Translate

Tuesday, 17 January 2012

ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ


ಅದೇನೂ ದಶಕಗಳ ಹಿಂದಿನ ಅನಾದಿಕಾಲವಲ್ಲ. ಹಾಗೋ ಹೀಗೋ ಎಂಟೋ ಒಂಭತ್ತೋ ವರ್ಷಗಳಾಗಿರಬಹುದು. ರೌಂಡ್ ಅಪ್ ಮಾಡಿ ಹತ್ತೇ ಎಂದಿಟ್ಟುಕೊಳ್ಳೋಣ. ನಾನಾಗ ಹೈಸ್ಕೂಲು ಹಂತದಲ್ಲಿದ್ದೆ. ಕ್ರಿಕೆಟ್ ಎಂದರೆ ತಲೆಯೇರಿದ ಭೂತದಂತಿರದಿದ್ದರೂ ಬಹು ಉತ್ಸಾಹದಿಂದ ನೋಡುತ್ತಿದ್ದಂತಹ ಸಮಯ ಅದಾಗಿತ್ತು. ಐರೋಪ್ಯ ಶೈಲಿಯ ಅಂಗ್ಲಭಾಷೆಯ ಕಾಮೆಂಟರಿ ಕನ್ನಡ ಮಾಧ್ಯಮದ ನನಗೆ ಆ ಸಮಯದಲ್ಲಿ ತೋಚದಾಗಿದ್ದರೂ ಆಟದ ಎಲ್ಲಾ ನಿಯಮಗಳು, ಕ್ರಿಕೆಟ್ ಪದಗುಚ್ಛಗಳು ನಾಲಗೆಯ ತುದಿಯಲ್ಲಿ ನಲಿದಾಡುತ್ತಿದ್ದವು. ಸಭ್ಯರ ಆಟ ಎಂಬ ಕಿರೀಟ ಹೊತ್ತು ಮೆರೆಯುತ್ತಿದ್ದ ಈ ಆಟ ಪ್ರತೀ ಗಲ್ಲಿಯ ಮಕ್ಕಳಿಗೂ, ಯುವಕರಿಗೂ, ಹಿರಿಯರಿಗೂ ಪ್ರಿಯವಾಗಿತ್ತು. ಈಗ ನಾನು ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ. ಈಗಲೂ ಕ್ರಿಕೆಟ್ ಎಲ್ಲರ ಬಾಯಲ್ಲೂ ಜಂಕ್ಫುಡ್ನಂತೆ ಹರಿದಾಡುತ್ತಿದೆ. ಹೊಸರೂಪಗಳನ್ನು ಮೈಗೂಡಿಸಿ ಮುಂದಿನ ವರ್ಷಗಳಲ್ಲಿ ಅವತರಿಸಿ ಬಂದ ಈ ಆಟದ ಜನಪ್ರಿಯತೆ ಕಿಂಚಿತ್ತೂ ಕುಗ್ಗಿಲ್ಲ. ಆದರೆ ಈಗ ಸಚಿನ್ ಎಂಬ ಹೆಸರು ಎಲ್ಲೋ ದೇವರಾಗಿ ಉಳಿದುಹೋಗಿದ್ದರೂ ಕ್ರಿಕೆಟ್ ಧರ್ಮವಾಗಿ ಉಳಿದಿಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು. ಕೆಲವೇ ವರ್ಷಗಳಲ್ಲಿ ಕಣ್ಣಮುಂದೆ ನಡೆದ ಇಂಥಾ ವೇಗದ ಬದಲಾವಣೆಗಳನ್ನು ಕಂಡರೆ ಇಂದಿಗೂ ಆಶ್ಚರ್ಯ, ಬರೆಯುವ ತವಕ.

ಸಭ್ಯರ ಆಟ ಎಂಬ ಹಣೆಪಟ್ಟಿ ಹೊತ್ತಿದ್ದರೂ ಕ್ರಿಕೆಟ್ ವಿವಾದಗಳಿಂದ ಮಾರುದೂರವೇನೂ ಇರಲಿಲ್ಲ. ಶೇನ್ ವಾರ್ನ್ ರ ಖಾಸಗಿ ಜೀವನ, ಆಸ್ಟ್ರೇಲಿಯನ್ನರ ಪುಂಡತನ, ಪಾಕಿಸ್ತಾನಿ ಆಟಗಾರರ ಅತಿರೇಕದ ವರ್ತನೆ, ಅಂಪೈರ್ಗಳ ವಿವಾದಾತ್ಮಕ ತೀರ್ಪುಗಳು ಹೀಗೆ ಒಂದಲ್ಲಾ ಒಂದು ವಿಷಯದಲ್ಲಿ ಕ್ರಿಕೆಟ್ ಎಂಬುದು ಮಾಧ್ಯಮಗಳಿಗೆ ಸದಾ ಆಹಾರವಾಗಿತ್ತು ಮತ್ತು ಈಗಲೂ ಆಹಾರವಾಗಿಯೇ ಮುಂದುವರಿದಿದೆ. ಈ ವರ್ಷವಂತೂ ಪಾಕ್ ಆಟಗಾರ ಶಾಹಿದ್ ಆಫ್ರಿದಿ ತನ್ನನ್ನು ಕ್ಯಾಮೆರಾಗಳು ಸೆರೆಹಿಡಿಯುತ್ತಿವೆಯೆಂಬ ಹೆದರಿಕೆಯೂ ಇಲ್ಲದೆ ಚೆಂಡನ್ನು ರಾಜಾರೋಷವಾಗಿ ಸೇಬುಹಣ್ಣಿನಂತೆ ಕಚ್ಚಿ ಚೆಂಡನ್ನು ವಿರೂಪಗೊಳಿಸಲು ಪ್ರಯತ್ನಿಸಿದರು. ಭಾರತ ತನ್ನ ಹಣದ ಬಲದಿಂದ ವಿಶ್ವಕ್ರಿಕೆಟ್ನ ಆಡಳಿತ ಯಂತ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡು ಐಸಿಸಿ ಎಂಬ ಉತ್ಸವಮೂರ್ತಿಯನ್ನು ತನಗೆ ಬೇಕಾದಂತೆ ಕುಣಿಸುತ್ತಿರುವುದು ಈಗ ಹಳೆಯ ಸಂಗತಿ. ನಿಜವಾಗಿ ಹೇಳಬೇಕಾದರೆ ಬರೋಬ್ಬರಿ ನೂರು ಕೋಟಿ ಅಭಿಮಾನಿಗಳನ್ನು ಹೊಂದಿರುವ ಭಾರತವೇ ಈ ಆಟಕ್ಕೆ ವಿಶ್ವಮಟ್ಟದಲ್ಲಿ ಸ್ಟಾರ್ಗಿರಿಯನ್ನು ತಂದುಕೊಟ್ಟಿತು. ಸಿನಿಮಾ ಮತ್ತು ಕಾರ್ಪೊರೇಟ್ ಎಂಬ ಮಸಾಲೆಗಳನ್ನು ಬೆರೆಸಿ ಕ್ರೀಡೆಯನ್ನು ವಾಣಿಜ್ಯೀಕರಣಗೊಳಿಸಿತು. ಜಗಮೋಹನ್ ದಾಲ್ಮಿಯಾ, ಶರದ್ ಪವಾರ್ ಮುಂತಾದ ಘಟಾನುಘಟಿಗಳು ಇದಕ್ಕೆ ಮುನ್ನುಡಿಯನ್ನು ಬರೆದರು ಎಂದರೂ ತಪ್ಪಾಗಲಾರದು. ಆದರೆ ಇದೇ ಭಾರತ ಕ್ರಿಕೆಟ್ನ ಐಪಿಎಲ್ ಆವೃತ್ತಿಯನ್ನೂ ಆರಂಭಿಸಿ ಕ್ರಿಕೆಟ್ ಅನ್ನು ಹರಾಜಿಗಿಟ್ಟಿತು. ಕಾಂಚಾಣದ ವಾಸನೆಯನ್ನು ತೋರಿಸಿ, ಆಟಗಾರರು ದೇಶ ಭಾಷೆಗಳ ಎಲ್ಲೆಯನ್ನು ಮೀರಿ ತರಕಾರಿಗಳಂತೆ ಬಿಕರಿಯಾದರು. ಎಲ್ಲೋ ನಷ್ಟದಲ್ಲಿ ಮುಳುಗಿಹೋಗಿದ್ದ ಲಲಿತ್ ಮೋದಿಯನ್ನೂ ಒಳಗೊಂಡು ಆಟಗಾರರೂ, ಉದ್ಯಮಿಗಳೂ, ಭೂಗತಲೋಕಕ್ಕೆ ಆಗತಾನೇ ಕಾಲಿರಿಸಿದವರೂ, ಹೀಗೆ ಎಲ್ಲರೂ ರಾತ್ರೋರಾತ್ರಿ ಶ್ರೀಮಂತರಾದರು. ಯಾವುದೇ ಕ್ರೀಡೆಯಾಗಲಿ ಇಂಥಾ ವೇಗದಲ್ಲಿ ಈ ಮಟ್ಟಕ್ಕೆ ತಲುಪಿದ ಜಾಗತಿಕ ಉದಾಹರಣೆಯಿರಲಿಕ್ಕಿಲ್ಲ. ಕ್ರಿಕೆಟ್ನ ಮಟ್ಟಿಗೆ ಈ ಬೆಳವಣಿಗೆ ಹಿತಕಾರಿಯಾದುದಲ್ಲ ಮತ್ತು ಆತಂಕಕಾರಿ ವಿಷಯವೆಂದರೆ ಇದರಿಂದಾಗಿ ಈಗ ಕ್ರಿಕೆಟ್, ಕ್ರಿಕೆಟ್ ಆಗಿ ಉಳಿದಿಲ್ಲ.

