ಜನರಿಗೆ ಇಂದು ಗಾಂಧೀಜಿಯ ಮಗ ಹರಿಲಾಲ ಗಾಂಧಿಯೆಂಬುದು ಗೊತ್ತಿದೆ? ಆತನ ಪುಸ್ತಕ ಓದಿ ನೋಡಿದರೆ ಕಣ್ನಲ್ಲಿ ನೀರು ಬರುತ್ತದೆ. ಹೀಗೆ ಗಾಂಧೀಜಿಯು ಒಬ್ಬ ಉತ್ತಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೇ ಹೊರತು ಅವರು ಮಹಾತ್ಮ ಎಂದು ಹೇಗೆ ವಾದಿಸುತ್ತೀರಿ?? ಮಹಿಳೆಯೊಬ್ಬಳು ಗಾಂಧಿಜಿಗೆ Official ಆಗಿ ಮಹಾತ್ಮ ಎಂದು ಹೆಸರು ನೀಡಲಾಗಿದೆಯೇ ಎಂದು ಕೇಳಿದಾಗ RTI ಮೂಲಕ ತಿಳಿದು ಬಂದ ಮಾಹಿತಿಯೆಂದರೆ ಗಾಂಧೀಜಿಗೆ ಯಾವ ಸರ್ಕಾರದವರೂ ಆತ ಮಹಾತ್ಮ ಎಂದು ಘೋಷಿಸಿಯೇ ಇಲ್ಲ. ಯಾರೋ ಒಬ್ಬ ಮಹಾತ್ಮ ಎಂದಿದ್ದಕ್ಕೆ ಅದು ಪ್ರಸಿದ್ಧವಾಗಿ ಎಲ್ಲರೂ ಮಹಾತ್ಮ ಎನ್ನುತ್ತಿದ್ದಾರೆ. ಸಂವಿಧಾನದ ಆರ್ಟಿಕಲ್ 19 ಮತ್ತು 21Liberty of an Individual ಪ್ರಕಾರ ನನ್ನ Opinion ಅನ್ನು ಹೇಳುವ ಹಕ್ಕಿದೆ, ಹಾಗಾಗಿ ಗಾಂಧೀಜಿಯವರೇ ಬರೆದುಕೊಂಡ ವಿಷಯಗಳನ್ನು ಓದಿದ ಮೇಲೆ ನನ್ನ ದೃಷ್ಟಿಕೋನದಲ್ಲಿ ಗಾಂಧೀಜಿ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಎಂಬುದಕ್ಕೆ ಅವರ ಮೇಲೆ ಅಪಾರ ಗೌರವವಿದೆ ಆದರೆ ಆತ ಮಹಾತ್ಮನೆಂದು ನಾನು ಒಪ್ಪಲಾರೆ.     

 


----------ಚಿರಂಜೀವಿ ಭಟ್                    email:  chirubhat007@gmail.com