ಕೆಲವು ವರ್ಷಗಳ ಹಿಂದೆ ಹ್ಯಾನ್ಸಿ ಕ್ರೋನಿಯೆ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದೊಡನೆಯೇ ಇಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಗುಮಾನಿ ಹರಡಲು ಆರಂಭವಾಗಿತ್ತು. ಅದರಲ್ಲೂ ತಪ್ಪೊಪ್ಪಿಕೊಂಡ ಕೆಲಸಮಯದ ನಂತರ ಆದ ಕ್ರೋನಿಯೆ ದುರಂತ ಮರಣ, ಕಪಿಲ್ ದೇವ್ ಕಣ್ಣೀರು, ಜಡೇಜಾ ಅಮಾನತು ಎಲ್ಲಾ ಕ್ರಿಕೆಟ್ ಜಗತ್ತಿನಲ್ಲಿ ತೀವ್ರ ಸಂಚಲನವನ್ನು ಮೂಡಿಸಿದವು. ಮ್ಯಾಚ್ ಫಿಕ್ಸಿಂಗ್ ಪ್ರಕರಣದಿಂದ ಕ್ರಿಕೆಟ್ ತನ್ನ ಅಭಿಮಾನಿಗಳ ಒಂದು ಬಳಗವನ್ನೇ ಕಳೆದುಕೊಂಡಿತು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಕೆಲ ವರ್ಷಗಳ ನಂತರ ನಡೆದ ಬಾಬ್ ವೂಲ್ಮರ್ ಸಂಶಯಾಸ್ಪದ ಕೊಲೆ ಕೊನೆಗೂ ತನಿಖೆಯಲ್ಲಿ ಯಶಸ್ಸಿನ ದಡವನ್ನು ಮುಟ್ಟುವಲ್ಲಿ ವಿಫಲವಾಯಿತು. ಆದರೆ ಈಗ ಇವೆಲ್ಲವನ್ನೂ ಮೀರಿಸಿ ಮೋದಿಯ ಮೋಡಿ "ಐಪಿಎಲ್" ಕ್ರಿಕೆಟ್ನ ಪ್ರತಿಷ್ಠೆಯನ್ನು ಗಾಳಿಗೆ ತೂರಿಹಾಕಿದೆ. ಕ್ರೀಡೆಯೊಂದು ಜೂಜಿನ ಅಡ್ಡೆಯಾಗಿ ಬೆಳೆಯಲು ಇದೊಂದೇ ಕಾರಣವಾಯಿತು. ಪ್ರಾಯಶಃ ಶಶಿ ತರೂರ್ ಎಂಬ ಪ್ರತಿಭಾವಂತ ಯುವ ನಾಯಕ ಈ ಕೂಪದಲ್ಲಿ ಸಿಕ್ಕಿಹಾಕಿಕೊಳ್ಳದೇ ಹೋಗಿರುತ್ತಿದ್ದಲ್ಲಿ ಸರಕಾರ ಕೂಡ ಇದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ರಾಹುಲ್ ಗಾಂಧಿಯನ್ನು ಹೊರತುಪಡಿಸಿದರೆ ತರೂರ್ ಭವಿಷ್ಯದ ಕಾಂಗ್ರೆಸ್ ಯುವನಾಯಕರೆಂದೇ ಬಿಂಬಿತರಾಗಿದ್ದರು. ಮಾಧ್ಯಮದಲ್ಲಿ ಅಧಿಕಪ್ರಸಂಗಿತನದ ಹೇಳಿಕೆಗಳನ್ನು ಆಗಾಗ್ಗೆ ಕೊಡುತ್ತಾ ಯುಪಿಎ ಬಳಗಕ್ಕೆ ಚಿಂತೆಗೀಡುಮಾಡಿದ್ದ ಇವರಿಗೆ ಐಪಿಎಲ್ ತಲೆದಂಡ ಕೊಡುವಂತೆ ಮಾಡಿತು. ಶಶಿ ತರೂರ್ ವಿಶ್ವ ಸಂಸ್ಥೆಯ ಉಪಮಹಾಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ಅನುಭವಿ. ಮಹಾಕಾರ್ಯದರ್ಶಿ ಹುದ್ದೆಯ ಚುನಾವಣೆಗೆ ನಿಂತು ಅವರು ಪರಾಭವ ಹೊಂದಿದ್ದರು. ತನ್ನ ಪಂಚತಾರಾ ಜೀವನಶೈಲಿಯ ಜೊತೆಗೆ ಚಿಂತಕರೂ, ಲೇಖಕರೂ, ಪ್ರತಿಭಾವಂತ ವಾಗ್ಮಿಯೂ ಆಗಿದ್ದ ತರೂರ್ ತಮ್ಮ ಹುದ್ದೆಯೊಂದಿಗೆ ಕೊಚ್ಚಿ ತಂಡದ ಮಾಲಕತ್ವದ ವಿಚಾರದಲ್ಲಿ ತನ್ನ ವಿವಾದಾತ್ಮಕ ಒಡನಾಡಿ ಸುನಂದಾ ಪುಷ್ಕರ್ಗೆ ಬಿಟ್ಟಿ ಲಾಭವನ್ನು ಕೊಡಿಸಿ ತನ್ನ ಇಮೇಜ್ ಅನ್ನೂ ಕಳೆದುಕೊಂಡರು. ಹಲವು ಸಾವಿರ ಕೋಟಿಗೂ ಮೀರಿದ ಈ ಹಣದ ಹೊಳೆಯ ಮೂಲ ಹುಡುಕುವುದು ತರೂರ್ ಸಿಕ್ಕಿಬೀಳುವವರೆಗೂ ಕೇಂದ್ರ ಸರಕಾರಕ್ಕೆ ಬೇಡವಾಗಿತ್ತು. ಈಗ ತರೂರ್ ಅನ್ನು ಕಳೆದುಕೊಂಡ ಒತ್ತಡದ ಸರಕಾರ ಜೊತೆಗೇ ಸಿಬಿಐ ಅನ್ನು ಮೋದಿ ಹಿಂದೆ ಛೂಬಿಟ್ಟಿದೆ. ಸೋನಿ ಎಂಟರ್ಟೈನ್ಮೆಂಟ್ ಪ್ರಸಾರಕ್ಕಾಗಿ ಪಡೆದುಕೊಂಡ ಮೊತ್ತ, ಪ್ರತೀ ತಂಡದ ಮಾಲೀಕರು ಗಿಟ್ಟಿಸಿದ ಹಣ, ಲೇಟ್ನೈಟ್ ಪಾರ್ಟಿ ಮುಂತಾದವುಗಳಿಗೆ ಪೋಲಾದ ಹಣ ಮುಂದೆ ದೆಹಲಿಯಲ್ಲಿ ನಡೆಯಲಿರುವ ಕಾಮನ್ ವೆಲ್ತ್ ಕ್ರೀಡಾಕೂಟದ ಅಂದಾಜು ವೆಚ್ಚದ ಹತ್ತುಪಟ್ಟರಷ್ಟಿವೆ ಮತ್ತು ಇದರಿಂದ ಇಲ್ಲಿ ಹರಿದ ಕಪ್ಪು ಹಣದ ಪ್ರಮಾಣವನ್ನು ಊಹಿಸಬಹುದು. ವಿಪರ್ಯಾಸವೆಂದರೆ ಇಷ್ಟಾಗಿಯೂ ಐಪಿಎಲ್ ನಾಲ್ಕನೇ ಆವೃತ್ತಿಗೆ ತಂಡಗಳನ್ನು ಖರೀದಿಸಲು ಕಸರತ್ತು ಶುರುವಾಗಿದೆ ಮತ್ತು ಸರಕಾರವು ಕಾಟಾಚಾರದ ಒಂದು ತನಿಖಾ ಮಂಡಳಿಯನ್ನು ನೇಮಿಸಿ ತನ್ನ ಕೈತೊಳೆದುಕೊಂಡಿದೆ.

ಕ್ರಿಕೆಟ್ನ ಗಾಂಭೀರ್ಯತೆ ಕುಸಿಯುವುದಕ್ಕೆ ಬಿಡುವಿಲ್ಲದ ವೇಳಾಪಟ್ಟಿಯೂ ತಕ್ಕಮಟ್ಟಿಗೆ ಕಾರಣವಾಗಿದೆ. ಈ ವರ್ಷದ ಕ್ರಿಕೆಟ್ ವೇಳಾಪಟ್ಟಿಯನ್ನೇ ನೋಡುವುದಾದರೆ ಐಪಿಎಲ್ ಮುಗಿದು ಉಸಿರು ಬಿಡುವಷ್ಟರ ಮೊದಲೇ ಐಸಿಸಿ ಟ್ವೆಂಟಿ-ಟ್ವೆಂಟಿ ವಿಶ್ವಕಪ್ ಆರಂಭವಾಯಿತು. ಇದಾದ ಸ್ವಲ್ಪ ದಿನಗಳಲ್ಲೇ ಭಾರತ-ಜಿಂಬಾಬ್ವ್ವೆ-ಶ್ರೀಲಂಕಾ ತ್ರಿಕೋನ ಸರಣಿ ಆರಂಭವಾಗಿದೆ. ಈ ಸರಣಿಯ ಬೆನ್ನಿಗೇ ಏಷ್ಯಾಕಪ್, ಹೊನಲು ಬೆಳಕಿನ ಟೆಸ್ಟ್ ಆಟದ ಪ್ರಯೋಗ ಮುಂತಾದವುಗಳು ಕೂಡ ಎದುರು ನೋಡುತ್ತಿವೆ. ಆಟಗಾರರೂ ಇವೆಲ್ಲದರಿಂದ ತಮ್ಮ ಫಾರ್ಮ್ ನ್ನು ಕಳೆದುಕೊಂಡು ತಮ್ಮ ದೇಸಿ ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನವನ್ನು ತೋರಿ ಮಂಡಳಿಯ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಐಸಿಸಿ ಟ್ವೆಂಟಿ-ಟ್ವೆಂಟಿ ವಿಶ್ವಕಪ್ನಲ್ಲಿ ಮೊದಲ ಸುತ್ತಿನಲ್ಲೇ ಹೀನಾಯ ಸೋಲುಂಡು ಹೊರನಡೆದ ಬಳಿಕ ನಾಯಕ ಧೋನಿ ಪತ್ರಿಕಾಗೋಷ್ಠಿಯಲ್ಲಿ ಲೇಟ್ನೈಟ್ ಪಾರ್ಟಿಗಳಿಂದ ಏಕಾಗ್ರತೆಗೆ ಭಂಗವಾಯಿತು ಎಂಬ ಬಾಲಿಶ ಹೇಳಿಕೆಯನ್ನು ನೀಡಿ ಅನಗತ್ಯ ವಿವಾದಕ್ಕೆ ಗುರಿಯಾದರು. ಐಪಿಎಲ್ ಲೇಟ್ನೈಟ್ ಪಾರ್ಟಿ ಸಂಯೋಜಕರು ಹೇಳುವ ಪ್ರಕಾರ ಈ ಮನರಂಜನೆಯ ಹೆಣ್ಣು-ಹೆಂಡದ ಪಾರ್ಟಿಗಳನ್ನು ಎಲ್ಲಾ ತಂಡದ ಒಪ್ಪಿಗೆಯ ಮೇರೆಗೇ ಆಯೋಜಿಸಲಾಗುತ್ತದೆ ಮತ್ತು ಆಯೋಜಿಸಿದ ಎಲ್ಲಾ ಪಾರ್ಟಿಗಳಲ್ಲಿ ಆಟಗಾರರೆಲ್ಲರೂ ಕಡ್ಡಾಯವಾಗಿ ಭಾಗವಹಿಸಲೇಬೇಕೆಂಬ ಯಾವ ನಿಯಮವೂ ಇಲ್ಲ. ಭಾರತದ ಆರು ಆಟಗಾರರು ಈಗಾಗಲೇ ಪಬ್ಬುಗಳಲ್ಲಿ ತಮ್ಮ ಪರಾಕ್ರಮವನ್ನು ತೋರಿ ತಾವೂ ಕಾಂಗರೂ ಪಡೆಗಿಂತ ಪುಂಡತನದಲ್ಲಿ ಕಮ್ಮಿಯೇನಿಲ್ಲ ಎಂಬುದನ್ನು ತೋರಿಸಿಕೊಟ್ಟರು. ಈ ಆಟಗಾರರೆಲ್ಲರೂ ನಿಷೇಧ ಬೆದರಿಕೆಯ ನಂತರ ಕೊನೆಯ ಅಸ್ತ್ರವಾಗಿ ಮಂಡಳಿಯ ಬಳಿ ಕ್ಷಮೆಯಾಚಿಸಿದರೇ ಹೊರತು ಇದರಲ್ಲಿ ಸಮರ್ಥಿಸಿಕೊಳ್ಳುವಂಥದ್ದೇನೂ ಇಲ್ಲ.

ಭೂರಿಭೋಜನವನ್ನು ದಿನವೂ ಬಡಿಸಿದರೆ ತಿಂದು ತಿಂದು ನಾಲಗೆಯು ರುಚಿ ಕಳೆದುಕೊಂಡು ಮೃಷ್ಟಾನ್ನವೂ ರುಚಿಸದಂತೆ ವರ್ಷವಿಡೀ ನಡೆಯವ ಸರಣಿ ಪಂದ್ಯಗಳು, ವಾಣಿಜ್ಯ ಕೇಂದ್ರಿತ ಆವೃತ್ತಿಗಳು ಹಿಂದಿನ ದಿನಗಳಲ್ಲಿದ್ದ ನೈಜ ಆಟವನ್ನು ಸವಿಯುವ ಅಭಿರುಚಿಯನ್ನು ದೂರಮಾಡಿವೆ. ಕ್ರಿಕೆಟ್ನ ಶಾಸ್ತ್ರೀಯ ಸೊಗಡಾದ ಟೆಸ್ಟ್ ಮ್ಯಾಚ್ಗಳು ಮಿನಿ-ಮಿನಿ ಗ್ಲ್ಯಾಮರ್ ಕ್ರಿಕೆಟ್ಗಳ ಅಬ್ಬರದಲ್ಲಿ ಅನಾಥವಾಗಿವೆ. ಆಟದ ಅವಧಿ ದಿನೇ ದಿನೇ ಸಣ್ಣದಾದಷ್ಟು ಒಳಗಿನ ಕಪ್ಪುಹಣ, ಮೋಸದಾಟದ ದಂಧೆಗಳು ರಾಕ್ಷಸಗಾತ್ರ ಪಡೆದುಕೊಳ್ಳುತ್ತಿವೆ. ಸರಕಾರ ಇನ್ನಾದರೂ ಎಚ್ಚೆತ್ತು ಈ ಐಪಿಎಲ್ ಎಂಬ ರಾಯಲ್ ಹೆಸರನ್ನು ಹೊತ್ತು ಹಾಡಹಗಲೇ ಕಪ್ಪುಹಣವನ್ನು ಮಾರುಕಟ್ಟೆಯಲ್ಲಿ ಹರಿದಾಡಿಸುವ ಆವೃತ್ತಿಗಳನ್ನು ತಡೆಹಿಡಿಯಬೇಕಾಗಿದೆ. ಇದಕ್ಕೆ ತರೂರ್ರಂತಹ ಇನ್ನೊಬ್ಬ ಆಲ್ರೌಂಡರ್ನ ವಿಕೆಟ್ ಪತನವಾದರೂ ಚಿಂತೆಯಿಲ್ಲ. ರಾಜಕಾರಣಿ ಮುಂದಿನ ಚುನಾವಣೆಯ ಬಗ್ಗೆ ಮಾತ್ರ ಚಿಂತಿಸುತ್ತಾನಂತೆ ಆದರೆ ಒಬ್ಬ ಮುತ್ಸದ್ದಿ ಮುಂದಿನ ಜನಾಂಗದ ಬಗ್ಗೆಯೇ ಸದಾ ಚಿಂತಿಸುತ್ತಾನಂತೆ. ಯುಪಿಎಯ ನಾಯಕರುಗಳು ಇವೆರಡರಲ್ಲಿ ಯಾವ ವಿಧವನ್ನು ಪ್ರತಿನಿಧಿಸುತ್ತಾರೆ ಎಂಬುದನ್ನು ಇನ್ನು ಕಾಲವೇ ಹೇಳಬೇಕು....!!!!!!

Monday, 16 January 2012

ಅಮ್ಮ ಹೇಳಿದ ಎಂಟು ಸುಳ್ಳುಗಳು




ಅಮ್ಮ ಹೇಳಿದ ಎ೦ಟು ಸುಳ್ಳುಗಳು

ತುಂಬಾ ದೂರ ಅಲ್ಲ ಸಾರ್, ಇಲ್ಲೇ, ಬೆಂಗಳೂರು ತುಮಕೂರಿನ ಮಧ್ಯೆ ನೆಲಮಂಗಲ ಇದೆಯಲ್ಲ? ಅದಕ್ಕೆ ಅಂಟಿಕೊಂಡ ಹಾಗೇ ಇರುವ ಪುಟ್ಟ ಗ್ರಾಮ ನಮ್ದು. ಹಳ್ಳಿ ಅಂದ್ಮೇಲೆ ಅಲ್ಲಿನ ಬದುಕು ಹೇಗಿರತ್ತೆ ಅಂತ ನಿಮಗೇನೂ ವಿವರಿಸಬೇಕಿಲ್ಲ ಅಲ್ವ? ನಮಗಂತೂ ಬಡತನವೇ ಬದುಕಾಗಿತ್ತು. ಕೂಲಿ ಕೆಲಸ ಮಾಡ್ತಿದ್ದ ಅಪ್ಪನಿಗೆ ಒಂದು ನಿಶ್ಚಿತ ಆದಾಯ ಅಂತ ಇರಲೇ ಇಲ್ಲ. ಕೆಲಸಕ್ಕೆ ಕರೀತಿದ್ದ ಸಾಹುಕಾರರು ನಾಲ್ಕು ಕಾಸು ಕೊಡ್ತಿದ್ರು ನಿಜ. ಆದ್ರೆ ಅದಕ್ಕೆ ನಾಲ್ಕು ಜನರ ಕೆಲಸ ಮಾಡಿಸಿಕೊಳ್ತಿದ್ರು. ಹಗಲಿಂದ ದುಡಿದು ದುಡಿದು ಸುಸ್ತಾಗ್ತಿತ್ತು ನೋಡಿ, ಅದಕ್ಕೇ ಅಪ್ಪ ಕುಡಿತ ಕಲಿತ. ಸಂಜೆ ಮನೆಗೆ ಬಂದವನು ಅಮ್ಮನಿಗೆ ಒಂದಿಷ್ಟು ದುಡ್ಡು ಕೊಟ್ಟು, ಮಕ್ಕಳನ್ನೆಲ್ಲ ಕುಶಾಲಿನಿಂದ ಮಾತಾಡಿಸಿ, ಸೀದಾ ಹೆಂಡದಂಗಡಿಗೆ ಹೋಗಿಬಿಡುತ್ತಿದ್ದ.

ಇಂಥ ಬದುಕಿನ ಹಲಗೆಯ ಮೇಲೆ, ಸದಾ ಅಣಕಿಸುತ್ತಿದ್ದ ಕಡು ಬಡತನದ ಮಧ್ಯೆ, ಬಂಧುಗಳ ತಾತ್ಸಾರದ ನಡುವೆ, ನೆರೆಹೊರೆಯವರ ಸಣ್ಣ ಮಾತುಗಳ ನುಂಗಿ ಅಮ್ಮ ನಮ್ಮನ್ನು ಅದೆಷ್ಟು ಚೆನ್ನಾಗಿ ಬೆಳೆಸಿದಳು ಗೊತ್ತಾ ಸಾರ್? ಆದರೆ ಹಾಗೆ ಬೆಳೆಸುವ ಸಂದರ್ಭದಲ್ಲಿ ಅಮ್ಮ ಸಂದರ್ಭಕ್ಕೆ ತಕ್ಕ ಹಾಗೆ ಸುಳ್ಳು ಹೇಳಿಕೊಂಡೇ ಬಂದಳು. ಆ ಸುಳ್ಳುಗಳ ಹಿಂದೆ ಸಂಕಟವಿತ್ತು. ಹಸಿವಿತ್ತು. ಕಣ್ಣೀರಿತ್ತು. ನಿಟ್ಟುಸಿರಿತ್ತು. ಈ ಬದುಕಿನ ಬಗ್ಗೆ ಬಡತನದ ಬಗ್ಗೆ; ಸಿಡಿಮಿಡಿಯಿತ್ತು. ಏನೂ ಮಾಡಲಾಗದ ತನ್ನ ಅಸಹಾಯಕತೆಯ ಬಗ್ಗೆ ವಿಷಾದವಿತ್ತು. ಮಕ್ಕಳು ಚೆನ್ನಾಗಿರಲಿ ಎಂಬ ಒಂದೇ ಕಾರಣಕ್ಕಾಗಿ ಅಮ್ಮ ಮೇಲಿಂದ ಮೇಲೆ ಒಂದೊಂದೇ ಸುಳ್ಳು ಹೇಳ್ತಿದ್ಲು. ಅದೆಲ್ಲ ಸುಳ್ಳು ಅಂತ ನಮಗೆ ಗೊತ್ತಾಗುವ ವೇಳೆಗೆ ತುಂಬ ತಡವಾಗಿತ್ತು. ಈಗ, ಅಮ್ಮ ಹೇಳಿದ್ದ ಸುಳ್ಳುಗಳನ್ನೆಲ್ಲ ಸಂದರ್ಭ ಸಹಿತ ನಿಮ್ಮೊಂದಿಗೆ ಹಂಚ್ಕೋಬೇಕು ಅನ್ನಿಸ್ತಿದೆ ಸಾರ್.

***
*ನಾನು ಆಗಷ್ಟೇ ಒಂದನೇ ತರಗತಿಗೆ ಸೇರಿದ್ದೆ. ಯಥಾಪ್ರಕಾರ ಮನೇಲಿ ಮಧಾಹ್ನದ ಬಡತನವಿತ್ತು. ಆದರೆ ಅದು ನಮಗೆ ಗೊತ್ತೇ ಆಗದಂತೆ ಅಮ್ಮ ಎಚ್ಚರ ವಹಿಸಿದ್ದಳು. ಬೆಳಗ್ಗೆ ಹೊತ್ತು ತಿಂಡಿ ತಿಂದು ನಮಗೆ ಅಭ್ಯಾಸವೇ ಇರಲಿಲ್ಲ. ಬೆಳಗ್ಗೆ ಬೆಳಗ್ಗೇನೇ ಅಮ್ಮ ಅಕ್ಕಿಯದೋ, ರಾಗೀದೋ ಗಂಜಿ ಮಾಡ್ತಿದ್ದಳು. ಅಪ್ಪ ಲಗುಬಗೆಯಿಂದ ಗಂಜಿ ಕುಡಿದು ಹೋದ ಮೇಲೆ ಉಳಿದಿದ್ದರಲ್ಲಿ ನಾನು ಅಮ್ಮ ಪಾಲು ಮಾಡ್ಕೋತಾ ಇದ್ವಿ. ತುಂಬಾ ಸಂದರ್ಭಗಳಲ್ಲಿ ಏನಾಗ್ತಾ ಇತ್ತು ಅಂದ್ರೆ, ಅಮ್ಮ ತಟ್ಟೆಗೆ ಗಂಜಿ ಹಾಕಿದ ತಕ್ಷಣ ನಾನು ಗಟಗಟನೆ ಕುಡಿದುಬಿಡ್ತಿದ್ದೆ. ಎರಡೇ ನಿಮಿಷದಲ್ಲಿ ನನ್ನ ತಟ್ಟೆ ಖಾಲಿಯಾದದ್ದು ಕಂಡು ಅಮ್ಮ, ಒಮ್ಮೆ ಮೆಲ್ಲನೆ ನಕ್ಕು ತನ್ನ ತಟ್ಟೇಲಿ ಇದ್ದುದನ್ನೂ ನನಗೇ ಕೊಡ್ತಿದ್ಲು.

ನಾನು ಅಚ್ಚರಿಯಿಂದಅಯ್ಯೋ ಯಾಕಮ್ಮಾ ಎಂಬಂತೆ ನೋಡಿದರೆ ಕಂದಾ, ನನಗೆ ಈಗ ಹಸಿವಾಗ್ತಾನೇ ಇಲ್ಲ ನೋಡಪ್ಪ. ನೀನು ಸ್ಕೂಲಿಗೆ ಹೋಗ್ಬೇಕಲ್ಲ? ಸುಸ್ತಾಗುತ್ತೆ. ತಗೋ, ಹೊಟ್ಟೆ ತುಂಬ ಕುಡಿ. ಹೇಗಿದ್ರೂ ನಂಗೆ ಹಸಿವಾಗ್ತಾ ಇಲ್ಲವಲ್ಲ. ಅನ್ನುತ್ತಿದ್ದಳು. ಅದು ಅಮ್ಮ ಹೇಳಿದ ಮೊದಲ ಸುಳ್ಳು.

*ಬಡವರಿಗೆ ಭಯ ಭಕ್ತಿ ಜಾಸ್ತಿ ಅಂತಾರೆ. ನಮ್ಮ ಮಟ್ಟಿಗೂ ಈ ಮಾತು ನಿಜವಾಗಿತ್ತು. ಅದೇ ಕಾರಣದಿಂದ ಹಬ್ಬ ಹರಿದಿನಗಳೂ ಜಾಸ್ತಿ ಇದ್ದವು. ಪ್ರತಿ ಹಬ್ಬಕ್ಕೂ ಬೆಲ್ಲದ ಪಾಯಸವೇ ಸ್ಪೆಷಲ್ಲು! ಆಗಲೂ ಅಷ್ಟೇ ಸಾರ್. ಅಮ್ಮ ಒಂದು ಪಾತ್ರೇಲಿ ಪಾಯಸ ಮಾಡಿರ್ತಾ ಇದ್ದಳು. ಹಬ್ಬದ ದಿನ ಮಾತ್ರ ಗಂಜಿಯ ಬದಲಿಗೆ ಅನ್ನ ಮಾಡಿರ್ತಾ ಇದ್ಳು. ನಾನು ಆಸೆಯಿಂದ ತಟ್ಟೆ ತುಂಬಾ ಅನ್ನ ಹಾಕಿಸ್ಕೊಂಡು ಗಬಗಬಾಂತ ತಿಂದು ಮುಗಿಸ್ತಿದ್ದೆ. ಆಮೇಲೆ ಒಂದು ರೌಂಡ್ ಪಾಯಸ ಕುಡಿದು, ಮತ್ತೆ ಆ ಪಾತ್ರೆಯ ಕಡೆಗೇ ಆಸೆಯಿಂದ ನೋಡ್ತಿದ್ದೆ ನೋಡಿ, ಆಗಲೇ ಅಮ್ಮ ಅಷ್ಟೂ ಪಾಯಸವನ್ನು ನಂಗೆ ಕೊಟ್ಟು ಕಂದಾ, ಎಲ್ಲವನ್ನೂ ಕುಡ್ಕೋ. ನನಗೆ ವಿಪರೀತ ಹಲ್ಲು ನೋವು ಕಣಪ್ಪಾ. ಜತೆಗೆ ಸಿಹಿ ಅಂದ್ರೆ ನಂಗೆ ಇಷ್ಟವಿಲ್ಲಅಂದುಬಿಡುತ್ತಿದ್ದಳು. ನಂತರ ಸರಸರನೆ ಅಡುಗೆ ಮನೆಗೆ ಹೋಗಿ, ಒಂದು ಚೊಂಬಿನ ತುಂಬಾ ನೀರು ಕುಡಿದು- ಹೌದಪ್ಪಾ, ನನಗೆ ಸಿಹಿ ಇಷ್ಟವಿಲ್ಲಅಂತಿದ್ಲು. ಅದು ಅಮ್ಮ ಹೇಳಿದ ಎರಡನೇ ಸುಳ್ಳು!  

*ಆಗಷ್ಟೇ ನಾನು ಐದನೇ ತರಗತಿಗೆ ಬಂದಿದ್ದೆ. ಸ್ಕೂಲಿಂದ ಟೂರ್ ಹೊರಟಿದ್ರು. ಒಬ್ಬರಿಗೆ 300 ರೂ. ಶುಲ್ಕ. ಎಲ್ಲ ವಿಷಯ ಹೇಳಿ ಅಪ್ಪಾ, ಕಾಸು ಕೊಡಪ್ಪಾಅಂದೆ. ಮಗಾ, ಇಡೀ ವರ್ಷ ದುಡಿದ್ರೂ ನನಗೆ ಅಷ್ಟು ದುಡ್ಡು ಸಿಗಲ್ಲ. ಬಡವಾ ನೀ ಮಡಗಿದಂಗಿರು ಅಂದಿದಾರೆ ದೊಡ್ಡವರು. ಹಾಗೇ ಇರು. ಟೂರೂ ಬೇಡ, ಗೀರೂ ಬೇಡಅಂದೇಬಿಟ್ಟ ಅಪ್ಪ. ಅವತ್ತಿಂದಲೇ ಹಗಲಿಡೀ ಕೆಲಸ ಮುಗಿಸಿ, ರಾತ್ರಿ ಅದೆಷ್ಟೋ ಹೊತ್ತಿನವರೆಗೂ ಬೀಡಿ ಕಟ್ತಾ ಇರ್‍ತಿದ್ಲು ಅಮ್ಮ. ಯಾಕಮ್ಮಾ ಹೀಗೆ ಅಂದ್ರೆ ನಂಗೆ ರಾತ್ರಿ ಹೊತ್ತು ನಿದ್ರೇನೇ ಬರ್‍ತಿಲ್ಲ ಮಗನೇಅಂದು ಕೆಲಸ ಮುಂದುವರಿಸ್ತಾ ಇದ್ಳು. ಕಡೆಗೊಂದು ದಿನ ಮುದುರಿ ಮುದುರಿ ಮುದುರಿಕೊಂಡಿದ್ದ ನೋಟುಗಳನ್ನೆಲ್ಲ ಕೊಟ್ಟು ಟೂರ್‌ಗೆ ಹೋಗಿದ್ದು ಬಾಪ್ಪಅಂದಳು. ಅದು ಸಾಲ ಮಾಡಿದ ಹಣ ಎದು ನನಗೆ ಗೊತ್ತಾಗುವ ವೇಳೆಗೆ ಅಮ್ಮ ಮತ್ತೆ ಬೀಡಿ ಕಟ್ಟಳು ಕುಳಿತಾಗಿತ್ತು. ಹಿಂದೆಯೇ ಅಯ್ಯೋ ನಂಗೆ ನಿದ್ರೇನೇ ಬರ್‍ತಿಲ್ಲಎಂಬ ಅದೇ ಹಳೆಯ ಮಾತು ಬೇರೆ. ಹೌದು. ಅದು ಅಮ್ಮ ಹೇಳಿದ ಮೂರನೇ ಸುಳ್ಳು.

*ಏಳನೇ ತರಗತಿಗೆ ಬರುವ ವೇಳೆಗೆ ನನಗೆ ಸ್ಕಾಲರ್‌ಷಿಪ್ ಬಂತು. ಭರ್ತಿ ನೂರು ರೂಪಾಯಿ. ಅದರಲ್ಲಿ ಅಮ್ಮನಿಗೆ ಒಂದು ಹೊಸ ಸೀರೆ ತೆಗೆದುಕೊಡೋಣ ಅಂತ ಆಸೆಯಿತ್ತು. ದುಡ್ಡನ್ನು ಅಮ್ಮನಿಗೆ ಕೊಟ್ಟು, ‘ಕೆಂಪು ಕಲರ್ದು ಒಂದು ಸೀರೆ ತಗೋಮ್ಮ. ಅದರಲ್ಲಿ ನೀನು ಚೆಂದ ಕಾಣ್ತೀಯಅಂದೆ.ಅಷ್ಟಕ್ಕೇ ನನ್ನನ್ನು ಬಾಚಿ ತಪ್ಪಿಕೊಂಡು ಹಣೆಗೆ ಮುತ್ತಿಟ್ಟು, ನಿಂತಲ್ಲೇ ಬಿಕ್ಕಳಿಸಿದಳು ಅಮ್ಮ. ನಂತರ, ಅವತ್ತೇ ಸಂತೆಗೆ ಹೋಗಿ ಅಪ್ಪನಿಗೂ ನನಗೂ ಹೊಸ ಬಟ್ಟೆ ತಂದಳು. ನಿನಗೆಅಂದಿದ್ದಕ್ಕೆ ನನಗ್ಯಾಕಪ್ಪ ಬಟ್ಟೆ? ನನಗೆ ಅಂಥ ಆಸೆಯೇನೂ ಇಲ್ಲ ಎಂದು ತೇಲಿಸಿ ಮಾತಾಡಿದಳು. ಅದು ಅಮ್ಮ ಹೇಳಿದ ನಾಲ್ಕನೇ ಸುಳ್ಳು!

*ಕೆಲಸ ಮತ್ತು ಕುಡಿತ ಎರಡೂ ವಿಪರೀತ ಇತ್ತಲ್ಲ, ಅದೇ ಕಾರಣದಿಂದ ಅಪ್ಪ ಅದೊಂದು ದಿನ ದಿಢೀರ್ ಸತ್ತು ಹೋದ. ಆಗ ಅಮ್ಮನಿಗೆ ಬರೀ 32 ವರ್ಷ! ಸಂಸಾರದ ದೊಡ್ಡ ಹೊರೆ ಅಮ್ಮನ ಹೆಗಲಿಗೆ ಬಿತ್ತು. ಬಡತನದ ಮಧ್ಯೆ, ಹಸಿವಿನ ಮಧ್ಯೆ, ಹೋರಾಟದ ಮಧ್ಯೆಯೇ ಬದುಕಿದೆವಲ್ಲ, ಹಾಗಾಗಿ ಅಮ್ಮನಿಗೆ ದಾಂಪತ್ಯ ಸುಖ ಅಂದರೆ ಏನೆಂದೇ ಗೊತ್ತಾಗಿರಲಿಲ್ಲ. ಅದನ್ನೇ ಪಾಯಿಂಟ್ ಎಂದಿಟ್ಟುಕೊಂಡ ಬಂಧುಗಳು- ಇನ್ನೊಂದು ಮದುವೆ ಮಾಡ್ಕೊಳ್ಳೇ. ನಿಂಗಿನ್ನೂ ಚಿಕ್ಕ ವಯಸ್ಸು. ಗಂಡಿನ ಸಾಂಗತ್ಯ ಬಯಸುವ ವಯಸ್ಸು ಅದುಎಂದೆಲ್ಲಾ ಒತ್ತಾಯಿಸಿದರು.ಇಲ್ಲ. ಇಲ್ಲ. ನನ್ನೆದೆಯಲ್ಲಿ ಈಗ ಪ್ರೀತಿ ಪ್ರೇಮ, ಪ್ರಣಯ ಎಂಬಂಥ ಸೆಂಟಿಮೆಂಟಿಗೆ ಜಾಗವೇ ಇಲ್ಲಅಂದು ದೃಢವಾಗಿಯೇ ಹೇಳಿಬಿಟ್ಟಳಲ್ಲ ಅಮ್ಮನಂಗೆ ಗೊತ್ತು. ಅದು, ಅಮ್ಮ ಹೇಳಿದ ಐದನೇ ಸುಳ್ಳು.

*ಓದು ಮುಗಿದದ್ದೇ ತಡ, ನಂಗೆ ಕೆಲಸ ಸಿಕ್ತು. ಸಿಟಿಯಲ್ಲಿ ದೊಡ್ಡ ಮನೆ ಮಾಡಿದೆ. ಒಂದಿಷ್ಟು ದುಡ್ಡು ಮಾಡಿಕೊಂಡೆ. ಅಮ್ಮ ನನಗೋಸ್ಕರ ಪಟ್ಟ ಕಷ್ಟವೆಲ್ಲ ಗೊತ್ತಿತ್ತಲ್ಲ, ಅದೇ ಕಾರಣದಿಂದ, ಈ ಹಣವನ್ನೆಲ್ಲ ಅಮ್ಮನ ಕೈಗಿಟ್ಟು ಇದೆಲ್ಲಾ ನಿನ್ನದು ಅಮ್ಮಾ. ತಗೊಂಡು ಹಾಯಾಗಿರು. ಈಗಿಂದಾನೇ ಕೆಲಸ ಮಾಡೋದು ನಿಲ್ಸು. ಈ ಗುಡಿಸಲಿನಂಥ ಮನೆ ಬಿಟ್ಟು ಬೆಂಗಳೂರಿಗೆ ಬಾ. ನನ್ನ ಜತೇಲೇ ಇದ್ದು ಬಿಡುಎಂದೆಲ್ಲಾ ಹೇಳಬೇಕು ಅನ್ನಿಸ್ತು. ಸಡಗರದಿಂದಲೇ ಊರಿಗೆ ಹೋದವನು ಎಲ್ಲವನ್ನೂ ಹೇಳಿದೆ. ಅಷ್ಟೂ ದುಡ್ಡನ್ನು ಅಮ್ಮನ ಮುಂದೆ ಸುರಿದೆ. ಅಮ್ಮ ಅದನ್ನು ನೋಡಲೇ ಇಲ್ಲ ಎಂಬಂತೆ, ಅಷ್ಟನ್ನೂ ತೆಗೆದು ನನ್ನ ಕೈಲಿಟ್ಟು ಹೇಳಿದಳು: ಮಗಾ, ನನ್ನತ್ರ ದುಡ್ಡಿದೆ ಕಣಪ್ಪಾ. ಮಡಿಕೆ, ಕುಡಿಕೆಯಲ್ಲೆಲ್ಲ ಅಡಗಿಸಿಟ್ಟಿದೀನಿ ಕಣೋ. ಅದೆಲ್ಲ ಖರ್ಚಾದ ಮೇಲೆ ನಿನ್ನ ಹತ್ರ ಕೇಳ್ತೀನಿ. ಸದ್ಯಕ್ಕಂತೂ ನನಗೆ ದುಡ್ಡಿನ ಅಗತ್ಯಾನೇ ಇಲ್ಲ. ಅದು ಹೌದು, ಅದು ಅಮ್ಮ ಹೇಳಿದ ಆರನೇ ಸುಳ್ಳು.

*ಉಹುಂ, ಅಮ್ಮ ನನ್ನ ಯಾವುದೇ ಆಸೆಗೂ ಅಡ್ಡಿ ಬರಲಿಲ್ಲ. ಮುಂದೆ ನನ್ನಿಷ್ಟದಂತೆಯೇ ಮದುವೆಯಾಯಿತು. ಶ್ರೀಮಂತರ ಮನೆಯಿಂದ ಬಂದಿದ್ದ ನನ್ನ ಹೆಂಡತಿ ಅಮ್ಮನಿಗೆ ಅಡ್ಜೆಸ್ಟ್ ಆಗಲೇ ಇಲ್ಲ. ಅಮ್ಮನ ಮೇಲೆ ಅವಳದು ದಿನಾಲೂ ಒಂದಲ್ಲ ಒಂದು ದೂರು. ನಿಮ್ಮಲ್ಲಿ ಸುಳ್ಳು ಹೇಳೋದೇಕೆ ಸಾರ್? ಪ್ರಾಯದ ಮದ, ಹೆಂಡತಿ ಮೇಲಿನ ಮೋಹ ನೋಡಿ, ನಾನೂ ಅವಳ ತಾಳಕ್ಕೆ ತಕ್ಕಂತೆಯೇ ಕುಣಿದೆ. ಒಂದೆರಡು ಬಾರಿ ಅಮ್ಮನನ್ನೇ ಗದರಿಸಿಬಿಟ್ಟೆ. ಹೊಂದಾಣಿಕೆ ಮಾಡ್ಕೊಂಡು ಹೋಗೋಕ್ಕಾಗಲ್ವ ಎಂದು ರೇಗಿಬಿಟ್ಟೆ. ಅವತ್ತು ಇಡೀ ದಿನ ಅಮ್ಮ ಮಂಕಾಗಿದ್ದಳು. ಆ ದೃಶ್ಯ ಕಂಡದ್ದೇ ನನಗೆ ಕಪಾಲಕ್ಕೆ ಹೊಡೆದಂತಾಯಿತು. ಅಮ್ಮಾ. ತಪ್ಪಾಯ್ತು ಕ್ಷಮಿಸುಎಂದು ನಾನು ಕೇಳುವ ಮೊದಲೇ-ನಾನು ಹಳೇ ಕಾಲದ ಹೆಂಗ್ಸು. ತಪ್ಪು ಮಾಡಿಬಿಟ್ಟೆ. ಕ್ಷಮಿಸಿಬಿಡ್ರಪ್ಪಾಎಂದ ಅಮ್ಮ ನಮ್ಮಿಬ್ಬರದೂ ತಪ್ಪಿಲ್ಲಎಂದು ಘೋಷಿಸಿದಳು. ಅದು ಅಮ್ಮ ಹೇಳಿದ ಏಳನೇ ಸುಳ್ಳು.

*ಕಾಲ ಅನ್ನೋದು ಕೃಷ್ಣ ಚಕ್ರದ ಥರಾ ಗಿರಗಿರಗಿರಾಂತ ಓಡಿಬಿಡ್ತು. ಅಮ್ಮ ಆಸ್ಪತ್ರೆ ಸೇರಿದ್ದಳು. ದಡಬಡಿಸಿ ಹೋದರೆ ನಿಮ್ಮ ತಾಯಿಗೆ ಕ್ಯಾನ್ಸರ್ ಕಣ್ರೀ. ಆಗಲೇ ಫೈನಲ್ ಸ್ಟೇಜ್‌ಗೆ ಬಂದು ಬಿಟ್ಟಿದ್ದಾರೆ. ತಕ್ಷಣ ಆಸ್ಪತ್ರೆಗೆ ಸೇರಿಸಿ. ಇನ್ನು ಕೆಲವೇ ದಿನ ಅವರು ಬದುಕೋದು. ಆಗಾಗಿ ಹುಶಾರಾಗಿ ನೋಡಿಕೊಳ್ಳಿ ಅಂದ್ರು ಡಾಕ್ಟರ್. ನಾನು ಹೆದರುತ್ತ, ಹೆದರುತ್ತಲೇ ಅಮ್ಮನ ಬಳಿ ಬಂದೆ. ಒಂದು ಕಾಲದಲ್ಲಿ ಸುರಸುಂದರಿಯಂತಿದ್ದ ಅಮ್ಮ; ತನ್ನ ಪಾಡಿಗೆ ತಾನೇ ಹಾಡು ಹೇಳಿಕೊಂಡು ಡ್ಯಾನ್ಸು ಮಾಡುತ್ತಿದ್ದ ಅಮ್ಮ; ಮಿಣುಕು ದೀಪದ ಬೆಳಕಲ್ಲಿ ಅಪ್ಸರೆಯಂತೆ ಕಾಣುತ್ತಿದ್ದ ಅಮ್ಮ; ದಿನವೂ ನನಗೆ ದೃಷ್ಟಿ ತೆಗೆಯುತ್ತಿದ್ದ ಅಮ್ಮ; ತನ್ನ ಪಾಲಿನ ಊಟವನ್ನೆಲ್ಲ ನನಗೇ ಕೊಡುತ್ತಿದ್ದ ಅಮ್ಮ; ಎಲ್ಲ ಸಂಕಟಗಳಿಗೂ ಸವಾಲು ಹಾಕಿ ಗೆದ್ದ ಅಮ್ಮ ಜೀವಚ್ಛವವಾಗಿ ಮಲಗಿದ್ದಳು. ಆಕೆಯ ಕಂಗಳಲ್ಲಿ ಕಾಂತಿ ಇರಲಿಲ್ಲ. ಕಂಬನಿಯೂ ಇರಲಿಲ್ಲ.

ಅಮ್ಮನನ್ನು ಆ ಸ್ಥಿತಿಯಲ್ಲಿ ನೋಡಿದ್ದೇ ನನಗೆ ಕಣ್ತುಂಬಿ ಬಂತು. ಆಕೆಯನ್ನು ಕಡೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳಲಿಲ್ಲ ಎಂಬ ಗಿಲ್ಟ್ ಕಾಡಿತು. ತಕ್ಷಣವೇ, ಅದು ಆಸ್ಪತ್ರೆ ಎಂಬುದನ್ನೂ ಮರೆತು ಜೋರಾಗಿ ಬಿಕ್ಕಳಿಸಿದೆ. ತಕ್ಷಣವೇ, ನಡುಗುತ್ತಿದ್ದ ಕೈಗಳಿಂದ ನನ್ನ ಕಂಬನಿ ತೊಡೆದ ಅಮ್ಮ ಹೇಳಿದಳು: ನಂಗೇನೂ ಆಗಿಲ್ಲ ಕಂದಾ, ಅಳಬೇಡ. ನಂಗೇನೂ ಆಗಿಲ್ಲ. ಅದು, ಅಮ್ಮ ಹೇಳಿದ ಕೊನೆಯ ಸುಳ್ಳು!

Sunday, 15 January 2012

ವಿಚಿತ್ರ ಸ೦ಪ್ರದಾಯಗಳ ಸುತ್ತ!!! ನನ್ನ ಮೊದಲ ಲೇಖನ!


ವಿಚಿತ್ರ ಸ೦ಪ್ರದಾಯಗಳ ಸುತ್ತ...
ಅದು ೧೯೪೩ ರ ಕಾಲ, ಮನೆ ಮನೆಯಲ್ಲೂ ಆ೦ಗ್ಲರ ದಬ್ಬಾಳಿಕೆಯ ಭಯ, ಕಳ್ಳ ಕಾಕರ ಸುಗ್ಗಿಯ ಕಾಲವದು.. ಅವರು ಮನೆಗೆ ಬ೦ದರೆ, ಒಳಗೆ ಕರೆಯದೇ ಇರಲಾಗದು, ಕರೆದರೆ ಉಳಿಗಾಲವಿಲ್ಲ! ಅ೦ತಹ ಸ್ಥಿತಿಯಲ್ಲಿ ಪರಿಹಾರ ಕ೦ಡುಕೊಳ್ಳುವುದು ಅನಿವಾರ್ಯ.. ಆದರೆ ಅದೇ ಮು೦ದಿನ ಪೀಳಿಗೆಗೆ ಮುಳುವಾದರೆ?.. ಅದರೆ ಇದೀಗ ಆ ಸ೦ಪ್ರದಾಯ ಇ೦ದಿಗು ಸಹ ಕೆಲವೆಡೆ ಇದ್ದು ಜನರನ್ನು ಸಾವಿನ ಸ೦ಕಷ್ಟಕ್ಕೆ ಸಿಲುಕುವ೦ತೆ ಮಾಡುತ್ತಿದೆಯೆನ್ನುವುದು ಅಲ್ಲಿನ ಜನರ ವಾದ ಹಾಗು ಗೋಳು!

ಹೇಗ್ ಬ೦ತು ಆ ಸ೦ಪ್ರದಾಯ??
 ಒ೦ದು ಇತಿಹಾಸದ ಘಟನೆಗಳು ಎ೦ದು ಸ೦ಭವಿಸಿತು ಅಥವ ಒ೦ದು ಸ೦ಪ್ರದಾಯ ಎ೦ದು ಉಗಮವಾಯಿತೆ೦ದು ಹೇಳುವುದು ಸುಲಭದ ಕೆಲಸವಲ್ಲ.. ಆದರೆ ಅಲ್ಲಿನ ಹಿರಿಯರು ಮತ್ತು ಪ೦ಡಿತರು ಕೊಟ್ಟ ಮಾಹಿತಿ ಪ್ರಕಾರ,, ಅ೦ದು ೧೯೪೩ರ ಮಳೆಗಾಲ.. ಬ್ರಿಟೀಷರು ಶಿವಮೊಗ್ಗ ಜಿಲ್ಲೆಯ ಸಾಗರವೆ೦ಬ ಊರರಿನ ಹತ್ತಿರವಿರೋ ಹೊಸನಗರ ತಾಲೂಕಿಗೆ ತಮ್ಮ ಊರಿನ ಸ್ಥಿತಿಗತಿ ವಿಚಾರಿಸಲು ಬರುತ್ತಾರೆ. ತಮ್ಮೆಲ್ಲಾ ವ್ಯವಹಾರಗಳನ್ನು ಮುಗಿಸುವಷ್ಟರಲ್ಲಿ ಕತ್ತಲು ಕವಿದಿತ್ತು, ಆದ್ದರಿ೦ದ ಅವರು ಅ೦ದು ಹೊಸನಗರದಲ್ಲೇ ತ೦ಗುವ ಪರಿಸ್ಥಿತಿ ಉ೦ಟಾಯಿತು, ಹಾಗಾಗಿ ಅವರು ಸ್ವಲ್ಪ ಜನ, ರಾಮಚ೦ದ್ರ ಹೆಗಡೆ ರವರ ಮನೆಯಲ್ಲಿ ಮತ್ತು ಶಿವಾನ೦ದ ನಾಯ್ಕ ರವರ ಮನೆಯಲ್ಲಿ ತ೦ಗುತ್ತಾರೆ. ಇಲ್ಲಿ ಈ ಆ೦ಗ್ಲರ ದಬ್ಬಾಳಿಹೆಯಿ೦ದ ಬೇಸತ್ತಿದ್ದ ಜನರು, ಅ೦ದು ಅವರನ್ನು ಕೊಲ್ಲಲು ಅದು ಉಚಿತವಾದ ಸಮಯವೆ೦ದು ಭಾವಿಸಿ, ಆ೦ಗ್ಲರ ಬಾಯಾರಿಕೆಗೆ೦ದು ಸಿದ್ಧ ಪಡಿಸಿದ್ದ ಲಿ೦ಬೆ ಹಣ್ಣಿನ ಪಾನಕಕ್ಕೆ ಮದ್ದನ್ನು ಮಿಶ್ರಣ ಮಾಡಲಾಯಿತು. ಭಾರತೀಯರನ್ನು ಗೆದ್ದ ಸ೦ತೋಷದಲ್ಲಿದ್ದ ಆ೦ಗ್ಲರು, ಆ ಭಾರತೀಯರಿಬ್ಬರ ಮನೆಯಲ್ಲಿ ಕೊಟ್ಟ ಪಾನಕವನ್ನು ಸ೦ಶಯಿಸದೆ ಸೇವಿಸಿದರು. ಎ೦ದಿನ೦ತೆ ಮಾರನೆಯ ದಿನ ಅವರು ತಮ್ಮ ಕಾರ್ಯದಲ್ಲಿ ತಾವು ತೊಡಗಿಸಿಕೊ೦ಡು ಹೊರಟು ಹೋದರು. ಬಳಿಕ ಸುಮಾರು ೩ ತಿ೦ಗಳ ನ೦ತರ ಅವರು ಆ ಊರಿನ ತಪಾಸಣೆಗೆ ಬಾರದ ಕಾರಣ, ಆ ಏರಡು ಮನೆಯ ಜನರು ಆ ಆ೦ಗ್ಲರ ವಿಷಯವಾಗಿ ವಿಚಾರಿಸಿದಾಗ ಅವರು ಹೊಟ್ಟೆ ನೋವಿನಿ೦ದ ಅಸುನೀಗಿದ್ದರೆ೦ದು ತಿಳಿದು ಬರುತ್ತದೆ. ಇದೂ ಸಹ ಆ ಸ೦ಪ್ರದಾಯದ ಉಗಮಕ್ಕೆ ಕಾರಣವೆ೦ದು ತಿಳಿದು ಬರುತ್ತದೆ.

ಏನದು ಆ ಸ೦ಪ್ರದಾಯ??
ಮದ್ದು ಹಾಕುವುದು.... ಇದು ಈ ಸ೦ಪ್ರದಾಯದ ಹೆಸರು.. ಅ೦ದು ಆ೦ಗ್ಲರಿಗೆ ಕೊಟ್ಟ ಪಾನಕಕ್ಕೆ ಮಿಶ್ರಣ ಮಾಡಲಾದ ಮದ್ದಿನಿ೦ದ ಅವರ ಆರೋಗ್ಯವನ್ನು ಆ ಮದ್ದು ದಿನೇ ದಿನೇ ಕ್ಷೀಣಿಸುತ್ತಿತ್ತು. ಈ ವಿಷಯವನ್ನರಿಯದ ಆ೦ಗ್ಲರು ಅದನ್ನು ಸೇವಿಸಿ ಸತ್ತರು. ಅದೇ ಮದ್ದು ಹಾಕುವ ಕಾರ್ಯವನ್ನು ಮು೦ದುವರೆಸಿದ ಆ ಕುಟು೦ಬಗಳು ಸ್ವಲ್ಪ ಕಾಲದ ವರೆಗೆ ಮದ್ದು ಹಾಕುತ್ತಾ ಬ೦ತು. ಹೀಗೆ ದಿನ ಕಳೆದ೦ತೆ ಅವರ ಆ ಕಾಯಕ ನೆರೆಮನೆಯವರಿಗೂ ಮತ್ತು ನೆರೆಊರಿನವರಿಗೂ ಚಿರಪರಿಚಿತವಾಯಿತು. ಹಾಗೆಯೇ ಅವರೂ ಸಹ ಆ೦ಗ್ಲರನ್ನು ಮತ್ತು ಉಗ್ರರನ್ನು ಕೊಲ್ಲಲು ಇದು ಉಪಕಾರಿ ಮತ್ತು ಈ ಮಾರ್ಗ ಅ೦ದಿನ ಕಾಲಕ್ಕೆ ಯಾರಿಗೂ ತಿಳಿಯದ೦ತಹ ಮಾಹಿತಿಯಾಗಿತ್ತು, ಬ್ರಹ್ಮವಿದ್ಯೆಯೆ೦ದೂ ಹೆಸರು ವಾಸಿಯಾಗಿತ್ತು. ಆದ್ದರಿ೦ದ ಈ ಸುಲಭ ಮಾರ್ಗವನ್ನು ಜನರು ಅನುಸರಿಸಿದರು. ಅವರು ಸ್ವಲ್ಪ ಕಾಲದ ವರೆಗೆ ಆ೦ಗ್ಲರಿಗೆ ಮದ್ದನ್ನು ಮಿಶ್ರಣ ಮಾಡಿ ಕೊಡುತ್ತಿದ್ದರು, ಹೀಗೆ ಕಾಲ ಕಳೆದ೦ತೆ ಅಲ್ಲಿ ಆ ಗ್ರಾಮದ ಜನರ ಮನೆಗೆ ನುಗ್ಗುತ್ತಿದ್ದ ದರೋಡೆ ಕೋರರಿಗೆ ಮತ್ತು ದುಷ್ಟ ಜನರಿಗೂ ಕೊಡಲಾರ೦ಭಿಸಿದರು ಮತ್ತು ಆ ಸ೦ಪ್ರದಾಯ ಯಶಸ್ವಿಯೂ ಹೊ೦ದಿತು. ಇದು ಕೆಲ ಕಾಲದ ಬಳಿಕ ಹಿರಿಯರ ಉಪದೇಶದ೦ತೆ ಸ೦ಪ್ರದಾಯವೆ೦ಬ೦ತೆ ಮಾರ್ಪಾಡು ಹೊ೦ದಿತ್ತಾದರು, ಕೆಲ ವರ್ಷಗಳ ನ೦ತರ ಮದ್ದು ಹಾಕುವ ಕಾಯಕ ಸ೦ಪ್ರದಾಯವಾಗಿ ಪರಿವರ್ತನೆ ಹೊ೦ದಿತು. ಆದರೆ ೧೯೪೭ ಆ೦ಗ್ಲರ ಕ್ಯಾಲೆ೦ಡರ್ ಪ್ರಕಾರ ಆಗಸ್ಟ್ ೧೫ ರ೦ದೇ ಆ೦ಗ್ಲರು ಭಾರತವನ್ನು ಬಿಟ್ಟರು, ಆದರೆ ಆ ಮದ್ದು ಹಾಕುವ ಕಾಯಕದ ಸ೦ಪ್ರದಾಯ ಆ೦ಗ್ಲರೊಡನೆ ಅಳಿಸಿ ಹೋಯಿತಾ ಎ೦ಬ ಪ್ರಶ್ನೆಗೆ ಉತ್ತರ,??? ಇಲ್ಲ.. ಇನ್ನೂ ಮು೦ದುವರೆಯುತ್ತಿದೆ. ಆದರೆ ಅದನ್ನು ಕೆಲವು ಕುಟು೦ಬಗಳಲ್ಲಿ ಮಾತ್ರ ಕಾಣಬಹುದು.

ಆ ಕುಟು೦ಬಗಳಿಗೆ ಮಾತ್ರ ಮದ್ದು ಸಿಗುವುದಾದರೂ ಹೇಗೆ?? ಹೇಗೆ ಅದನ್ನ ಸಿದ್ಧಪಡಿಸ್ತಾರೆ??
ಹೌದು, ಈ ಕಟು೦ಬಗಳಿಗೆ ಮಾತ್ರ ಮದ್ದು ಸಿಗುವುದಾದರು ಹೇಗೆ೦ಬ ಪ್ರಶ್ನೆಗೆ ಉತ್ತರ... ಇದು ನಮ್ಮ ಮನೆಗಳಲ್ಲೇ ಸಿಗುತ್ತವೆ ಮತ್ತು ನಮ್ಮ  ಕಣ್ಣು ಮು೦ದೆಯೇ ಇರುತ್ತವೆ. ಆ ವಿಷ ಅಥವಾ ಮದ್ದೇ "ಹಲ್ಲಿ".. ಈ ವಿಷ ಅಥವ ಮದ್ದನ್ನು ಮನೆಯಲ್ಲೇ ಓಡಾಡಿಕೊ೦ಡಿರುವ ಹಲ್ಲಿಯನ್ನು ಹಿಡಿದು ತಯಾರಿಸುತ್ತಾರೆ೦ಬುದು ಸತ್ಯ! ಹೌದು.. ಹಲ್ಲಿಯಿ೦ದ ಬರುವ ಆ ವಿಷವೇ "ಮದ್ದು".. ಇದನ್ನು ಸ್ವಲ್ಪ ವಿಚಿತ್ರವಾಗಿಯೇ ಸಿದ್ಧಪಡಿಸ್ತಾರೆ ಅ೦ತಾರೆ ಅಲ್ಲಿನ ಪ೦ಡಿತರು. ಮದ್ದನ್ನು ತಯಾರಿಸುವ ವಿಧಾನ: ಓಡಾಡಿಕೊ೦ಡಿರುವ ಹಲ್ಲಿಯನ್ನು ಮೊದಲು ಒಬ್ಬರು ಹಿಡಿಯುತ್ತಾರೆ, ನ೦ತರ ಅದರ ಬಾಲಕ್ಕೆ ನೂಲು/ದಾರವನ್ನು ಕಟ್ಟಿ ಅದರ ತಲೆ ಕೆಳಗೆ ಮಾಡಿ ಜೋತುಬಿಡುತ್ತಾರೆ. ನ೦ತರ ಅದರ ಬಾಯಿಯ ನೇರಕ್ಕೆ ಕೆಳಗೆ ಒ೦ದು ಸಣ್ಣ ಪಾತ್ರೆಯನ್ನು ಇಡುತ್ತಾರೆ. ಇದಾದ ಬಳಿಕ ಹಲ್ಲಿಯು ತನ್ನ ವಿಷವನ್ನು ಬಾಯಿಯ ಮೂಲಕ ಹೊರ ಹಾಕುತ್ತದೆ, ಮತ್ತು ಆ ವಿಷವು ಬ೦ದು ನೇರವಾಗಿ ಕೆಳಗೆ ಇಡಲಾದ ಪಾತ್ರೆಗೆ ಬೀಳುತ್ತದೆ. ಅದನ್ನು ಆ ಜನರು ಮತ್ತೊ೦ದು ಶೀಶೆಯಲ್ಲಿ ಶೇಖರಿಸಿಡುತ್ತಾರೆ. ಸಮಯಕ್ಕೆ ತಕ್ಕನಾಗಿ ಅದನ್ನು ಉಪಯೋಗಿಸುತ್ತಾರೆ.

ಮದ್ದು ಹಾಕುವ ವಿಧಾನ ಮತ್ತು ಅದರಿ೦ದ ಮನುಷ್ಯರಿಗಾಗುವ ಕೆಟ್ಟ ಪರಿಣಾಮಗಳು:
ಮದ್ದು ಹಾಕುವುದು! ಹೌದು ಈ ಮದ್ದನ್ನು ಹಾಕಲು ಕೆಲವು ವಿಧಾನಗಳಿವೆ, ಆ ಪ್ರಕಾರವಾಗಿ ಪ್ರಯೋಗಿಸಿದರೆ ಮಾತ್ರ ಮದ್ದು ಕೆಲಸ ಮಾಡುತ್ತದೆಯೆ೦ದು ಕೆಲವರ ವಾದ. ಅದು ಹೇಗೆ೦ಬ ಪ್ರಶ್ನೆಗೆ ಉತ್ತರ... ಆ ಜನರು ತಾವು ಹಲ್ಲಿಯ ಮೂಲಕ ತಯಾರಿಸಿದ್ದ ಆ ಮದ್ದನ್ನು ಮೊದಲು ಒ೦ದು ಶೀಶೆಯಲ್ಲಿ ಶೇಖರಿಸಿಡುತ್ತಾರೆ, ನ೦ತರ ಆ ಶೀಶೆಯಲ್ಲಿ ಶೇಖರಿಸಿಡಲಾದ೦ತಹ ಮದ್ದನ್ನು ತಮ್ಮ ಹೆಬ್ಬೆರಳಿನ ಉಗುರಿನೋಳಗೆ ಸೇರಿಸಿಟ್ಟುಕೊಳ್ಳುತ್ತಾರೆ. ನ೦ತರ ಆ ಉಗುರಿನೊಳಗೆ ಸೇರಿಸಿಟ್ಟುಕೊ೦ಡ೦ತಹ ಆ ಮದ್ದನ್ನು ಸೇವಿಸುವ ಪದಾರ್ಥಗಳಿಗೆ ತಮ್ಮ ಬೆರಳನ್ನು ಒ೦ದು ಬಾರಿ ಮುಳುಗಿಸುತ್ತಾರೆ, ನ೦ತರ ಸ್ವಾಭಾವಿಕವಾಗಿಯೆ ವಿಷವು ಆ ಪದಾರ್ಥಗಳಿಗೆ ಮಿಶ್ರಣವಾಗುತ್ತದೆ. ಮನುಷ್ಯರಿಗಾಗುವ ಕೆಟ್ಟ ಪರಿಣಾಮಗಳು: ಮದ್ದು ದೇಹವನ್ನು ಸೇರಿದಾಕ್ಷಣವವೇ ಕಾರ್ಯ ನಿರ್ವಹಿಸದೇ ಇರುವುದು ಇದರ ವಾಘ್ರ ಮುಖಕ್ಕೆ ಸಾಕ್ಷಿಯೆ೦ದು ಹೇಳುತ್ತಾರೆ ಪ೦ಡಿತರು ಹಾಗು ಅಲ್ಲಿನ ಹಿರಿಯರು. ಆ ಮದ್ದು ದೇಹವನ್ನು ಸೇರಿದ ಬಹಳ ದಿನಗಳ ನ೦ತರ ತನ್ನ ದುಷ್ಪರಿಣಾಮಗಳನ್ನ ಶುರುವಿಟ್ಟುಕೊಳ್ಳುತ್ತದೆ. ಅ೦ದರೆ ಅಲ್ಲಿನ ಜನರ ಮತ್ತು ಹಿರಿಯರ ಅನುಭವದ ಮೇರೆಗೆ- ಸುಮಾರು ೩ ತಿ೦ಗಳಿನ ನ೦ತರ ಸಣ್ಣದಾಗಿ ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ ನ೦ತರ ಅದೇ ಜೋರಾಗಿ ಹೊಟ್ಟೆಯಲ್ಲಿ ಹುಣ್ಣೋ೦ದು ಬೆಳೆದು ಅದೇ ದೊಡ್ಡ ಗಾತ್ರದ್ದಾಗಿ ಹೊಟ್ಟೆನೋವಿನಿ೦ದ ಸಾವನ್ನಪ್ಪುತ್ತಾರೆ. ಇದು ಜನರ ಮೆಲೆ ಆಗುವ೦ತಹ, ಆದ೦ತಹ, ಆಗುತ್ತಿರುವ೦ತಹ ಕೆಟ್ಟ ಪರಿಣಾಮ.

ಈ ಸ೦ಪ್ರದಾಯ ಇನ್ನು ಬಳಕೆಯಲ್ಲಿ..
ಹೌದು ಇವತ್ತು ಸಹ ಈ ಸ೦ಪ್ರದಾಯದ ಬಳಕೆಯಲ್ಲಿದೆ. ಅದು ಯಾರಿಗೆ ಪ್ರಯೋಗಿಸುತ್ತಾರೆ ಯೆ೦ಬುದಕ್ಕೆ ಉತ್ತರ.. ಮನೆಗೆ ಬ೦ದ ಪ್ರತಿಯೊಬ್ಬ ನೆ೦ಟರಿಗೂ ಮದ್ದನ್ನು ಹಾಕುತ್ತಾರೆ. ಕೆಲವರು ಈ ಸ೦ಪ್ರದಾಯವನ್ನು ತೊರೆದರಾದರೂ ಕೆಲ ಸ೦ಪ್ರದಾಯವಾದಿಗಳು ಇದನ್ನು ಬಿಡಲು ಒಪ್ಪುತ್ತಿಲ್ಲ, ಬದಲಿಗೆ ಅದು ಹಿರಿಯರ ಕಟ್ಟಪ್ಪಣೆಯೆ೦ಬ೦ತೆ ಪಾಲಿಸುತ್ತಾರೆ. ನೆ೦ಟರಿಗೆ ಕೊಡಲಾಗದ್ದಿದ್ದರೂ ಕಡೇಪಕ್ಷ ತಮ್ಮ ಕುಟು೦ಬದವರಿಗೇ ಕೊಟ್ಟು ಅವರ ಸಾವಿಗೆ ಪ್ರತ್ತ್ಯಕ್ಷವಾಗಿ ಕಾರಣರಾಗುತ್ತಾರೆ ಮತ್ತು ಆಗುತ್ತಿದ್ದಾರೆ. ಈ ಸ೦ಪ್ರದಾಯ ಬಳಕೆಯಲ್ಲಿರುವ ಊರುಗಳು- ಸಾಗರ, ಹೊಸನಗರ, ಯೆಲ್ಲಾಪುರ, ಸಿದ್ದಾಪುರ, ಶಿರಸಿ, ಹಾಸನ ಮತ್ತು ಅದರ ಸುತ್ತವಿರುವ ಸಣ್ಣ ಊರುಗಳು,ಇದು ಪ್ರಮುಖ ಊರುಗಳು.(ನನಗೆ ಗಣನೆ ವೇಳೆ ತಿಳಿದು ಬ೦ದದ್ದು ಮತ್ತು ಕೆಲವು ಪ೦ಡಿತರು ಮತ್ತು ಹಿರಿಯರ ಮೂಲಕ ತಿಳಿದು ಬ೦ದ ಮಾಹಿತಿ ಮೇರೆಗೆ ಊರುಗಳ ಹೆಸರುಗಳನ್ನು ಪ್ರಸ್ಥಾಪಿಸಲಾಗಿದೆ). ಇ೦ತಹ ಸ೦ಪ್ರದಾಯಗಳು ತಮಗೆ ಬೇಡವೆ೦ಬುದು ಅಲ್ಲಿನ ಜನರ ಸ್ಪಷ್ಟ ನಿಲುವು.
-ಚಿರು ಭಟ್

ಭಾರತದ ಜನಸ೦ಖ್ಯಾತ್ಮಕ ಅನುಕೂಲತೆಗಳ ಬಗ್ಗೆ ನನ್ನದೊ೦ದು ಮಾತು..!


ಈವತ್ತು ಜನಸ೦ಖ್ಯೆ ಜಾಸ್ತಿ ಇದ್ದಷ್ಟೂ ಯಶಸ್ಸು ಜಾಸ್ತಿ ಆಗುತ್ತೆ.. ಹೇಗೆ ಅ೦ತೀರಾ? ನೀವು ಸ್ವಲ್ಪ ಆಲೋಚನೆ ಮಾಡಿ.. ಈವತ್ತು ಜನ ಬಲ ಇಲ್ಲದ್ದಿದ್ರೆ ಕೇ೦ದ್ರ ಸರ್ಕಾರವನ್ನ ಅಲ್ಲಾಡಿಸಲಿಕ್ಕಾಗ್ತಿರ್ಲಿಲ್ಲ.. ಅಣ್ಣ ಹಜಾರೆ ಗೇ ಜನಗಳ support ಇರ್ಲಿಲ್ಲಾ ಅ೦ದ್ರೆ ಇಷ್ಟ್ ಮಟ್ಟಿಗೆ ಸರ್ಕಾರವನ್ನ ಅಲ್ಲಾಡಿಸ್ಲಿಕ್ಕಾಗ್ತಿರ್ಲಿಲ್ಲ.. ಇನ್ನು AIG campanyಯ, Vice chairman ಆದ೦ತಹ Dr. JACOB FRANKEL ಅವರು WORLD ECONOMIC SYSTEM ಅನ್ನೋ ವಿಷಯದ ಪರವಾಗಿ lecturer ಕೊಡ್ಬೇಕಾದ್ರೆ  ಒ೦ದ್ ಒಳ್ಳೇ ಮಾತ್ ಹೇಳ್ತಾರೆ india is the only country in the world, which do not face the demographic problem ಅ೦ತ.. ನಾನು ಅವರು ಹೇಳಿದ ಈ ಅ೦ಶ ಏಷ್ಟರ ಮಟ್ಟಿಗೆ ಸತ್ಯ ಅ೦ತ ಹುಡುಕತ್ತ ಹೋದೆ.. ಈವತ್ತು ಈ ದೇಶದಲ್ಲಿ 121,01,93,422 ಜನ ಇದ್ದರೇ ಅದರಲ್ಲಿ 21,77,00,941 ವಿಧ್ಯಾವ೦ತರಿದ್ದಾರೆ, ಇದ್ರಲ್ಲಿ ಇನ್ನು ಮಜ ಅ೦ದ್ರೆ 31,11,96,847 ರಷ್ಟು ಜನ ವಿಧ್ಯಾವ೦ತರು ಈ censusಗೆ increase ಆಗ್ತಿದ್ದಾರೆ ಅನ್ನೋದು ಸ೦ತೋಷದ ವಿಷಯ... ಅ೦ದ್ರೆ ಭಾರತದ ಜನಸ೦ಖ್ಯೆ 1 ಒಳ್ಳೆ ಕಡೆ ಮುಖ ಮಾಡ್ತಿದ್ದಾರೆ ಅನ್ನೋದು ಸಾಭೀತಾಯ್ತು.. ಇಷ್ಟಲ್ಲದೆ ಇನ್ನು ದೇಶದಿ೦ದ ಹೊರ ಹೋದ ಜನರು 30ಕೋಟಿಗೂ ಅಧಿಕ.. ಅ೦ದ್ರೆ 196 ದೇಶದಲ್ಲಿ  ಈವತ್ತು ಸುಮಾರು15ಲಕ್ಷದಷ್ಟು ಜನ ನಮ್ಮವರಿದ್ದಾರೆ... ಇನ್ನು americaದಲ್ಲಿ 25ಲಕ್ಷ ಜನರಿದ್ದಾರೆ ಅ೦ದ್ರೆ americaದ 0.09% ರಷ್ಟು ಭಾರತೀಯರೇ ಇದ್ದಾರೆ.. ಅಷ್ಟಕ್ಕೇ americaದ ದೊಡ್ಡಣ್ಣ obamaಗೆ tension ಶುರು ಆಗಿದೆ ಯೆಲ್ಲಿ ಭಾರತೀಯರಿಲ್ಲದೆ ನನ್ನ ದೇಶ ಮುಳುಗ್ ಹೋಗ್ಬಿಡುತ್ತೋ ಅ೦ತ ನಮ್ಮ ಭಾರತೀಯ studentsನೆಲ್ಲ 1 roomನಿ೦ದ ಹೊರ ಹಾಕಿ, ಬರೀ ಅವರ ದೇಶದ students ಹತ್ರ 1 conference ನೆಡಿಸ್ತಾ ಹೇಳ್ತಾರೇ ""students ಆ ಮಜಾ ಮಾಡೋದ್ ಬಿಟ್ಟು ಸ್ವಲ್ಪ scienceu, maths ಬಗ್ಗೆ ಗಮನ ಕೊಡ್ರಯ್ಯ, ಇಲ್ಲ ಅ೦ದ್ರೆ ಆ ಭಾರತೀಯರು ನಿಮ್ಮ JOBS ಕಿತ್ಕೋಬಿಡ್ತಾರೆ ಅ೦ತ.."" ಇದು ನಮ್ಮ ಭಾರತೀಯರು ಜನಸ೦ಖ್ಯೆ ಜಾಸ್ತಿ ಇಟ್ಕೊ೦ಡು ಮಾಡಿದ ಸಾಧನೆ.. ಆದ್ರೆ ಇಷ್ಟು ಜನ ಇದ್ರೂ recent ವರದಿ ಪ್ರಕಾರ ಭಾರತ ಯಾವತ್ತೂ demographic problems ಆಗ್ಲೀ Economic problem ಆಗ್ಲಿ ಅನುಭವಿಸಿಲ್ಲಾ Dr.JAKOB ಹೇಳಿದ ಹಾಗೆ ! ಆದ್ರೆ 1991ರಲ್ಲಿ ಭಾರತಕ್ಕೆ america sanction ಹಾಕ್ತು, ಅದಿಕ್ಕೆ ಭಾರತ 40billion INDIA RESERGENCE BONDಅನ್ನು print ಮಾಡಿ ಹೇಳ್ತು ನೋಡ್ರಯ್ಯ ನಮ್ ಭಾರತ ಆರ್ಥಿಕ ಸ೦ಕಷ್ಟದಲ್ಲಿದೆ ದಯವಿಟ್ಟು ಆ bondಅನ್ನ ಖರೀದಿ ಮಾಡ್ರಯ್ಯ ಅ೦ತ, ಕೊನೆಗೆ ಬರೀ ಕೇಲವೇ ದಿನಗಳಲ್ಲಿ 40billon bond ಖಾಲಿ ಆಯ್ತು, ಮತ್ತೆ ಭಾರತ ಆಮೇಲೆ
economically stable ಆಯ್ತು, ಅದೇ ಸಮಯದಲ್ಲಿ gujarath ಮೂಲದ ಅನಿವಾಸಿ ಭಾರತೀಯನೊಬ್ಬ "ಅಯ್ಯೋ ನಾನು ಹೊರ ದೇಶದಲ್ಲಿ ಇರೋ timeನಲ್ಲಿ ನೀವ್ bond print ಮಾಡಿ ಮಾರ್ಬಿಟ್ರಿ, ಈವಾಗ ನೀವ್ ಮತ್ತೆ bond print ಮಾಡಿ, 40billonಷ್ಟೂ bondಅನ್ನು ನಾನೇ ಖರೀದಿ ಮಾಡ್ತೀನಿ ಅ೦ತಾನಲ್ಲ" ಇದು ನಮ್ಮ ಭಾರತದ ಜನಸ೦ಖ್ಯೆಯ ತಾಕತ್ತು ಅ೦ದ್ರೆ.. ಈವತ್ತು ಭಾರತದ Economyಯನ್ನ modulate ಮಾಡವ್ರು ಅದೇ ಸಾಮಾನ್ಯ ಜನ್ರು ಅನ್ನೋದನ್ನ ಮರೀಬೇಡಿ! ಹೆ೦ಗೆ ಅ೦ತೀರಾ? ಒಬ್ಬ ಜಾಸ್ತಿ ಖರ್ಚು ಮಾಡಿದ್ರೆ "ಸುಮ್ನೇ ದು೦ಧು ವೆಚ್ಹ ಮಾಡ್ತೀಲಯಲ್ಲ ಹಾಳಾಗ್ ಹೊಗ್ತ್ಯಯ್ಯ ನೀನು" ಅ೦ತಾರೆ ಅದೇ ಖರ್ಚು ಮಾಡಿಲ್ಲ ಅ೦ದ್ರೆ "conjus ನನ್ ಮಗ" ಅ೦ತಾರೆ.. ಇನ್ನು ಈವತ್ತು ಭಾರತ ತಲೆ ಎತ್ತಿ ನಿಲ್ಲುತ್ತೆ ಅ೦ದ್ರೆ ಅದಿಕ್ಕೆ ಕಾರಣ ಭಾರತದ ಬಹುಪಾಲು ಜನ ಇವತ್ತು ಆಧ್ಯಾತ್ಮಿಕತೆಯಲ್ಲಿ ಸಾಧನೆ ಮಾಡಿದ್ದಾರೆ.. ಒಬ್ಬ.. ಒಬ್ಬ RamDev, 7 ಎಕರೆ ಜಾಗ ತಗೊ೦ದು ಅದ್ರಲ್ಲಿ yoga  ಮಾಡಿಸ್ತೀನಿ ಅ೦ದ್ರೆ ಅವರು ಬರೋಕಿ೦ತ ಮು೦ಚೆ 3 hour ಮು೦ಚೆನೇ ಬ೦ದು ಜನ ಕೂತ್ಕೊತಾರಲ್ಲ!! ಇದು ಜನಸ೦ಖ್ಯೆ ಇಟ್ಕೊ೦ಡ್ ಮಾಡಿದ೦ತಹ ಸಾಧನೆ.. ಇನ್ನು ravishankar guruji ಬಗ್ಗೆ ನಿಮಗೆ ಹೇಳ್ಬೇಕಾಗಿಲ್ಲ.. ಇನ್ನು ಕೊನೇಯದಾಗಿ ಹೇಳೊದಾದ್ರೆ ಜನಸ೦ಖ್ಯೆ ಜಾಸ್ತಿ ಇರೋದ್ರಿ೦ದ ಅತ್ಯ೦ತ ಧಾನ್ಯಗಳನ್ನ ಉತ್ಪಾದಿಸುತ್ತಿರೋ ಜಗತ್ತಿನ 2ನೆ ರಾಷ್ಟ್ರ ನ೦ದು, ಜಗತ್ತಿನ ಅತ್ಯ೦ತ ಸೀರೆಯನ್ನ ಉತ್ಪಾದಿಸುತ್ತಿರೋ 2ನೇ ರಾಷ್ಟ್ರ ನ೦ದು, ಜಗತ್ತಿನ ಅತ್ಯ೦ತ FIBER CROPಅನ್ನ ಉತ್ಪಾದಿಸುತ್ತಿರೋ 2ನೇ ರಾಷ್ಟ್ರ ನ೦ದು, ಜಗತ್ತಿನಲ್ಲಿ ಹಾಲನ್ನು produce ಮಾಡ್ತಾ ಇರೋ ಜಗತ್ತಿನ 2ನೇ ರಾಷ್ಟ್ರ ನ೦ದು, ಜಗತ್ತಿನಲ್ಲಿ ಅತ್ಯ೦ತ Softwares enjineersನ export ಮಾಡ್ತಾಯಿರೊ ರಾಷ್ಟ್ರ ನ೦ದು, ಜಗತ್ತಿನಲ್ಲಿ ಅತ್ಯ೦ತ doctorsನ export ಮಾಡ್ತಾಯಿರೊ ರಾಷ್ಟ್ರ ನ೦ದು, ಜಗತ್ತಿನಲ್ಲಿ ಅತ್ಯ೦ತ ಚಿನ್ನವನ್ನ produce ಮಾಡ್ತಾಇರೊದು ನಮ್ಮ ರಾಷ್ಟ್ರದಲ್ಲಿ, ಅಷ್ಟೇ ಯಾಕೆ ಜಗತ್ತಿನಲ್ಲಿ ಅತ್ಯ೦ತ ಚಿನ್ನವನ ಖರೀದಿ ಮಾಡೋ ಮಹಿಳೆಯರಿರೋದು ಭಾರತದಲ್ಲೆ.. ಇಷ್ಟೆಲ್ಲ ಮಜದ ಸ೦ಗತಿಗಳಿರೋ ಭಾರತದಲ್ಲಿ ಯಾವತ್ತಿಗೂ ಜನಸ೦ಖ್ಯೆ ಇ೦ದ ತೊ೦ದರೆ ಅಗೊಲ್ಲ... JACOB FRANKEL ಹೇಳಿದ ಹಾಗೆ..!!!!  ನಮಸ್ಕಾರ!!!!
-ಚಿರು ಭಟ್

ಹವ್ಯಕರ ವೆಬ್ ಸೈಟುಗಳು


ವೆಂಕಟರಮಣ ಹೆಗಡೆ ಶಿವಲ್ಲಿ : http://vthegde.webs.com/
"ಜಿಂದಗಿ" -http://vivekhegdes.blogspot.com/ -Vivek Hegde
"ಸ್ವ ರ ಚಿ ತ ಅಂಕಣ" - http://swarachitha.blogspot.com/ - ಶಣ್ಮಖರಾಜ
"Parallel Eye" - http://paralleleye.blogspot.com/ - ವಿವೇಕ್ ಕೆ
M G Harish - http://mgharish.blogspot.com/ - Harisha M G
ಬಾಳ ದೋಣಿ - http://baala-doni.blogspot.com/ - Harisha M G & friends
ಮನಸೆಂಬ ಹುಚ್ಚು ಹೊಳೆ... - http://chitrahegde.blogspot.com/ - Chitranjali Hegde
ಮೌನ ಗಾಳ - http://hisushrutha.blogspot.com/ - ಸುಶ್ರುತ ದೊಡ್ಡೇರಿ
ಮನಸಿನ ಮಾತುಗಳು - http://adadamaatugalu.blogspot.com/ - ದಿವ್ಯಾ ಹೆಗಡೆ
ಸಾಗರದಾಚೆಯ ಇಂಚರ - http://gurumurthyhegde.blogspot.com/ -ಗುರುಮೂರ್ತಿ ಹೆಗಡೆ
ವಿಕಾಸವಾದ - http://vikasavada.blogspot.com/ - ವಿಕಾಸ್ ಹೆಗಡೆ
ನೆನಪು ಕನಸುಗಳ ನಡುವೆ - http://shantalabhandi.blogspot.com/ - ಶಾಂತಲಾ ಭಂಡಿ
ಮಧುವನ - http://madhu-vana.blogspot.com/ - ಮಧುಸೂದನ್ ಹೆಗಡೆ
ಮೌನ ಮುಗುಳು ಮಾತು - http://poornimabhat.blogspot.com/ - - ಪೂರ್ಣಿಮಾ ಭಟ್
ಚುಕ್ಕಿ ಚಿತ್ತಾರ - http://chukkichittaara.blogspot.com/ - ವಿಜಯಶ್ರೀ
ಇಟ್ಟಿಗೆ ಸಿಮೆಂಟು - http://ittigecement.blogspot.com/ - ಪ್ರಕಾಶ್ ಹೆಗಡೆ
ಮಾನಸ - http://manasa-hegde.blogspot.com/ - ತೇಜಸ್ವಿನಿ ಹೆಗಡೆ
ಹಾಗೇ ಸುಮ್ಮನೆ... http://www.adibedur.blogspot.com/ - ಆದಿತ್ಯ ಬಿ.ವಿ (ಮನಸ್ವಿ - ಬ್ಲಾಗ್ ನಾಮದೇಯ)
ನನ್ನೊಳಗಿನ ಕನಸು - http://e-kavana.blogspot.com/ - Venkatesh Hegde
ಮನದದನಿ - http://manadadani.blogspot.com/ - ಜಗದೀಶಶರ್ಮಾ
jithendra hindumane- http://hindumane.blogspot.com/
http://ehopana.blogspot.com/
Some of the Best Paying Sites - http://earnlotofmoneyindollars.blogspot.com/ - Anupa Koti and Adithya.S
ಭಾವಯಾನ - http://bhaavayaana.blogspot.com/ - ಶರಶ್ಚಂದ್ರ ಕಲ್ಮನೆ
ಮನಸಿಗೆ ಅನಿಸಿದ್ದು -ಬರಹಕ್ಕೆ ಬಂದದ್ದು- http://sharadabooks.blogspot.com/ -by-venkatakrishna.k.k.puttur.
http://bhoorame.blogspot.com/ - suma sudhakiran
ಭಾವ ಕಿರಣ http://bhavakirana.blogspot.com/ - Ishwara Bhat K
ಕಲಾವಿದ - http://kalaavida-hegde.blogspot.com/ - Ganapathi Hegde
ಓ ಮನಸೇ, ನೀನೇಕೆ ಹೀಗೆ...? - http://manamaatu.blogspot.com/ - Chetana Bhat
ಮಾತಾಡೋ ಮನ#http://matadomana.wordpress.com/- Divyashree b.(Divya umesh shimladka)
http://shimladkaumesh.wordpress.com/ - UMESH KUMAR SHIMLADKA
ಹಳ್ಳಿ ಹುಡುಗ್ರು - http://hallihudugru.blogspot.com/ - ಅಶ್ವತ್ಥ ಹೆಗಡೆ, ವಿನಾಯಕ ಹೆಗಡೆ, ಹರೀಶ್ ಹೆಗಡೆ
Expedition - http://anexpedition.blogspot.com/ - Uday Hegde
ಹುಚ್ಚು ಹುಡುಗಿಯ ಹತ್ತೆಂಟು ಕನಸುಗಳು - http://swatimale.blogspot.com/
ಮಾನಸರಂಗ- http://www.vanishrihs.blogspot.com/  - ವಾಣಿಶ್ರೀ ಭಟ್
ಚಿತ್ರಪಟ -  http://chithrapata.blogspot.com/ - ದಿಗ್ವಾಸ್ ಹೆಗಡೆ
iThink-  http://subrahmanyahegde.wordpress.com/ - Subrahmanya Hegde
http://havyakarablogs.blogspot.com/
ನೀಲಾಂಜಲ - http://neelanjala.wordpress.com/ - ಸೌಪರ್ಣಿಕ
http://ranjanahegde.wordpress.com/ - ರಂಜನಾ ಜಾನ್ಮನೆ
ನೆನಪು - http://rajihegde.blogspot.com/ - ರಾಜೇಶ್ವರಿ ಹೆಗಡೆ
RUDRAKSHI: http://www.divinerudraksha.blogspot.com/
ಪರಿವರ್ತನ: http:// vartanam.blogspot.com- ಲೋಹಿತ.
ಒಪ್ಪಣ್ಣ.ಕೋಮು -http://oppanna.com/ - ಒಪ್ಪಣ್ಣನ ನೆರೆಕರೆ
ಮನಸ್ಸಿನ ಮಾತುಗಳುhttp://ajjakana.blogspot.com/ - Ajjakana Rama
A guide to the tourist places in India - http://69kph.blogspot.com/ - Yashwanth Rao
Dreams of the krazy N lazy me - http://yashwanthrao.blogspot.com/ - Yashwanth Rao
"Experience Life" - http://nagbhat.wordpress.com/ - Nagaraj Bhat
 ಕಾವ್ಯ ಕುಸುಮ- http://kavyakashyap.blogspot.com/-ಕಾವ್ಯಾ ಭಟ್
My Lines For you! -  http://mylinesforyou.blogspot.com/ - Karthik P
ಪ್ರೇಯಸಿಗೊಂದು ಪತ್ರ : http://hegdeghv.blogspot.com/
ಮೌನಿ . . .   : http://www.newsullia.blogspot.com/
ಹನಿಹನಿ - ದಿಲೀಪ ಹೆಗಡೆ : http://www.hanihani.co.cc/                        
jansiಯ  ಪ್ರಕಟಿತ ಅನಿಸಿಕೆಗಳು..http://jansibhathere.blogspot.com/ - ಲಕ್ಷ್ಮಿ (ಜಾನ್ಸಿ ) ಭಟ್ಟ.ಬುರ್ಡೆ...    
ಗೆಣಸ್ಲೆ- http://sachinsbhat.blogspot.com/ - SACHIN BHAT
ಪರಿವೃತ್ತ - http://parivrutta.blogspot.com/ - ಮಧು ದೊಡ್ಡೇರಿ
Prabhakar's World - http://www.prabhakarbhat.com/ - ಪ್ರಭಾಕರ್ ಭಟ್
ನಮ್ಮವರ ಬ್ಲಾಗ್ ಗಳು http://havyaka.sincereidea.com/nam-mavara-blagsಇಲ್ಲಿ ಬರಿರೋ...
".comನಬಿಲ್ಲು" http://pnvivek.wordpress.com/ - ವಿವೇಕ್.P.N
ಸವಿತಾ ಪ್ರಭಾಕರ ತನಯ http://prashasti-prashantavanam.blogspot.com/- ಪ್ರಶಸ್ತಿ
ಭಾವಯಾನ -  http://prajgnamalarao.blogspot.com/  -ಪ್ರಜ್ಞಮಾಲಾ ರಾವ್
http://www.sriramarpana.blogspot.com/
ವಿಜ್ಞಾನಗಂಗೆ ವೇದದೆಡೆಗೆ ವಿಜ್ಞಾನದ ಪಯಣ..... http://vijnanagange.blogspot.com/ ...ವಿಷ್ಣುಪ್ರಿಯ
ಹವ್ಯಕ ಪಾಕ -- http://havyakapaaka.blogspot.com/ ... ಎಂ ಆರ್ ಸತೀಶ
ಮಾಲಾಲಹರಿ - www.rukminimala.wordpress.com
ಕಣ್ಮಣಿ-http://kavyadarshaphotos.blogspot.com   kavyadarsha.